Natural Star In Hi Nanna Pressmeet: ಕೆಲವು ವರ್ಷಗಳಿಂದ ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಅವಕಾಶವಿದ್ದು, ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗುತ್ತಿವೆ. ಆದರೆ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನವಾಗದೆ, ಇದರ ಬದಲಿಗೆ ಮೂಲ ಭಾಷೆಯಲ್ಲೇ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡಲಾಗುತ್ತಿದೆ. ಕೆಲವೊಮ್ಮೆ ಸಿನಿಮಾ ಟೈಟಲ್ ಬದಲಿಸುವುದಕ್ಕೂ ಕೆಲವರು ಹಿಂದೇಟು ಹಾಕಿದ್ದಾರೆ. ಟಾಲಿವುಡ್ ನ್ಯಾಚುರಲ್ ಸ್ಟಾರ್ ನಾನಿ ನಟನೆಯ 'ಹಾಯ್ ನಾನ್ನ' ಚಿತ್ರ ಈ ವಾರ ವಿಶ್ವದಾದ್ಯಂತ ರಿಲೀಸ್ ಆಗುತ್ತಿದ್ದು, ಈ ಸಿನಿಮಾ ಕನ್ನಡದಕ್ಕೂ ಡಬ್ ಆಗಿ ಬರ್ತಿದೆ. ಜಾಕ್ ಮಂಜು ಚಿತ್ರದ ವಿತರಣೆ ಹಕ್ಕು ಕೊಂಡುಕೊಂಡಿದ್ದು, ಸಿನಿಮಾ ಪ್ರಚಾರಕ್ಕಾಗಿ ನಟ ನಾನಿ ಬೆಂಗಳೂರಿಗೆ ಬಂದು, ಸುದ್ದಿಗೋಷ್ಠಿ ನಡೆಸಿ ಚಿತ್ರದ ಪ್ರಚಾರ ಮಾಡಲಾಗಿದೆ.
'ಹಾಯ್ ನಾನ್ನ' ಸಿನಿಮಾ ಕನ್ನಡಕ್ಕೆ ಡಬ್ ಆಗಿ ಬರುವ ವಿಚಾರ ಬಹಳ ಹಿಂದೆಯೇ ಗೊತ್ತಾಗಿದ್ದು, ಆದರೆ ಟೈಟಲ್ ಬದಲಿಸದೇ ಕನ್ನಡದಲ್ಲೂ ಅದೇ ಹೆಸರಿನಲ್ಲಿ ಚಿತ್ರ ರಿಲೀಸ್ ಮಾಡಲು ಮುಂದಾಗಿದ್ದ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು. ಕನ್ನಡಕ್ಕೆ ಡಬ್ ಆದಮೇಲೆ ಅದು ಕನ್ನಡ ಸಿನಿಮಾ ಅಲ್ವೇ, ತೆಲುಗು ಟೈಟಲ್ ಯಾಕೆ? 'ಹಾಯ್ ನಾನ್ನ' ಎನ್ನುವುದನ್ನು 'ಹಾಯ್ ಅಪ್ಪ' ಎಂದು ಬದಲಿಸಬೇಕಿಲ್ಲ ಎಂದು ಕೇಳಿದ್ದರು. ಆಗ
ಸಿನಿಮಾ ಸುದ್ದಿಗೋಷ್ಠಿಯಲ್ಲಿ ಸ್ವತಃ ನಟ ನಾನಿ ಯಾಕೆ ಕನ್ನಡದಲ್ಲಿ ಟೈಟಲ್ ಬದಲಿಸಲಿಲ್ಲ ಎನ್ನುವ ಬಗ್ಗೆ , "ನಾವು ಟೈಟಲ್ ಬದಲಿಸದಿರಲು ಸಿಂಪಲ್ ಕಾರಣ ಇದೆ. ಇವತ್ತಿನ ಕಾಲದಲ್ಲಿ ನಾಲ್ಕೈದ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾದಾಗ ನಾವು ಸಿನಿಮಾ ಹೆಸರು ಹೇಳಲು, ಸೋಶಿಯಲ್ ಮೀಡಿಯಾದಲ್ಲಿ ಬರೆಯಲು, ಟ್ರ್ಯಾಕ್ ಮಾಡಲು, ರಿವ್ಯೂ ತಿಳಿಯಲು, ಬುಕ್ಕಿಂಗ್ ತಿಳಿಯಲು ಒಂದೇ ಟೈಟಲ್ ಇದ್ದರೆ ಸುಲಭವಾಗುತ್ತದೆ. ಒಂದೇ ಒಂದೇ ಹ್ಯಾಷ್‌ಟ್ಯಾಗ್ ಹಾಕಿದರೆ ಸಾಕಾಗುತ್ತದೆ" ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:
