Ayurvedic Tips To Detox Body: ಹಬ್ಬದ ಋತು ಬಂತೆಂದರೆ ನಾವು ಡಯಟ್ ಹಾಗೂ ವ್ಯಾಯಾಮದ ಎಷ್ಟೇ ಕಾಳಜಿ ವಹಿಸಿದರೂ ಕೂಡ ಅಜಾಗರೂಕತೆ ನಡೆದೇ ಹೋಗುತ್ತದೆ. ಅದರಲ್ಲಿಯೂ ದೀಪಾವಳಿ ಬಂತೆಂದರೆ, ಕರಿದ ಹಾಗೂ ಸಿಹಿ ಪದಾರ್ಥಗಳಿಂದ ತಪ್ಪಿಸಿಕೊಳ್ಳುವುದು ಒಂದು ಮಿತಿಯ ನಂತರ ಸಾಧ್ಯವಿಲ್ಲ. ಆದರೆ, ಋತು ಯಾವುದೇ ಇರಲಿ ಆರೋಗ್ಯ ನಮ್ಮ ಪ್ರಾಥಮಿಕತೆಯಾಗಿರಬೇಕು. ಹೀಗಾಗಿ ದೀಪಾವಳಿಯ ಭೂರಿ ಭೋಜನದ ಮಜಾ ಸವಿಯುವುದರ ಜೊತೆಗೆ ನಾವು ಕಾಲಕಾಲಕ್ಕೆ ತಮ್ಮ ಶರೀರವನ್ನು ಕೂಡ ನಿರ್ವಿಷಗೊಳಿಸುವುದು ತುಂಬಾ ಮುಖ್ಯ. ಇದಕ್ಕಾಗಿ ಕೆಲ ಆರ್ಯುವೇದ ಟಿಪ್ಸ್ ಗಳು ಇಲ್ಲಿವೆ,
ಇವು ದೇಹದಲ್ಲಿನ ಟಾಕ್ಸಿಸಿಟಿಗೆ ಕಾರಣ
ನಾವು ನಮ್ಮ ದೈನಂದಿನ ಆಹಾರದಲ್ಲಿ ಸಂಸ್ಕರಿಸಿದ, ಪ್ಯಾಕ್ ಮಾಡಿದ ಮತ್ತು ಕರಿದ ಆಹಾರವನ್ನು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡಾಗ, ದೇಹದಲ್ಲಿ ವಿಷಕಾರಿ ಅಂಶಗಳು ಸಂಗ್ರಹಗೊಳ್ಳಲು ಪ್ರಾರಂಭಿಸುತ್ತವೆ. ಇದರೊಂದಿಗೆ ಆಹಾರದಲ್ಲಿ ಹೆಚ್ಚು ಸಕ್ಕರೆ, ಉಪ್ಪು, ಎಣ್ಣೆ ಮತ್ತು ಮೆಣಸಿನಕಾಯಿ ಕೂಡ ವಿಷದಂತೆ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ನೀವು ನಿಮ್ಮ ದೇಹದಿಂದ ವಿಷವನ್ನು ತೆಗೆದುಹಾಕಲು ನೀವು ಬಯಸುತ್ತಿದ್ದರೆ, ಮೊದಲನೆಯದಾಗಿ, ಇಂತಹ ಆಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿ ಅಥವಾ ಕನಿಷ್ಠ ಪ್ರಮಾಣದಲ್ಲಿ ಸೇವಿಸಿ. ಕನಿಷ್ಠ ಸಕ್ಕರೆ, ಉಪ್ಪು ಮತ್ತು ಎಣ್ಣೆಯನ್ನು ತಿನ್ನಬೇಕು ಎಂಬುದನ್ನು ನೆನಪಿನಲ್ಲಿಡಿ.
ಗಿಡಮೂಲಿಕೆ ಚಹಾ ಸೇವಿಸಿ
ದೇಹಕ್ಕೆ ಹಲವು ವಿಧದಲ್ಲಿ ಪ್ರಯೋಜನಕಾರಿಯಾದ ಹಲವಾರು ರೀತಿಯ ಗಿಡಮೂಲಿಕೆ ಚಹಾಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನು ಕುಡಿಯಿರಿ ಇದರಿಂದ ನಿಮ್ಮ ದೇಹವು ತೇವಾಂಶದಿಂದ ಕೂಡಿರುತ್ತದೆ. ಕಹಾವ ಟೀ, ಗ್ರೀನ್ ಟೀ, ತುಳಸಿ ಟೀ ಇವುಗಳ ಕೆಲವು ಉದಾಹರಣೆಗಳಾಗಿವೆ. ಅವು ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ಜೀವಕೋಶದ ವಯಸ್ಸಾಗುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ನಿಮ್ಮನ್ನು ಯಂಗ್ ಆಗಿ ಕಾಣುವಂತೆ ಮಾಡುತ್ತದೆ. ಇನ್ನೊಂದೆಡೆ ಇವು ಕೊಬ್ಬು ಕರಗಿಸುವಿಕೆಗೂ ಕೂಡ ಕಾರಣವಾಗುತ್ತವೆ ಮತ್ತು ರಕ್ತದಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾಗುವುದಿಲ್ಲ. ಇವು ದೇಹದಲ್ಲಿ ವಿಷಕಾರಿ ಪದಾರ್ಥಗಳನ್ನು ನೆಲೆಗೊಳ್ಳಲು ಅನುಮತಿಸುವುದಿಲ್ಲ. ನೀವು ದಿನಕ್ಕೆ ಎರಡು ಮೂರು ಕಪ್ ಗಿಡಮೂಲಿಕೆ ಚಹಾವನ್ನು ಕುಡಿಯಬಹುದು.
