Coronavirus : ಸಸ್ಯಾಹಾರಿಗಳು, ಧೂಮಪಾನಿಗಳಿಗೆ ಕೊರೊನಾ ಕಾಟ ಕಡಿಮೆ - ಸಮೀಕ್ಷೆ

ಇದಲ್ಲದೆ, ಇಟಲಿ, ನ್ಯೂಯಾರ್ಕ್, ಚೀನಾ ಹಾಗೂ ಫ್ರಾನ್ಸ್‌ ದೇಶಗಳಲ್ಲೂ ಇದೇ ರೀತಿಯ ಅಧ್ಯಯನ ನಡೆಸಲಾಗಿದ್ದು, ಅಲ್ಲೂ ಕೂಡ ಧೂಮಪಾನಿಗಳು ಕೊರೋನಾ ವೈರಸ್ ಹಾವಳಿಗೆ ಸಿಲುಕಿರುವುದು ಕಡಿಮೆ ಎಂದು ವರದಿ ಹೇಳಿದೆ.   

Written by - Yashaswini V | Last Updated : Jan 18, 2021, 10:55 AM IST
  • ಕೌನ್ಸಿಲ್ ಆಫ್ ಸೈಟಿಂಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆಯಿಂದ ಸಮೀಕ್ಷೆ
  • ದೇಶಾದ್ಯಂತ ವಿವಿಧ 40 ಕೇಂದ್ರಗಳಲ್ಲಿ ಸಮೀಕ್ಷೆ ನಡೆಸಿ ಅಧ್ಯಯನ ವರದಿ ಪ್ರಕಟ
  • 'O' ರಕ್ತದ ಗುಂಪು ಇರುವವರಿಗೂ‌ ಸುಲಭದಲ್ಲಿ ಕೊರೋನಾ ವೈರಸ್ ಹರಡುವುದಿಲ್ಲ
Coronavirus : ಸಸ್ಯಾಹಾರಿಗಳು, ಧೂಮಪಾನಿಗಳಿಗೆ ಕೊರೊನಾ ಕಾಟ ಕಡಿಮೆ - ಸಮೀಕ್ಷೆ title=
Vegetarians, Smokers have less chance to get Corona

ನವದೆಹಲಿ : ಸಸ್ಯಾಹಾರಿಗಳು (Vegetarians) ಮತ್ತು ಧೂಮಪಾನಿಗಳನ್ನು (Smokers) ಕೊರೊನಾ ವೈರಸ್ (Coronavirus) ಕಾಡುವುದು ಕಡಿಮೆ ಎಂಬ ವಿಶಿಷ್ಟ ಮಾಹಿತಿ ಕೌನ್ಸಿಲ್ ಆಫ್ ಸೈಟಿಂಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (Council Of Scientific And Industrial Research) ಸಂಸ್ಥೆ ನಡೆಸಿದ ಅಧ್ಯಯನ ವರದಿಯಲ್ಲಿ ಬೆಳಕಿಗೆ ಬಂದಿದೆ.

ಧೂಮಪಾನಿಗಳಲ್ಲಿ ಲಂಗ್ಸ್ (Lungs)ಗೆ ಸಂಬಂಧಿಸಿದ ಕಾಯಿಲೆಗಳಿರುತ್ತವೆ ಎನ್ನುವ ಕಾರಣಕ್ಕೆ ಸಸ್ಯಾಹಾರಿಗಳಲ್ಲಿ ದೇಹಕ್ಕೆ ಅಗತ್ಯ ಇರುವ ಪ್ರೋಟೀನ್ (Protein), ವಿಟಮೀನ್ (Vitamin)ಗಳ ಕೊರತೆ ಇರುವ ಕಾರಣಕ್ಕೆ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆ ಕಾರಣಕ್ಕೆ ಅವರಿಗೆ ಸುಲಭವಾಗಿ ಕೊರೊನಾ ವೈರಸ್ ಹರಡಬಹುದು ಎಂದು ಹೇಳಲಾಗುತ್ತಿತ್ತು. ಆದರೆ ಕೌನ್ಸಿಲ್ ಆಫ್ ಸೈಟಿಂಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆ ನಡೆಸಿದ ಅಧ್ಯಯನ ವರದಿಯಲ್ಲಿ ಭಿನ್ನವಾದ ಮಾಹಿತಿ ಲಭಿಸಿದೆ.

