ಬೆಂಗಳೂರು: ಕನ್ನಡ ಸಿನಿಮಾಗಳು ಈಗ ಬರಿ ರಾಷ್ಟ್ರಮಟ್ಟದಲ್ಲಿ ಅಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಕೂಡ ಮಿಂಚಲು ಸಜ್ಜಾಗಿವೆ.
ಈಗಾಗಲೇ ಕನ್ನಡದ ಕೆಜಿಎಫ್ ಚಿತ್ರದ ಟ್ರೈಲರ್ ಈಗ ದೇಶಾದ್ಯಂತ ಹೊಸ ಅಲೆಯನ್ನೇ ಸೃಷ್ಟಿಸಿದೆ.ಈಗ ಕಿಚ್ಚ ಸುದೀಪ್ ಅಭಿನಯದ ಕನ್ನಡ ಮತ್ತೊಂದು ಸಿನಿಮಾ ವಿಕ್ರಾಂತ್ ರೋಣ ತನ್ನ ಫ್ಯಾಂಟಸಿ ಜಗತ್ತಿನ ನೋಟದ ಮೂಲಕ ಗಮನ ಸೆಳೆಯುತ್ತಿದೆ, ಈ ಚಿತ್ರವು ಆರಂಭದಿಂದಲೂ ತನ್ನ ಪೋಸ್ಟರ್ ಗಳ ಮೂಲಕ ಸಿನಿ ಪ್ರೇಕ್ಷಕರಲ್ಲಿ ಒಂದು ರೀತಿಯ ಕುತೂಹಲವನ್ನು ನಿರ್ಮಿಸಿತ್ತು.
ಇದನ್ನೂ ಓದಿ: ನಟ ಕಿಚ್ಚ ಸುದೀಪ್‌ಗೆ ಸಲ್ಮಾನ್ ಖಾನ್ ಸಾಥ್..! ಹೇಗಿದೆ ಗೊತ್ತಾ 'ವಿಕ್ರಾಂತ್ ರೋಣ' ಹವಾ..?
ಈಗ ಕುತೂಹಲದ ಮುಂದಿನ ಭಾಗವಾಗಿ ವಿಕ್ರಾಂತ್ ರೋಣ (Vikrant Rona) ಚಿತ್ರ ತಂಡವು ವಿವಿಧ ಭಾಷೆಗಳಲ್ಲಿ ಯುಗಾದಿ ಪ್ರಯುಕ್ತ ಟೀಸರ್ ನ್ನು ಬಿಡುಗಡೆ ಮಾಡುತ್ತಿದೆ ಅಷ್ಟೇ ಅಲ್ಲದೆ, ಚಿತ್ರದ ಬಿಡುಗಡೆ ದಿನಾಂಕವನ್ನು ಸಹಿತ ಅದು ಘೋಷಣೆ ಮಾಡಲು ಮುಂದಾಗಿದೆ. ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಈಗಾಗಲೇ ಚಿರಂಜೀವಿ, ಮೋಹನ್‌ಲಾಲ್ ಮತ್ತು ಸಿಂಬು ಮತ್ತು ಕನ್ನಡದಲ್ಲಿ ಸ್ವತಃ ಸುದೀಪ್ ಅವರು ಚಿತ್ರದ ಟೀಸರ್ ಅನ್ನು ಲಾಂಚ್ ಮಾಡಲಿದ್ದಾರೆ ಎನ್ನುವುದು ಖಚಿತವಾಗಿದೆ.
ಇನ್ನೊಂದೆಡೆಗೆ ಈಗ ಚಿತ್ರದ ಇಂಗ್ಲೀಶ್ ಟೀಸರ್ ನ್ನು ಭಾರತದ ಮಾಜಿ ಸ್ಪೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಬಿಡುಗಡೆ ಮಾಡಲಿದ್ದಾರೆ ಎನ್ನುವುದನ್ನು ಈಗ ಚಿತ್ರ ತಂಡವು ತಿಳಿಸಿದೆ.ಆ ಮೂಲಕ ಕನ್ನಡ ಚಿತ್ರವೊಂದು ಈಗ ಜಾಗತಿಕವಾಗಿ ಸದ್ದು ಮಾಡಲು ಹೊರಟಂತಾಗಿದೆ.
ಇದನ್ನೂ ಓದಿ: Vikrant Rona:ವಿಕ್ರಾಂತ್ ರೋಣ ತಂಡದಿಂದ ಬಿಗ್ ಅಪ್‌ಡೇಟ್! ಕಿಚ್ಚನ ಫ್ಯಾನ್ಸ್‌ಗೆ ಮತ್ತಷ್ಟು ವಿಶೇಷವಾಗಿರಲಿದೆ ಈ ಯುಗಾದಿ
ವಿಕ್ರಾಂತ್ ರೋಣ ಶೀಘ್ರದಲ್ಲೇ ಗ್ರ್ಯಾಂಡ್ ರಿಲೀಸ್‌ಗೆ ಸಜ್ಜಾಗುತ್ತಿರುವುದರಿಂದ, ಅದಕ್ಕೆ ಬೇಕಾಗುವ ಪ್ರಚಾರವನ್ನು ಚಿತ್ರ ತಂಡವು ಬಹಳ ಅದ್ದೂರಿಯಾಗಿಯೇ ಮಾಡಲು ಮುಂದಾಗಿದೆ.ಅನುಪ್ ಭಂಡಾರಿ ನಿರ್ದೇಶನದ ಸುದೀಪ್ ಅವರ 3D ಸಾಹಸ-ಮಿಸ್ಟರಿ ಥ್ರಿಲ್ಲರ್ ವಿಕ್ರಾಂತ್ ರೋಣ ಈ ವರ್ಷ ಬಿಡುಗಡೆಯಾಗುವ ಅತ್ಯಂತ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.ನಿರ್ಮಾಪಕರು ಕಳೆದ ವರ್ಷ ಚಲನಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದಾಗಿನಿಂದಲೂ ಪ್ರೇಕ್ಷಕರಲ್ಲಿ ಭಾರಿ ಕುತೂಹಲವನ್ನು ಸೃಷ್ಟಿಸಿದೆ.
ಈ ಚಿತ್ರದಲ್ಲಿ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಅವರು ನಟಿಸಿದರೆ, ಈ ಚಿತ್ರವನ್ನು ಜೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತದೆ, ಜಾಕ್ ಮಂಜುನಾಥ್ ಅವರ ನಿರ್ಮಾಣದ ಶಾಲಿನಿ ಆರ್ಟ್ಸ್ ಅಡಿಯಲ್ಲಿ ಮತ್ತು ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡಿದ್ದಾರೆ.ಈ ಬಹುನಿರೀಕ್ಷಿತ ಚಿತ್ರ ಪ್ರಮುಖ ಭಾರತೀಯ ಭಾಷೆಗಳಲ್ಲದೆ ವಿದೇಶಿ ಭಾಷೆಗಳಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಆರಂಭದಲ್ಲಿ ಈ ಚಿತ್ರವನ್ನು ಫೆಬ್ರವರಿಯಲ್ಲಿ ವಿಶ್ವಾದ್ಯಂತ ಬಿಡುಗಡೆ ಮಾಡಲು ಯೋಜಿಸಲಾಗಿತ್ತು, ಆದರೆ ಕೊರೊನಾದಿಂದಾಗಿ ಮುಂದೂಡಲಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.