Mrunal Thakur: ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸೀತಾ ರಾಮಂ ಸುಂದರಿ ಬಟ್ಟೆಗಳಿಗೆ ಖರ್ಚೆಷ್ಟು ಮಾಡ್ತಾರೆ ಗೊತ್ತೇ?

Mrunal Thakur Expenses: ದಕ್ಷಿಣ ಸಿನಿರಂಗದ ಬಹುಬೇಡಿಕೆಯ ನಟಿ ಮೃಣಾಲ್‌ ಠಾಕೂರ್‌  ತಮ್ಮ ಬಟ್ಟೆಗಳಿಗೆ ಎಷ್ಟು ಖರ್ಚು ಮಾಡ್ತಾರೆ ಎಂಬುದನ್ನು ತಿಳಿದರೆ ನಿಜಕ್ಕೂ ಶಾಕ್‌ ಆಗುತ್ತೀರ. ಹಾಗಿದ್ರೇ ಈ ನಟಿ ಒಂದು ಜೊತೆ ಬಟ್ಟಗೆ ಎಷ್ಟು ಖರಚು ಮಾಡ್ತಾರೆ ತಿಳಿಯೋಣ.

Written by - Zee Kannada News Desk | Last Updated : Apr 6, 2024, 09:24 AM IST
  • ನಟಿ ಮೃಣಾಲ್‌ ಠಾಕೂರ್‌ ಬಟ್ಟೆಗಳನ್ನು ಬೇರೆಯವರಿಂದ ಎರವಲು ಪಡೆಯುತ್ತಾರೆಂದು ಹೇಳಿದ್ದಾರೆ.
  • ನಟಿ ಮೃಣಾಲ್‌ ಠಾಕೂರ್‌ ಒಂದು ಟಾಪ್‌ಗೆ 2000 ರೂ. ಕೊಟ್ಟಿದ್ದೇ ಹೆಚ್ಚು ಅಂದಿದ್ದಾರೆ.
  • ದಕ್ಷಿಣ ಸಿನಿರಂಗದ ಬೆಡಗಿ ಮೃಣಾಲ್ ಠಾಕೂರ್ ದುಡ್ಡುಯಿದೆ ಎಂದು ಹೆಚ್ಚು ಖರ್ಚು ವ್ಯರ್ಥ ಮಾಡುವ ಜನರಲ್ಲಿ ಈಕೆ ಸರಳತೆಯ ಸಂದೇಶವನ್ನು ನೀಡದ್ದಾರೆ.
Mrunal Thakur: ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸೀತಾ ರಾಮಂ ಸುಂದರಿ ಬಟ್ಟೆಗಳಿಗೆ ಖರ್ಚೆಷ್ಟು ಮಾಡ್ತಾರೆ ಗೊತ್ತೇ? title=

Mrunal Thakur Expenses For Dresses: ಸೌತ್‌ ಚಿತ್ರರಂಗದ ಬಹುಬೇಡಿಕೆಯ ನಟಿ ಮೃಣಾಲ್‌ ಠಾಕೂರ್‌ ಸಂದರ್ಶನವೊಂದರಲ್ಲಿ ತಮ್ಮ ಬಟ್ಟೆಗಳಿಗಾಗಿ ಎಷ್ಟು ಖರ್ಚು ಮಾಡ್ತಾರೆಂಬುದನ್ನು ರಿವೀಲ್‌ ಮಾಡಿದ್ದಾರೆ. ಈ ನಟಿ ತಮ್ಮ ಬಟ್ಟೆಗಳಿಗಾಗಿ 2000'' ಖರ್ಚು ಮಾಡಲು ಕೂಡ ಹಿಂದೆ ಮುಂದೆ ಯೋಚನೆ ಮಾಡುತ್ತಾರೆ ಅಂತೆ. ಈ ನಟಿ ಬಟ್ಟೆಗಳನ್ನು ಬೇರೆಯವರಿಂದ ಎರವಲು ಪಡೆಯುತ್ತಾರೆಂದು ಹೇಳಿದ್ದಾರೆ. ಈಕೆ "ನನಗೆ ಲಕ್ಷಗಳನ್ನೆಲ್ಲ ಕೊಟ್ಟು ಬಟ್ಟೆ ಖರೀದಿಸುವುದು ಹಣ ವೆಚ್ಚ, ಎಲ್ಲಕ್ಕಿಂತ ಹೆಚ್ಚಾಗಿ ಒಂದೇ ಬಟ್ಟೆಯನ್ನು ಮತ್ತೆ ಮತ್ತೆ ಧರಿಸಿ ನನಗೆ ರೂಢಿಯಿಲ್ಲ ಎಂದಿದ್ದಾರೆ. 