ತೆಲುಗು ನಟ ನಾನಿ, "ದಕ್ಷಿಣದ ಎಲ್ಲಾ ಭಾಷೆಗಳಿಗೂ ಒಂದೇ ಟೈಟಲ್ ಇದ್ದರೆ ಇದು ಸುಲಭ. ಹಿಂದಿಯಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ. ಕಾರಣ ಹಾಯ್ ನಾನ್ನ ಎಂದರೆ ತಪ್ಪಾಗುತ್ತದೆ. ಹಿಂದೆಯಲ್ಲಿ ನಾನ್ನ ಎಂದರೆ ತಾತ ಎನ್ನುವ ಅರ್ಥವಿದೆ. ಉದಾಹರಣೆಗೆ ಬುಕ್‌ಮೈ ಶೋ, ಬೇರೆ ಆಪ್‌ಗಳಲ್ಲಿ ಹಾಯ್ ನಾನ್ನ ಎನ್ನುವ ಒಂದು ಪೋಸ್ಟರ್ ಹಾಕಿದರೆ ಸಾಕಾಗುತ್ತದೆ. ರಿವ್ಯೂಗಳು ತಿಳಿಯಲು ಸುಲಭವಾಗುತ್ತದೆ. ಚಿತ್ರದಲ್ಲಿ ಪುಟ್ಟ ಹುಡುಗಿ ತಂದೆಯನ್ನು ನೋಡಿ ಹಾಯ್ ನಾನ್ನ ಎನ್ನುತ್ತಿರುತ್ತಾರೆ. ಇದು ಲಿಪ್‌ಸಿಂಕ್ ಮಾಡುವುದಕ್ಕು ಸುಲಭವಾಗುತ್ತದೆ ಎಂದು ನಾವು ಅಂದುಕೊಂಡೆವು. ಇವತ್ತು ನಾವು ಎಲ್ಲವನ್ನು ಒಪ್ಪಿಕೊಳ್ಳುತ್ತಿದ್ದೇವೆ. ಭಾವನೆ ಎಲ್ಲರಿಗೂ ಅರ್ಥವಾಗುತ್ತದೆ. ಉದಾಹರಣೆಗೆ 'ಕಾಂತಾರ' ಟೈಟಲ್ ಅನ್ನು ಬೇರೆ ಭಾಷೆಗಳಲ್ಲಿ ಬದಲಿಸಲಿಲ್ಲ. ಕನ್ನಡ ಪ್ರೇಕ್ಷಕರು ಇದನ್ನೆಲ್ಲಾ ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾವು ಈ ನಿರ್ಧಾರಕ್ಕೆ ಬಂದೆವು. ನಮನ್ನು ಬೆಂಬಲಿಸಿ" ಎಂದಿದ್ದಾರೆ.
ಟಾಲಿವುಡ್ ಡೈರೆಕ್ಟರ್ ಶೌರ್ಯವ್ ನಿರ್ದೇಶನದ ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ 'ಹಾಯ್ ನಾನ್ನ' ಚಿತ್ರದಲ್ಲಿ ನಾನಿ ಜೋಡಿಯಾಗಿ ಮೃಣಾಲ್ ಠಾಕೂರ್ ನಟಿಸಿದ್ದು, ನಾನಿ ಮಗಳ ಪಾತ್ರದಲ್ಲಿ ಕಿಯಾರ ಖನ್ನಾ ಮಿಂಚಿದ್ದಾರೆ. ವಿಶೇಷ ಪಾತ್ರದಲ್ಲಿ ಶೃತಿ ಹಾಸನ್ ಸಹ ಕಾಣಿಸಿಕೊಂಡಿದ್ದು, ಈಗಾಗಲೇ ಸಿನಿಮಾ ಟ್ರೇಲರ್, ಸಾಂಗ್ಸ್ ರಿಲೀಸ್ ಆಗಿದೆ. ತಾಯಿಯ ಅನುಪಸ್ಥಿತಿಯಲ್ಲೇ ಮಹಿ, ತಂದೆ ವೀರಜ್ ಆರೈಕೆಯಲ್ಲಿ ಬೆಳೆಯುತ್ತಾಳೆ. ಈ ಹಾದಿಯಲ್ಲಿ ವೀರಜ್ ಬಾಳಲ್ಲಿ ಮತ್ತೊಬ್ಬ ಯುವತಿ ಯಶ್ನಾ ಆಗಮನವಾದಾಗ, ಆಕೆ ಮಹಿಗೂ ಹತ್ತಿರವಾಗುತ್ತಾಳೆ. ಹಾಗಾದರೆ ಮಹಿಯ ತಾಯಿ ಏನಾದಳು? ಮಹಿಗೆ ಯಶ್ನಾ ತಾಯಿಯಾಗುತ್ತಾಳಾ? ಇಲ್ವಾ? ಅನ್ನೋದು 'ಹಾಯ್ ನಾನ್ನ' ಚಿತ್ರದ ಒನ್‌ಲೈನ್ ಸ್ಟೋರಿ. ಚಿತ್ರದಲ್ಲಿ ಮೃಣಾಲ್ ಪಾತ್ರಕ್ಕೆ ಗಾಯಕಿ ಚಿನ್ಮಯಿ ವಾಯ್ಸ್ ಡಬ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.