Banana side effects : ಹೆಚ್ಚಿನ ಜನರು ತಿನ್ನಲು ಇಷ್ಟಪಡುವ ಹಣ್ಣುಗಳ ಪಟ್ಟಿಯಲ್ಲಿ ಬಾಳೆಹಣ್ಣು ಒಂದು. ಬಾಳೆಹಣ್ಣು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರವಾಗಿದ್ದು, ಇದನ್ನು ಪ್ರಪಂಚದಾದ್ಯಂತ ಜನರು ಇಷ್ಟ ಪಟ್ಟು ತಿನ್ನುತ್ತಾರೆ. ಬಾಳೆಹಣ್ಣಿನ ಆರೋಗ್ಯ ಪ್ರಯೋಜನಗಳು ಎಲ್ಲರಿಗೂ ತಿಳಿದಿದೆ. ಆದ್ರೂ, ಕೆಲವು ಜನರು ಬಾಳೆಹಣ್ಣುಗಳನ್ನು ಸೇವಿಸುವ ಬಗ್ಗೆ ಜಾಗರೂಕರಾಗಿರಬೇಕು ಅಥವಾ ಅವುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.
ಬಾಳೆಹಣ್ಣಿನ ಅಲರ್ಜಿ ಇರುವವರು : ಬಾಳೆಹಣ್ಣಿಗೆ ಅಲರ್ಜಿ ಇರುವವರು ಬಾಳೆಹಣ್ಣನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಬಾಳೆಹಣ್ಣಿನ ಅಲರ್ಜಿಗಳು ಊತ, ಉಸಿರಾಟದ ತೊಂದರೆ ಮತ್ತು ಅನಾಫಿಲ್ಯಾಕ್ಸಿಸ್ನಂತಹ ತೀವ್ರವಾದ ರೋಗಲಕ್ಷಣಗಳನ್ನು ಉಂಟುಮಾಡಬಹುದು.
ಇದನ್ನೂ ಓದಿ: ಮಧುಮೇಹ ಸೇರಿದಂತೆ ಈ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಚಿಟಿಕೆಯಲ್ಲಿ ಪರಿಹಾರ ನೀಡುತ್ತೇ ಮಾವಿನ ಎಲೆ
ಮಧುಮೇಹಿಗಳು ತಿನ್ನಬಾರದು : ಬಾಳೆಹಣ್ಣಿನಲ್ಲಿ ಸ್ವಾಭಾವಿಕವಾಗಿ ಹೆಚ್ಚಿನ ಸಕ್ಕರೆ ಅಂಶವಿರುವುದರಿಂದ ಮಧುಮೇಹ ಇರುವವರು ಇದನ್ನು ಸೇವಿಸಬಾರದು..
ಮೂತ್ರಪಿಂಡ : ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದೆ, ಇದು ಮೂತ್ರಪಿಂಡದ ತೊಂದರೆ ಇರುವವರಿಗೆ ಹಾನಿಕಾರಕವಾಗಿದೆ, ದೇಹದಿಂದ ಹೆಚ್ಚುವರಿ ಪೊಟ್ಯಾಸಿಯಮ್ ಅನ್ನು ಹೊರಹಾಕಲು ಕಷ್ಟವಾಗುತ್ತದೆ. ಅಂತಹವರು ಬಾಳೆಹಣ್ಣು ತಿನ್ನಬಾರದು.
ಮಲಬದ್ಧತೆ : ಆಗಾಗ್ಗೆ ವಾಯು ಮತ್ತು ಮಲಬದ್ಧತೆಯಿಂದ ಬಳಲುತ್ತಿರುವವರು ಬಾಳೆಹಣ್ಣು ತಿನ್ನುವುದನ್ನು ತಪ್ಪಿಸಬೇಕು. ಬಾಳೆಹಣ್ಣು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸುವ ಬದಲು ಅದನ್ನು ಉಲ್ಬಣಗೊಳಿಸುವ ಕೆಲಸ ಮಾಡುತ್ತದೆ.
ಇದನ್ನೂ ಓದಿ: ಹೈ ಕೊಲೆಸ್ಟ್ರಾಲ್ ನ ಲಕ್ಷಣಗಳಿವು! ಹೃದಯಾಘಾತಕ್ಕೂ ಮುನ್ನ ಎಚ್ಚೆತ್ತುಕೊಳ್ಳಿ
ಉಬ್ಬಸ : ಅಸ್ತಮಾ ರೋಗಿಗಳು ಬಾಳೆಹಣ್ಣನ್ನು ತಿನ್ನಬಾರದು, ಏಕೆಂದರೆ ಅವರ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಅಸ್ತಮಾ ಇರುವವರು ತಪ್ಪಾಗಿ ಬಾಳೆಹಣ್ಣು ತಿನ್ನಬಾರದು.
(ಹಕ್ಕುತ್ಯಾಗ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.