ಮುಂಬಯಿ: ಇತ್ತೀಚಿಗೆ ಶ್ರೀದೇವಿ ಅಕಾಲಿಕ ಮರಣದಿಂದ ಅವರು ನಿರ್ವಹಿಸಬೇಕಾಗಿದ್ದ ಪಾತ್ರವು ಈ ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್ಗೆ ಒಲಿದಿದೆ.
ಈ ಸುದ್ದಿಯನ್ನು ಜಾಹ್ನವಿ ಕಪೂರ್ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ.ತಮ್ಮ ಅಮ್ಮನ ಹೃದಯಕ್ಕೆಈ ಪಾತ್ರ ತುಂಬಾ ಹತ್ತಿರವಾಗಿತ್ತು ಆದ್ದರಿಂದ ಅಂತಹ ಮಹತ್ವದ ಪಾತ್ರವನ್ನು ಮಾಡುತ್ತಿರುವ ಮಾಧುರಿ ದೀಕ್ಷಿತ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ' ಎಂದು ಬರೆದುಕೊಂಡಿದ್ದಾರೆ.
ಅಭಿಷೇಕ್ ವರ್ಮನ್ ರವರು ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಶಿದ್ದತ್' ಸಿನಿಮಾದಲ್ಲಿ ಶ್ರೀದೇವಿಯವರು ಅಭಿನಯಿಸಬೇಕಾಗಿತ್ತು.ಆದರೆ ಅವರ ನಿಧನದಿಂದ ತೆರವಾಗಿದ್ದ ಪಾತ್ರವನ್ನು ಮಾಧುರಿ ದೀಕ್ಷಿತ್ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.ಈ ಚಿತ್ರದ ತಾರಾಗಣದಲ್ಲಿ ಸಂಜಯ್ ದತ್, ಆಲಿಯಾ ಭಟ್, ವರುಣ್ ಧವನ್ ಮತ್ತು ಆದಿತ್ಯ ರಾಯ್ ಕಪೂರ್ ಮುಂತಾದವರು ಇದ್ದಾರೆ.