ನವದೆಹಲಿ : ಮಕ್ಕಳ ದೈಹಿಕ ಬೆಳವಣಿಗೆ ಅವರ ಆರೋಗ್ಯವನ್ನು ಅವಲಂಬಿಸಿರುತ್ತದೆ. ಮಕ್ಕಳ ಮೂಳೆಗಳು ಬಲಾಢ್ಯವಾಗಿರುವುದು ಬಹಳ ಮುಖ್ಯ. ಮೂಳೆಗಳು ಗಟ್ಟಿಯಾಗಿದ್ದರೆ ಅವರ ದೈಹಿಕ ಬೆಳವಣಿಗೆ ಸುಲಭವಾಗುತ್ತದೆ. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಸರಿಯಾದ ಸಮಯಕ್ಕೆ ಸರಿಯಾದ ಆಹಾರ ನೀಡುವುದು ಬಹಳ ಮುಖ್ಯ. ಮಕ್ಕಳ ಮೂಳೆ ಸದೃಢವಾಗಿರಬೇಕಾದರೆ, ಮಕ್ಕಳಿಗೆ ನಿತ್ಯ ಮಜ್ಜಿಗೆ ನೀಡಬೇಕು (Benefits of buttermilk). ಮಜ್ಜಿಗೆಯನ್ನು ಸೇವಿಸುವುದರಿಂದ ಮಕ್ಕಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತಾರೆ.
ಮಜ್ಜಿಗೆಯ ಪ್ರಯೋಜನಗಳು:
ಮೂಳೆಗಳು ಗಟ್ಟಿಯಾಗುತ್ತವೆ :
ಮಜ್ಜಿಗೆಯು (Buttermilk) ಒಂದು ಡೈರಿ ಉತ್ಪನ್ನವಾಗಿದ್ದು, ಇದನ್ನು ಮೊಸರಿನಿಂದ ತಯಾರಿಸಲಾಗುತ್ತದೆ. ಇದರಲ್ಲಿ ಹೇರಳವಾದ ಕ್ಯಾಲ್ಸಿಯಂ ಇರುತ್ತದೆ. ಮಕ್ಕಳು ಹಾಲು (Milk) ಕುಡಿಯಲು ಹಿಂಜರಿಯುತ್ತಾರೆ. ಹಾಲು ಕುಡಿಯಲು ಹಿಂಜರಿಯುವ ಮಕ್ಕಳಿಗೆ ಮಜ್ಜಿಗೆ ನೀಡಬೇಕು. ಮಜ್ಜಿಗೆ ಕುಡಿಯಲು ಕೂಡಾ ರುಚಿಯಾಗಿರುತ್ತದೆ. ಹಾಗಾಗಿ ಮಕ್ಕಳು ಇದನ್ನು ಸುಲಭವಾಗಿ ಸೇವಿಸುತ್ತಾರೆ. ಮಜ್ಜಿಗೆಯಲ್ಲಿರುವ ಕ್ಯಾಲ್ಸಿಯಂ ಮಕ್ಕಳ ಮೂಳೆಗಳನ್ನು ಬಲಪಡಿಸುತ್ತದೆ. ಇದು ಅವರ ದೈಹಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: Benefits of Dry Ginger : ಒಣ ಶುಂಠಿ ಅನೇಕ ರೋಗಗಳಿಗೆ ಮನೆ ಮದ್ದು : ಇಲ್ಲಿದೆ ನೋಡಿ ಅದ್ಭುತ ಪ್ರಯೋಜನಗಳು
ಮಕ್ಕಳಿಗೆ ಮಜ್ಜಿಗೆ ನೀಡುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ :
ಸಾಮಾನ್ಯವಾಗಿ ಮಕ್ಕಳಿಗೆ ಆಗಾಗ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತಿರುತ್ತದೆ. ಇದನ್ನು ನಿವಾರಿಸಲು ಮಜ್ಜಿಗೆ ಪ್ರಯೋಜನಕಾರಿ. ಮಜ್ಜಿಗೆ ಸೇವನೆಯು ಜೀರ್ಣಕ್ರಿಯೆಯನ್ನು (Digestion) ಸುಧಾರಿಸುತ್ತದೆ ಮತ್ತು ಮಲಬದ್ಧತೆ, ಹೊಟ್ಟೆ ನೋವು ಮತ್ತು ಗ್ಯಾಸ್ ನಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಮಜ್ಜಿಗೆ ಡಿ ಹೈಡ್ರೇಶನ್ ತಡೆಯುತ್ತದೆ :
ದಿನವಿಡೀ ಆಟವಾಡುವುದರಿಂದ, ಕುಣಿದಾಡುವುದರಿಂದ, ಮಕ್ಕಳ ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಈ ಕಾರಣದಿಂದಾಗಿ ಅವರಿಗೆ ಆಗಾಗ ಸುಸ್ತು ಕಾಣಿಸುತ್ತದೆ. ಮಕ್ಕಳಿಗೆ ಮಜ್ಜಿಗೆಯನ್ನು ನೀಡುವುದರಿಂದ, ಅವರ ದೇಹದಲ್ಲಿ ನೀರಿನ ಕೊರತೆ (dehydration) ಎದುರಾಗುವುದಿಲ್ಲ.
ಇದನ್ನೂ ಓದಿ: Weight Loss Tips: ರಾತ್ರಿ ಮಲಗುವ ಮುನ್ನ ಈ 3 ವಸ್ತುಗಳನ್ನು ಸೇವಿಸಿ, ತೂಕ ಇಳಿಸಿ
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ :
ಮಜ್ಜಿಗೆಯಲ್ಲಿ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿರುತ್ತವೆ. ಇದು ಮಕ್ಕಳ ರೋಗನಿರೋಧಕ ಶಕ್ತಿಯನ್ನು (immunity) ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರ ಹೊರತಾಗಿ, ವಿಟಮಿನ್ ಎ, ಸಿ, ಬಿ ಮತ್ತು ವಿಟಮಿನ್-ಕೆ ನಂತಹ ಅನೇಕ ಪೋಷಕಾಂಶಗಳು ಮಜ್ಜಿಗೆಯೊಳಗೆ ಕಂಡುಬರುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