ಹಿಂದಿ ರಾಷ್ಟ್ರ ಭಾಷೆ ಎಂದು ನಟ ಅಜಯ್ ದೇವಗನ್ ನೀಡಿರುವ ಹೇಳಿಕೆ, ಅದಕ್ಕೆ ನಟ ಸುದೀಪ್ ಕೊಟ್ಟ ಉತ್ತರ ಇತ್ತೀಚೆಗೆ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಗಾಯಕ ಸೋನು ನಿಗಮ್ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. "ಹಿಂದಿ ರಾಷ್ಟ್ರ ಭಾಷೆ ಎಂದು ಸಂವಿಧಾನದಲ್ಲಿ ಉಲ್ಲೇಖಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಹೆಚ್ಚು ಜನ ಮಾತನಾಡುವ ಭಾಷೆ ಅದಾಗಿರಬಹುದು. ಆದರೆ, ರಾಷ್ಟ್ರ ಭಾಷೆಯಲ್ಲ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಟನಿಗೆ "ಗೆಟ್ ಔಟ್ ಆಫ್ ಮೈ ಸ್ಟುಡಿಯೋ" ಎಂದ ನಿರೂಪಕಿ: ವಿಡಿಯೋ ವೈರಲ್
"ತಮಿಳು ವಿಶ್ವದ ಅತಿ ಹಳೆಯ ಭಾಷೆ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಹಳೆಯ ಭಾಷೆ ಯಾವುದು ಎಂಬ ವಿಚಾರದಲ್ಲಿ ಕೆಲವರು ಸಂಸ್ಕೃತ ಎಂದರೆ, ಇನ್ನು ಕೆಲವರು ತಮಿಳು ಎನ್ನುತ್ತಾರೆ. ಚರ್ಚೆ ಮಾಡಬೇಕಾದ ಅನೇಕ ವಿಷಯಗಳಿವೆ. ಬೇರೆ ದೇಶಗಳಿಂದಲೇ ನಾವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.
Perfect response to Ajay Devgn by Sonu Nigam: Let's not divide people further in this country, where is it written that Hindi is our national language? 👏 pic.twitter.com/hC9nHbXJHy
— Sushant Mehta (@SushantNMehta) May 2, 2022
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸೋನು ನಿಗಮ್ ಅವರು ಮಾತನಾಡುವ ಭಾಷೆಗಳ ವಿಷಯದಲ್ಲಿ ಭಾರತ ಮತ್ತು ಭಾರತೀಯರನ್ನು ವಿಭಜಿಸುವ ಪ್ರಯತ್ನಗಳನ್ನು ಟೀಕಿಸಿದ್ದಾರೆ. ಇಂಗ್ಲಿಷ್ ಕೂಡ ಈಗ ನಮ್ಮ ದೇಶದ ಸಂಸ್ಕೃತಿಯಾಗಿಬಿಟ್ಟಿದೆ. ದೇಶದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಈಗಾಗಲೇ ಚರ್ಚೆಯಾಗುತ್ತಿದೆ. ದೇಶದಲ್ಲಿ ಇನ್ನಷ್ಟು ಒಡಕು ಮೂಡಿಸದಿರೋಣ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಇವು ಸುವರ್ಣ ವಾಹಿನಿಯ ಸೂಪರ್ ಡೂಪರ್ ಧಾರಾವಾಹಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.