ಕೌನ್ಸಿಲ್ ಆಫ್ ಸೈಟಿಂಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆಯು ದೇಶಾದ ವಿವಿಧ 40 ಕೇಂದ್ರಗಳಲ್ಲಿ ಸಮೀಕ್ಷೆ ನಡೆಸಿ ಈ ವರದಿಯನ್ನು ಪ್ರಕಟಿಸಿದೆ. ಈ ಅಧ್ಯಯನ ವರದಿ ಪ್ರಕಾರ, 'ಒ’ ರಕ್ತದ ಗುಂಪು ('O' Blood Group) ಇರುವವರಿಗೂ ಕೂಡ ಸುಲಭದಲ್ಲಿ ಕೊರೋನಾ ವೈರಸ್ ಹರಡುವುದಿಲ್ಲ. ‘ಬಿ’ ಮತ್ತು ‘ಎಬಿ’ ರಕ್ತದ ಗುಂಪು ('B' and 'AB' Blood Group) ಇರುವವರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿರುತ್ತದೆ ಎಂದು ಹೇಳಿದೆ.

ಇದನ್ನೂ ಓದಿ -  ಬ್ರಿಟನ್‌ನಲ್ಲಿ ಹೈ ಸ್ಪೀಡ್ Corona ಹಾವಳಿ : ಪ್ರತಿ 30 ಸೆಕೆಂಡಿಗೆ ಓರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲು

ಕೌನ್ಸಿಲ್ ಆಫ್ ಸೈಟಿಂಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್  10,427 ಜನ ವಯಸ್ಕರನ್ನು ಸಂದರ್ಶಿಸಿ ಅಧ್ಯಯನ ನಡೆಸಿದೆ. ಈ ಅಧ್ಯಯನದಲ್ಲಿ ತನ್ನದೇ ಪ್ರಯೋಗಾಲಯಗಳಲ್ಲಿ (Lab) ಕೆಲಸ ಮಾಡುವವರು ಮತ್ತು ಅವರ ಕುಟುಂಬ ಸದಸ್ಯರು ಸ್ವಇಚ್ಛೆಯಿಂದ ಪಾಲ್ಗೊಂಡಿದ್ದರು. ಈ ಪೈಕಿ ಹಲವರ ಮೇಲೆ ಸತತವಾಗಿ 6 ತಿಂಗಳ ಕಾಲ ಅಧ್ಯಯನ ನಡೆಸಿ ಅಂತಿಮವಾಗಿ ತೀರ್ಮಾನಕ್ಕೆ ಬರಲಾಗಿದೆ ಎಂದು ಹೇಳಿಕೊಂಡಿದೆ.

ವಿಶೇಷವಾಗಿ ಧೂಮಪಾನಿಗಳ ಮೇಲೆಯೂ ಅಧ್ಯಯನ ನಡೆಸಿದ ಕೌನ್ಸಿಲ್ ಆಫ್ ಸೈಟಿಂಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆಗೆ 'ಧೂಮಪಾನಿಗಳಿಗೆ ಕೊರೋನಾವೈರಸ್ (Coronavirus) ಹಾವಳಿ ಅಷ್ಟಾಗಿ ಕಾಡುವುದಿಲ್ಲ' ಎನಿಸಿದೆ.

ಇದನ್ನೂ ಓದಿ - Good News : ದೇಶವಾಸಿಗಳಿಗೆ ಶೀಘ್ರದಲ್ಲೇ ಸಿಗಲಿದೆ ಇನ್ನೂ 4 Corona vaccine

ಇದಲ್ಲದೆ, ಇಟಲಿ (Italy), ನ್ಯೂಯಾರ್ಕ್ (Newyork), ಚೀನಾ (China) ಹಾಗೂ ಫ್ರಾನ್ಸ್‌ (France) ದೇಶಗಳಲ್ಲೂ ಇದೇ ರೀತಿಯ ಅಧ್ಯಯನ ನಡೆಸಲಾಗಿದ್ದು, ಅಲ್ಲೂ ಕೂಡ ಧೂಮಪಾನಿಗಳು ಕೊರೋನಾ ವೈರಸ್ ಹಾವಳಿಗೆ ಸಿಲುಕಿರುವುದು ಕಡಿಮೆ ಎಂದು ವರದಿ ಹೇಳಿದೆ. 

ಕೌನ್ಸಿಲ್ ಆಫ್ ಸೈಟಿಂಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್  ಸಂಸ್ಥೆಯು ತನ್ನ ಅಧ್ಯಯನಕ್ಕೆ ಬೇರೆ ಬೇರೆ ವಯಸ್ಸಿನವರನ್ನು, ಬೇರೆ ಬೇರೆ ಭೌಗೋಳಿಕ ಹಿನ್ನೆಲೆ ಉಳ್ಳವರನ್ನು, ಭಿನ್ನಾವಾದ ಉದ್ಯೋಗ ಮತ್ತು ಹವ್ಯಾಸ, ಅಭ್ಯಾಸ ಉಳ್ಳವರನ್ನು ಸಂದರ್ಶಿಸಿದೆ. ಅವರೆಲ್ಲರಲ್ಲಿ ಕಂಡುಬಂದ ಭಿನ್ನವಾದ ಅಂಶಗಳನ್ನು ಪರಿಗಣಿಸಿ ಅಂತಿಮವಾಗಿ ವರದಿ ಪ್ರಕಟಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News