ಹಸಿರು ಸ್ಮೂಥಿ ಹೊಂದಿರಿ
ಬೆಳಗಿನ ಉಪಾಹಾರಕ್ಕಾಗಿ ನೀವು ಎಲ್ಲಾ ರೀತಿಯ ಹಸಿರು ಸ್ಮೂಥಿಗಳನ್ನು ಸೇವಿಸಬಹುದು. ಇವು ಕೇವಲ ಟೇಸ್ಟಿಯಾಗಿರದೆ ಆರೋಗ್ಯಕರವೂ ಆಗಿರುತ್ತವೆ. ನೀವು ಎಲೆ ತರಕಾರಿಗಳ ಜೊತೆಗೆ ಬಾಳೆಹಣ್ಣು, ಸೇಬು, ಸ್ಟ್ರಾಬೆರಿ, ಕ್ಯಾರೆಟ್, ಬೀಟ್ಗೆಡ್ಡೆ, ಸೌತೆಕಾಯಿ ಮುಂತಾದ ಹಣ್ಣುಗಳನ್ನು ಸೇರಿಸಬಹುದು. ಇವು ನಿಮ್ಮ ಪಾನೀಯವನ್ನು ಆಂಟಿ ಆಕ್ಸಿಡೆಂಟ್‌ಗಳಿಂದ ತುಂಬಿಸುತ್ತವೆ. ಇದರೊಂದಿಗೆ, ನಿಮ್ಮನ್ನು ನೀವು ಹೈಡ್ರೇಟ್ ಆಗಿ ಇರಿಸಲು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ನೀರಿಗಿಂತ ನಿಮ್ಮ ಬೆಸ್ಟ್ ಫ್ರೆಂಡ್ ಯಾರೂ ಇಲ್ಲ. ಇದು ನೈಸರ್ಗಿಕ ಮತ್ತು ಸರಳ ರೀತಿಯಲ್ಲಿ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ.
ಇದನ್ನೂ ಓದಿ-Weight Loss: ಹೆಚ್ಚಾಗಿರುವ ತೂಕ ಇಳಿಯುತ್ತಿಲ್ಲವೇ? ಈ ಮೂರು ಪವರ್ಫುಲ್ ಡ್ರಿಂಕ್ ಗಳನ್ನು ಟ್ರೈ ಮಾಡಿ ನೋಡಿ
ವ್ಯಾಯಾಮಗಳನ್ನು ಬಿಟ್ಟುಬಿಡಬೇಡಿ
ಹಬ್ಬದ ಸಮಯದಲ್ಲಿ ದಿನಚರಿ ಅನುಸರಿಸುವುದು ಸುಲಭವಲ್ಲ, ಆದರೆ ವ್ಯಾಯಾಮಕ್ಕಾಗಿ ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡಲು ಪ್ರಯತ್ನಿಸಿ. ಇದರಿಂದ ಉಂಟಾಗುವ ಬೆವರು ಎಲ್ಲಾ ರೀತಿಯ ತ್ವಚೆಯ ಸಮಸ್ಯೆಗಳಿಂದ ಮುಕ್ತಿ ಕೊಡುತ್ತದೆ. ಬೆವರು ನಿಮ್ಮ ಚರ್ಮದಿಂದ ವಿಷವನ್ನು ಹೊರಹಾಕುತ್ತದೆ. ವಿಧಾನ ಏನೇ ಇರಲಿ, ವ್ಯಾಯಾಮ ಮಾಡಿ.
ಇದನ್ನೂ ಓದಿ-Diabetes: ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಆಯುರ್ವೇದ ಗಿಡಮೂಲಿಕೆಯಿಂದ ತಯಾರಿಸಲಾದ ಈ ಚೂರ್ಣ ಒಮ್ಮೆ ಟ್ರೈ ಮಾಡಿ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