Sara Tendulkar: ಮಾಡೆಲಿಂಗ್‌ ಲೋಕಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ

Sara Tendulkar: ನೈಟ್ ಡೇಟ್ ಸ್ಟೋರಿ ಮೂಲಕ ಸಂಚಲನ ಮೂಡಿಸಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್  ಪುತ್ರಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಾಡೆಲಿಂಗ್‌ ಲೋಕಕ್ಕೆ ಕಾಲಿಟ್ಟ ಸಾರಾ ತೆಂಡೂಲ್ಕರ್ ವಿಡಿಯೋ ಈಗ ವೈರಲ್ ಆಗುತ್ತಿದೆ.

Edited by - Zee Kannada News Desk | Last Updated : Dec 7, 2021, 05:14 PM IST
  • ಮಾಡೆಲಿಂಗ್‌ ಲೋಕಕ್ಕೆ ಕಾಲಿಟ್ಟ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ
  • ಇತ್ತೀಚೆಗೆ ನೈಟ್‌ಡೇಟ್ ಸ್ಟೋರಿ ಮೂಲಕ ಸಂಚಲನ ಮೂಡಿಸಿದ್ದ ಸಾರಾ
  • ಫ್ಯಾಷನ್ ಡಿಸೈನಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಸ್ಟಾರ್ ಕಿಡ್ ಸಾರಾ ತೆಂಡೂಲ್ಕರ್
Sara Tendulkar: ಮಾಡೆಲಿಂಗ್‌ ಲೋಕಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ  title=
ಸಾರಾ ತೆಂಡೂಲ್ಕರ್

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮಗಳು ಸಾರಾ ತೆಂಡೂಲ್ಕರ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ.

ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ನೈಟ್‌ಡೇಟ್ (Night Date) ಸ್ಟೋರಿ ಮೂಲಕ ಸಂಚಲನ ಮೂಡಿಸಿದ್ದ ಸಾರಾ (Sara Tendulkar), ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ಆಟದಿಂದ ಅಭಿಮಾನಿಗಳನ್ನು ಸಂಪಾದಿಸಿದರೆ, ಸಾರಾ ತಮ್ಮ ಸೌಂದರ್ಯ ಮತ್ತು ಸುಂದರ ಫೋಟೋಗಳಿಂದ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. 

ಇದನ್ನೂ ಓದಿ: Vikrant Rona Release Date: ಫೆ.24ರಂದು ಬಿಡುಗಡೆಯಾಗಲಿದೆ ಸುದೀಪ್​ ನಟನೆಯ ಬಹುನಿರೀಕ್ಷಿತ ಚಿತ್ರ

ಫ್ಯಾಷನ್ ಡಿಸೈನಿಂಗ್‌ನಲ್ಲಿ ಆಸಕ್ತಿ ಹೊಂದಿರುವ ಸ್ಟಾರ್ ಕಿಡ್ ಸಾರಾ ತೆಂಡೂಲ್ಕರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಹಂಚಿಕೊಳ್ಳುವ ಫೋಟೋಗಳು ಮತ್ತು ವಿಡಿಯೋಗಳಿಗೆ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದಾರೆ. 

ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದ ಅವರು ಇಂಗ್ಲೆಂಡ್‌ನ ಯೂನಿವರ್ಸಿಟಿ ಕಾಲೇಜ್ ಆಫ್ ಲಂಡನ್‌ನಿಂದ ಮೆಡಿಸಿನ್‌ನಲ್ಲಿ ಪದವಿ ಪಡೆದರು. ಆದರೆ, ಫ್ಯಾಶನ್ ಡಿಸೈನಿಂಗ್ ಮತ್ತು ಮಾಡೆಲಿಂಗ್ ಬಗ್ಗೆ ಒಲವು ಬೆಳೆದಿದೆ. ಆಕೆ ಶೇರ್ ಮಾಡುವ ವಿಡಿಯೋಗಳು ಮತ್ತು ಫೋಟೋಗಳು ಇದಕ್ಕೆ ಉದಾಹರಣೆ. 

ಇದೀಗ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸಾರಾ ಹೆಸರುವಾಸಿ ಬಟ್ಟೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವಂತಿದೆ. ಈ ಸಂಬಂಧ ಬಿಡುಗಡೆಯಾದ ವಿಡಿಯೋ ಇದೀಗ ವೈರಲ್ ಆಗಿದೆ. 

 

 

ಸಾರಾ ತೆಂಡೂಲ್ಕರ್ ಅವರು ಇತ್ತೀಚೆಗೆ ಕನಿಕಾ ಕಪೂರ್ (Kanika Kapoor) ಅವರೊಂದಿಗೆ ನೈಟ್ ಡೇಟ್ ಮಾಡಿದ್ದಾರೆ ಎಂಬ ಸುದ್ದಿಯಿಂದ ಸಂಚಲನ ಮೂಡಿಸಿದ್ದರು. ಸ್ವತಃ ಹಂಚಿಕೊಂಡಿದ್ದ ಫೋಟೋವೊಂದರಲ್ಲಿ ಸಾರಾ ತೆಂಡೂಲ್ಕರ್ ಒಬ್ಬ ವ್ಯಕ್ತಿಯ ಕೈ ಹಿಡಿದಿದ್ದರು. ಅವರು ಯುವ ಕ್ರಿಕೆಟಿಗ ಶುಭ್‌ಮಾನ್ ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ.

Trending News