ಗಾಯಕ ಮಹಮ್ಮದ್ ರಫಿ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ

    

Last Updated : Dec 24, 2017, 12:15 PM IST
  • ಪದ್ಮಶ್ರೀ ಮಹಮ್ಮದ್ ರಫಿ ಅಮೃತಸರ್ ಹತ್ತಿರದ ಕೋಟ್ಲಾ ಸುಲ್ತಾನ್ ಸಿಂಗ್ ನಲ್ಲಿ ಡಿಸೆಂಬರ್ 24,1924 ರಂದು ಜನಿಸಿದರು.
  • ನಾಲ್ಕು ದಶಕಗಳಲ್ಲಿ ಸುಮಾರು 7000 ಕ್ಕೂ ಅಧಿಕ ಹಾಡುಗಳನ್ನು 19 ಭಾಷೆಗಳಲ್ಲಿ ಹಾಡಿದರು.
ಗಾಯಕ ಮಹಮ್ಮದ್ ರಫಿ ಜನ್ಮದಿನಕ್ಕೆ ಗೂಗಲ್ ಡೂಡಲ್ ಗೌರವ title=

 

ಮುಂಬೈ:ಹಿಂದಿ ಚಿತ್ರರಂಗದಲ್ಲಿ ಸಂಗೀತಕ್ಕೆ ಮೊದಲ ಪ್ರಾಧಾನ್ಯತೆ ಎಂದು ಹೇಳಬಹುದು.ಈ ಸಂಗೀತದಿಂದಲೇ ಕೆಲವರು ಹಿಂದಿ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಈ ಅಜರಾಮರಗೊಳಿಸಿದ್ದಾರೆ,ಅಂತವರಲ್ಲಿ ಮಹಮ್ಮದ್ ರಫಿ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. ಬಾಲಿವುಡ್ ನಲ್ಲಿ ತಮ್ಮದೇ ಹಾಡಿನ ಶೈಲಿಯಿಂದಾಗಿ ಹಲವು ಅತ್ಯುತ್ತಮ ಹಾಡುಗಳ ಮೂಲಕ ಇಂದಿಗೂ ಕೂಡ ಚಿತ್ರ ರಸಿಕರ ಮನದಲ್ಲಿ ನೆಲೆಯೂರಿದ್ದಾರೆ.

ಪದ್ಮಶ್ರೀ ಮಹಮ್ಮದ್ ರಫಿ ಅಮೃತಸರ್ ಹತ್ತಿರದ  ಕೋಟ್ಲಾ ಸುಲ್ತಾನ್ ಸಿಂಗ್ ನಲ್ಲಿ  ಡಿಸೆಂಬರ್ 24,1924 ರಂದು ಜನಿಸಿದ ಅವರು,ತಮ್ಮ ಮೊದಲ ಗಾಯನ ಪ್ರದರ್ಶನವನ್ನು 13 ನೇ ವಯಸ್ಸಿನಲ್ಲಿ ನೀಡಿದರು,ನಂತರ ಚಿತ್ರರಂಗದ ಹಾಡುಗಾರಿಕೆಗೆ ಪಾದಾರ್ಪಣೆ ಮಾಡಿದ ಅವರು ನಾಲ್ಕು ದಶಕಗಳಲ್ಲಿ ಸುಮಾರು 7000 ಕ್ಕೂ ಅಧಿಕ ಹಾಡುಗಳನ್ನು 19 ಭಾಷೆಗಳಲ್ಲಿ ಹಾಡಿದರು.

ದುಃಖವನ್ನು ಬಿಂಬಿಸುವ ಹಾಡುಗಳಾದ ಕ್ಯಾ ಹುಹಾ  ತೆರೆ ವಾದಾ ದಿಂದ ಡಾನ್ಸ್ ನ್ನೇ ಪ್ರಧಾನವಾಗಿ ಬಿಂಬಿಸುವ  ಆಫ್ಫೋ ಖುದಾ ಹಾಡುಗಳು ಇಂದಿಗೂ ಕೂಡಾ ಚಿತ್ರ ರಸಿಕರ ಮನದಲ್ಲಿ ಗುಣುಗುವಂತಿವೆ. 

1. ಜೋ ವಾದಾ ಕಿಯಾ  ವೋ ನಿಭಾನಾ ಪಡೆಗಾ 

 

2.  ಮೈ ಜಿಂದಗಿ  ಕಾ ಸಾಥ್  ನಿಭಾತಾ ಚಲಾ ಗಯಾ 

 

3. ತುಮ್ ಜೋ ಮಿಲ್ ಗಯೇ ಹೋ  

 

4. ದೀನ್ ಧಾಲ್ ಜಾಯೆ 

5. ಆಫ್ಫೋ ಖುದಾ

 

 

 

Trending News