Prakash Raj on CAA : ಬಹುಭಾಷಾ ನಟ ಪ್ರಕಾಶ್ ರಾಜ್ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ, ಈ ಕಾಯ್ದೆ ಧರ್ಮ ವಿಂಗಡನೆ ಮಾಡುವ ಉದ್ದೇಶದಿಂದ ಮಾಡಲಾಗಿದೆ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು.. ನಟ ಪ್ರಕಾಶ್ ರಾಜ್ ಅವರು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಸ್ಟ್ಗಳಿಂದ ಸರ್ಕಾರದ ನೀತಿಯನ್ನು ಖಂಡಿಸುತ್ತಿರುತ್ತಾರೆ. ಇದೀಗ ಅವರು ಸಿಎಎ (CAA) ಜಾರಿ ಬಗ್ಗೆ ಕೇಂದ್ರದ ವಿರುದ್ದ ಅಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಆಡಳಿತ ಸರಿ ಇಲ್ಲ ಅಂತ ಬೇರೆ ಪಕ್ಷಕ್ಕೆ ಅಧಿಕಾರ ಸಿಕ್ಕಿತು. ಹತ್ತು ವರ್ಷಗಳಲ್ಲಿ ಅವರು ಹಿಂದು ಮುಸ್ಲಿಂ ಮತಾಂಧತೆ ಬಿಟ್ಟರೆ ಏನು ಮಾಡುತ್ತಿದ್ದಾರೆ ಅಂತ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ನಟಿ ʼದಿವ್ಯʼ ಸೌಂದರ್ಯಕ್ಕೆ ಮರಳುಗಾದ ಫ್ಯಾನ್ಸ್..! ಈಗೆ ಸಖತ್ ಹಾಟ್ ಗುರು
ಅಲ್ಲದೆ, ದೇಶದಲ್ಲಿ ಆರೋಗ್ಯ ವ್ಯವಸ್ಥೆ ಸರಿ ಇಲ್ಲ, ಶಾಲೆಗಳಲ್ಲಿ ಮೂಲ ಸೌಕರ್ಯವಿಲ್ಲ. ಬೆಲೆಏರಿಕೆ ಸಮಸ್ಯೆ ಎಲ್ಲರನ್ನು ಕಾಡುತ್ತಿದೆ. ರೈತರ ಸಮಸ್ಯೆ ಬಗೆಹರಿಸದೆ ಬರೀ ಮಂದಿರ ಮಂದಿರ ಎಂದರೆ ಏನ್ ಪ್ರಯೋಜನ ಅಂತ ಪ್ರಕಾಶ್ ರಾಜ್ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿ, ನಾವು ಟ್ಯಾಕ್ಸ್ ಕಟ್ಟುತ್ತಿರುವುದು ದೇಶದ ಅಭಿವೃದ್ಧಿಗಾಗಿ, ಧರ್ಮಗಳನ್ನು ವಿಂಗಡಿಸಿ ಅಂತ ಅಲ್ಲ. ಈ ರೀತಿ ಆಡಳಿತ ನಡೆಸುವವರನ್ನು ಜನರೆ ಅಧಿಕಾರದಿಂದ ಕೆಳಗೆ ಇಳಿಸುತ್ತಾರೆ ಎಂದು ರಾಜ್ ಕಿಡಿಕಾರಿದರು.
ಇದನ್ನೂ ಓದಿ:ಹುಬ್ಬಳ್ಳಿಗೆ ಬಂದಾಗ ಅಪ್ಪು ಈ ಊಟ ಮಾಡದೇ ಹೋಗುತ್ತಿರಲಿಲ್ಲ..!
ಸಿಎಎ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, CAA ಅನ್ನೋದು ಬಹಳ ದೊಡ್ಡ ತಪ್ಪು. ಧರ್ಮದ ಆಧಾರದಲ್ಲಿ ಹೇಗೆ ಪೌರತ್ವ ಕೊಡುತ್ತೀರಿ? ಮಾನವೀಯತೆ ಮೌಲ್ಯದಲ್ಲಿ ಪೌರತ್ವ ಕೊಡಬೇಕು. ನಾಗರೀಕತೆ ಒಂದು ಜಾತಿ. ಒಂದು ಧರ್ಮದವರಿಗೆ ಸಿಟಿಜನ್ ಶಿಪ್ ಇಲ್ಲ ಅನ್ನೋದು ದೊಡ್ಡ ತಪ್ಪು. ಎಲೆಕ್ಷನ್ ಇದೆ ಅನ್ನೋವಾಗ ಯಾಕೇ ಸಿಎಎ ಜಾರಿಗೆ ತಂದಿರಿ? ಅಂತ ಪ್ರಶ್ನೆ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.