ನವದೆಹಲಿ: Rape Case Filed Against Jackky Bhagnani And 8 Others - ಮುಂಬೈ ನಲ್ಲಿ ರೂಪದರ್ಶಿಯೊಬ್ಬಳು ರೇಪ್ ಪ್ರಕರಣ ದಾಖಲಿಸಿದ್ದಾಳೆ. ಈ ಪ್ರಕರಣದಲ್ಲಿ ಚಿತ್ರೋದ್ಯಮದ (Bollywood Rape Case) 9 ಹೆಸರುಗಳು ಬೆಳಕಿಗೆ ಬಂದಿವೆ. ಬಾಲಿವುಡ್ ನ ಖ್ಯಾತ ಫೋಟೋಗ್ರಾಫರ್ ಸೇರಿದಂತೆ 9 ಜನರ ವಿರುದ್ಧ ನಗರದ ಬಾಂದ್ರಾ ಪೋಲಿಸ್ ಸ್ಟೇಷನ್ ನಲ್ಲಿ ಕಿರುಕುಳ, ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳದ ಪ್ರಕರಣಗಳು ದಾಖಲಾಗಿವೆ. ಈ 9 ಜನರಲ್ಲಿ ಬಾಲಿವುಡ್ ನಟ ಜಾಕಿ ಭಗ್ನಾನಿ (Jackky Bhagnani) ಹೆಸರು ಕೂಡ ಶಾಮೀಲಾಗಿದೆ. ಇದಲ್ಲದೆ 'ಥಲೈವಿ' ಚಿತ್ರ ನಿರ್ಮಾಪಕ (Thalaivi Producer) ವಿಷ್ಣು ವರ್ಧನ್ ಇಂದೂರಿ, ಕ್ವಾನ್ ಎಂಟರ್ಟೈನ್ಮೆಂಟ್ ಸಹ-ಸಂಸ್ಥಾಪಕ ಅನಿರ್ಬನ್ ದಾಸ್ ಬ್ಲಾಹ್ ಗಳ ಹೆಸರೂ ಕೂಡ ಶಾಮೀಲಾಗಿವೆ.
ನ್ಯೂಸ್ 18 ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ FIRನ ಪ್ರತಿಯಲ್ಲಿ (FIR Filed By Model)ಕೃಷ್ಣ ಕುಮಾರ್, ನಿಖಿಲ್ ಕಾಮತ್, ಶೀಲಾ ಗುಪ್ತಾ, ಅಜೀತ್ ಠಾಕೂರ್ ಹಾಗೂ ಗುರುತೇಜ್ ಸಿಂಗ್ ಹೆಸರುಗಳಿವೆ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ರೂಪದರ್ಶಿಯ ದೂರಿನ ಮೇರೆಗೆ IPC ಸೆಕ್ಷನ್ ಗಳಾದ 376, 354 ಅಡಿ ಪ್ರಕರಣ ದಾಖಲಿಸಿದ್ದಾರೆ. 28 ವರ್ಷ ವಯಸ್ಸಿನ ರೂಪದರ್ಶಿ ಪ್ರಕಾರ 2014 ರಿಂದ 2019 ರ ನಡುವೆ ಹಲವು ಬಾರಿ ವಿವಿಧ ಸಂಧರ್ಭಗಳಲ್ಲಿ ಅವಳಿಗೆ ಕಿರುಕುಳ ನೀಡಲಾಗಿದೆ ಎನ್ನಲಾಗಿದೆ. FIRನಲ್ಲಿ ಜಾಕಿ ಭಗ್ನಾನಿ (FIR Filed Bya A Model On Jackky Bhagnani) ಮುಂಬೈ ನ ಬಾಂದ್ರಾನಲ್ಲಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ನಿಖಿಲ್ ಕಾಮತ್ ಸಾಂತಾಕ್ರೂಸ್ ನ ಹೋಟೆಲ್ ಒಂದರಲ್ಲಿ ಮಾಡೆಲ್ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- ಮಾಯಾವತಿ ಮೇಲೆ ಜೋಕ್ ಮಾಡಿದ್ದಕ್ಕೆ ವಿಶ್ವಸಂಸ್ಥೆ ರಾಯಭಾರಿ ಹುದ್ದೆಯಿಂದ ನಟ ರಣದೀಪ್ ಹೂಡಾ ವಜಾ
ಹಲವು ಬಾರಿ ಅತ್ಯಾಚಾರ
ಇದಲ್ಲದೆ ರೂಪದರ್ಶಿ ತನ್ನ ಫೋಟೋಗ್ರಾಫರ್ ಕೊಲ್ಸ್ಟನ್ ಜೂಲಿಯನ್ ಮೇಲೆ ಹಲವು ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ. ಫೋಟೋಗ್ರಾಫರ್ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ರೂಪದರ್ಶಿ ಆರೋಪಿಸಿದ್ದಾಳೆ. ಮುಂಬೈನಲ್ಲಿ ನಟನಾವೃತ್ತಿ ಅರಿಸಿ ತಾನು ಬಂದಿರುವುದಾಗಿ ರೂಪದರ್ಶಿ ಹೇಳಿದ್ದಾಳೆ. ಚಿತ್ರದಲ್ಲಿ ಪಾತ್ರಕೊಡಿಸುವ ನೆಪದಲ್ಲಿ ಹಲವು ಜನರು ಅವಳ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ. ಪ್ರಸ್ತುತ ಈ ಪ್ರಕರಣದಲ್ಲಿ ಯಾರೊಬ್ಬರನ್ನು ಕೂಡ ಬಂಧಿಸಲಾಗಿಲ್ಲ.
ಇದನ್ನೂ ಓದಿ- Drugs Case: Sushant Singh Rajput ಆಪ್ತ ಸ್ನೇಹಿತ ಸಿದ್ಧಾರ್ಥ್ ಪಿಠಾಣಿ ಬಂಧಿಸಿದ NCB
ಆರೋಪಗಳನ್ನು ಅಲ್ಲಗಳೆದ ನಿರ್ಮಾಪಕ
ಇನ್ನೊಂದೆಡೆ ನಿರ್ಮಾಪಕ ಅಜೀತ್ ಠಾಕೂರ್, ಮಾಜಿ ರೂಪದರ್ಶಿ ಮಾಡಿರುವ ಆರೋಪಗಳನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ. ಮಾಡೆಲ್ ಮಾಡಿರುವ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ. ಈ ಕುರಿತು ಮಾತನಾಡಿರುವ ಅವರ ವಕೀಲ, "ಮಾಡಲಾಗಿರುವ ಎಲ್ಲಾ ಆರೋಪಗಳು ಶುದ್ಧ ತಪ್ಪು ಆರೋಪಗಳಾಗಿವೆ ಹಾಗೂ ಹೆಸರು ಹಾಳು ಮಾಡುವ ಉದ್ದೇಶವನ್ನು ಹೊಂದಿವೆ. ಇದಲ್ಲದೆ ತಮ್ಮ ಕ್ಲೈಂಟ್ ಇಮೇಜ್ ಗೆ ಧಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆ' ಎಂದಿದ್ದಾರೆ.
ಇದನ್ನೂ ಓದಿ-ಹೊಸ ಬದಲಾವಣೆ, ಹೊಸ ಮುಖಗಳೊಂದಿಗೆ ಮತ್ತೆ ಬರುತ್ತಿದೆ The Kapil Sharma Show
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.