ನಟಿ ಮೃಣಾಲ್‌ ಠಾಕೂರ್ ಸಂದರ್ಶನದಲ್ಲಿ ಮಾತನಾಡುತ್ತಾ, "ಒಂದು ಟಾಪ್‌ಗೆ 2000 ರೂ. ಕೊಟ್ಟಿದ್ದೇ ಹೆಚ್ಚು. ವಾರ್ಡ್‌ರೋಬ್‌ನಲ್ಲಿ ಅತ್ಯುತ್ತಮವಾದ ಬಟ್ಟೆಗಳ ಸಂಗ್ರಹ ಇರಬೇಕು. ಅದು ಒಳ್ಳೆಯದು. ಹಾಗಂಥ ಸುಖಾ ಸುಮ್ಮನೆ ಬ್ರ್ಯಾಂಡೆಡ್ ಬಟ್ಟೆಯನ್ನೇ ಖರೀದಿ ಮಾಡಬೇಕು ಎಂಬ ಹುಚ್ಚು ನನಗಿಲ್ಲ. ಬಟ್ಟೆಗೆ ಖರ್ಚು ಮಾಡುವ ಹಣವನ್ನೇ ಬೇರೆಯದ್ದಕ್ಕೆ ಬಳಿಸಿಕೊಳ್ಳಬಹುದು ಅಲ್ಲವಾ. ಬಟ್ಟೆಯಿಂದ ಉಳಿತಾಯವಾದ ಹಣವನ್ನ ಊಟ ತಿಂಡಿಗಳಿಗೆ, ಸಸ್ಯಗಳನ್ನ ನೆಡಲು ಅಥವಾ ಕೃಷಿ ಭೂಮಿಯಲ್ಲಿ ಹೂಡಿಕೆ ಮಾಡಬಹುದು. ನಾನು ಅದನ್ನೇ ಮಾಡುತ್ತಿದ್ದೇನೆ" ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಖ್ಯಾತ ನಿರ್ಮಾಪಕ ರಮೇಶ್ ರೆಡ್ಡಿ ಪುತ್ರಿ ವಿವಾಹ ಆರತಕ್ಷತೆಯಲ್ಲಿ ಚಿತ್ರರಂಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗಿ

ಮೃಣಾಲ್‌ ಠಾಕೂರ್‌ ತಮ್ಮ ಬಟ್ಟೆ ಕಲೆಕ್ಷನ್‌  ಬಗ್ಗೆ ಹೇಳುತ್ತಾ "ನನ್ನ ವಾರ್ಡ್ ರೋಬ್ ನಲ್ಲಿ ಜೀನ್ಸ್ ಪ್ಯಾಂಟ್.. ಶೂ.. ಹಾಗೂ ಬ್ಯಾಗ್ ಗಳನ್ನ ನೀವು ಅತೀ ಹೆಚ್ಚು ನೋಡಬಹುದು. ಟ್ರೆಂಡ್‌ಗಳಿಗೆ ಮಣಿಯಬೇಡಿ. ಕಾಲಕ್ಕೆ ತಕ್ಕಂತೆ ಟ್ರೆಂಡ್ ಬದಲಾಗುತ್ತಿರುತ್ತೆ. ಒಂದರ್ಥದಲ್ಲಿ ಅದು ಕ್ಷಣಿಕ. ಹೀಗಾಗಿ ಕ್ಷಣಿಕ ಸುಖಕ್ಕೆ ಲಕ್ಷಾನುಘಟ್ಟಲೆ ಹಣ ವ್ಯರ್ಥ ಮಾಡುವ ಬದಲು ಅದೇ ಹಣವನ್ನ  ನಿಮ್ಮ ಶಕ್ತಿಯ ಅನುಸಾರ ಹೂಡಿಕೆ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ " ಎಂದು ಹೇಳುವುದರ ಜೊತೆಗೆ ಅಭಿಮಾನಿಗಳಿಗೆ ಸಲಹೆಯನ್ನ್ಯ ಕೂಡ ನೀಡಿದ್ದಾರೆ.

ದಕ್ಷಿಣ ಸಿನಿರಂಗದ ಬೆಡಗಿ ಮೃಣಾಲ್ ಠಾಕೂರ್ ದುಡ್ಡುಯಿದೆ ಎಂದು ಹೆಚ್ಚು ಖರ್ಚು ವ್ಯರ್ಥ ಮಾಡುವ ಜನರಲ್ಲಿ ಈಕೆ ಸರಳತೆಯ ಸಂದೇಶವನ್ನು ನೀಡದ್ದಾರೆ. ಸೀತಾ ರಾಮಂ, ಹಾಯ್‌ ನನ್ನಾ ಹಾಗೀ ಇತ್ತೀಚೆಗೆ ತೆರೆಕಂಡ ಫ್ಯಾಮಿಲಿ ಸ್ಟಾರ್ ಸಿನಿಮಾ ಮೂಲಕ ಪ್ರೇಕ್ಷಕರ ಮನಗೆದ್ದ ಈ ನಟಿ. ಸದ್ಯ ತಮಗಮ ಫ್ಯಾನ್ಸ್‌ಗೆ ದುಡ್ಡು ಗಳಿಸಿ, ಉಳಿಸಿ ಎಂಬ ಕಿವಿ ಮಾತು ಹೇಳಿದ್ದಾರೆ. ಮೃಣಾಲ್‌ tnfn ನೇರಾನೇರ ನುಡಿಯ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲವುದರೊಂದಿಗೆ ಅನೇಕರ ಹೃದಯವನ್ನು ಕೂಡ ಗೆದ್ದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News