ನವದೆಹಲಿ: ಖ್ಯಾತ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ರಾಪರ್ ಬಾದಷಾ ತಮ್ಮ ಅಭಿಮಾನಿಗಳಿಗಾಗಿ ಮ್ಯೂಸಿಕ್ ವಿಡಿಯೋವೊಂದನ್ನು ಹೊತ್ತುತಂದಿದ್ದಾರೆ. ಅವರ ಈ ಮ್ಯೂಸಿಕ್ ವಿಡಿಯೋಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಸೃಷ್ಟಿಸಲಾರಂಭಿಸಿದೆ. ಈ ಹಾಡಿನ ವಿಶೇಷತೆ ಏನೆಂದರೆ, 'ಗೆಂದಾ ಫೂಲ್' ಹಾಡಿನ ಮೂಲಕ ಜಾಕ್ವೆಲಿನ್ ಫರ್ನಾಂಡಿಸ್ ಓರ್ವ ಗಾಯಕಿಯಾಗಿ ಪದಾರ್ಪಣೆ ಮಾಡಿದ್ದಾರೆ.
ಮ್ಯೂಸಿಕ್ ವಿಡಿಯೋ ಕುರಿತು ಹೇಳುವುದಾದರೆ ಜಾಕ್ವೆಲಿನ್-ಬಾದಷಾ ಅವರ ಈ ಹಾಡಿನಲ್ಲಿ ಬಂಗಾಳಿ ಸಾಹಿತ್ಯವೂ ಕೂಡ ಕೇಳಲು ಸಿಗುತ್ತಿದೆ. ಈ ವಿಡಿಯೋದಲ್ಲಿ ಈ ಇಬ್ಬರ ಲುಕ್ ಕೂಡ ತುಂಬಾ ಗ್ಲಾಮರಸ್ ಹಾಗೂ ಸ್ಟೈಲಿಶ್ ಆಗಿ ಕಂಡು ಬರುತ್ತಿದೆ.
Here is is the new @Its_Badshah track to lift all your collective spirits!!! Dance to it! Sing to it! And omg how hot is @Asli_Jacqueline !!!! Such a cool song this is!!! https://t.co/F3iWvZfjOh ENJOY ❤️❤️❤️❤️❤️
— Karan Johar (@karanjohar) March 26, 2020
ಸ್ನೇಹಾ ಶೆಟ್ಟಿ ಕೊಹ್ಲಿ ಅವರಿಂದ ನಿರ್ದೇಶಿಸಲ್ಪಟ್ಟ ಈ ವಿಡಿಯೋದಲ್ಲಿ ಬಾದಷಾ ಒಂದು ಸಮಾರಂಭಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಸಮಾರಂಭದಲ್ಲಿ ಜಾಕ್ವೆಲಿನ್ ಶ್ವೇತ ಮತ್ತು ಕೆಂಪು ಬಣ್ಣದ ಸಾರಿ ಧರಿಸಿ ನೃತ್ಯ ಮಾಡುತ್ತಿರುತ್ತಿದ್ದಾಳೆ. ಅವಳ ನೃತ್ಯಕ್ಕೆ ಬೆರಗಾಗುವ ಬಾದಷಾ ಅವಳನ್ನು ಶ್ಲಾಘಿಸಲು ಆರಂಭಿಸುತ್ತಾರೆ. ವಿಡಿಯೋದಲ್ಲಿ ಪಾಯಲ್ ದೇವಿ ಹಾಗೂ ಜಾಕ್ವೆಲಿನ್ ಬಂಗಾಳಿ ಭಾಷೆಯಲ್ಲೂ ಕೂಡ ಹಾಡುತ್ತಿರುವುದು ಕಂಡು ಬರುತ್ತಿದೆ.
ಖ್ಯಾತ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಕೂಡ ಈ ವಿಡಿಯೋ ಅನ್ನು ತಮ್ಮ ಸಾಮಾಜಿಕ ಮಾಧ್ಯದ ಮೇಲೆ ಈ ಬಹು ನಿರೀಕ್ಷಿತ ವಿಡಿಯೋ ಹಾಡನ್ನು ಹಂಚಿಕೊಂಡಿದ್ದು, "ಬಾದಷಾ ಅವರ ನೂತನ ಹಾಡನ್ನು ಪ್ರಸ್ತುತಪಡಿಸುತ್ತಿದ್ದೇನೆ, ಈ ಹಾಡು ನಿಮ್ಮನ್ನು ಮಂತ್ರಮುಘ್ದಗೊಳಿಸಲಿದೆ. ಜಾಕ್ವೆಲಿನ್ ಈ ಹಾಡಿನಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದು, ಈ ಹಾಡನ್ನು ಒಮ್ಮೆ ನೀವು ಕೂಡ ನೋಡಿ" ಎಂದು ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಆಸಿಮ್ ರಿಯಾಜ್ ಅವರ ಮ್ಯೂಸಿಕ್ ವಿಡಿಯೋ ಬಿಡುಗಡೆಯಾಗಿತ್ತು. 'ಮೇರೆ ಅಂಗನೆ ಮೇನ್' ಹೆಸರಿನ ಈ ಹಾಡಿನಲ್ಲಿ ಜಾಕ್ವೆಲಿನ್ ಹಾಗೂ ಆಸಿಮ್ ರಿಯಾಜ್ ಅವರ ಕೆಮೆಸ್ಟ್ರಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು .