ಇನ್ಮುಂದೆ ತಟ್ಟೆ ಬದಲು ಬಾಳೆ ಎಲೆಯಲ್ಲಿ ಊಟ ಮಾಡಿ- ಈ ಮಾರಕ ಕಾಯಿಲೆಗೆ ಸಿಗುತ್ತೆ ಪರ್ಮನೆಂಟ್ ಪರಿಹಾರ!

Benefits Of Eating On A Banana Leaf: ಬಾಳೆ ಎಲೆಗಳು ಪಾಲಿಫಿನಾಲ್ಸ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಯಂತಹ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಹೀಗಾಗಿ ಬಾಳೆ ಎಲೆಯ ಮೇಲೆ ಆಹಾರವನ್ನು ಇರಿಸಿದಾಗ, ಈ ಕೆಲವು ಪೋಷಕಾಂಶಗಳು ಆಹಾರಕ್ಕೆ ಸೇರಿಕೊಂಡು ಪೌಷ್ಟಿಕಾಂಶದ ಮೂಲಕ ನಮ್ಮ ದೇಹವನ್ನು ಸೇರುತ್ತವೆ.

Written by - Bhavishya Shetty | Last Updated : Nov 5, 2023, 08:59 PM IST
    • ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಆಗುವ ಪ್ರಯೋಜನಗಳು
    • ಬಾಳೆ ಎಲೆಗಳನ್ನು ಅಡುಗೆ ಮಾಡಲು ಮತ್ತು ಆಹಾರವನ್ನು ಬಡಿಸಲು ಬಳಸಲಾಗುತ್ತದೆ
    • ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ
ಇನ್ಮುಂದೆ ತಟ್ಟೆ ಬದಲು ಬಾಳೆ ಎಲೆಯಲ್ಲಿ ಊಟ ಮಾಡಿ- ಈ ಮಾರಕ ಕಾಯಿಲೆಗೆ ಸಿಗುತ್ತೆ ಪರ್ಮನೆಂಟ್ ಪರಿಹಾರ!  title=
health benefits of banana leaf meal

What Are The Benefits Of Eating On A Banana Leaf: ಭಾರತದ ಅನೇಕ ಭಾಗಗಳಲ್ಲಿ ಬಾಳೆ ಎಲೆಗಳನ್ನು ಅಡುಗೆ ಮಾಡಲು ಮತ್ತು ಆಹಾರವನ್ನು ಬಡಿಸಲು ಬಳಸಲಾಗುತ್ತದೆ. ವಿಶೇಷವಾಗಿ ದಕ್ಷಿಣ ಭಾರತ ಅಥವಾ ದಕ್ಷಿಣ ಏಷ್ಯಾದ ಭಾಗಗಳಲ್ಲಿ ಬಳಕೆ ಮಾಡಲಾಗುತ್ತದೆ.ಈ ಸಾಂಪ್ರದಾಯಿಕ ವಿಧಾನವನ್ನು ಶತಮಾನಗಳಿಂದ ಅಳವಡಿಸಲಾಗಿದ್ದಾದರೂ ಅವುಗಳನ್ನೇ ಏಕೆ ಬಳಕೆ ಮಾಡುತ್ತೇವೆ ಎಂಬುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಹೀಗಾಗಿ ಇದರ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ:ಯಾವ್ಯಾವ ಆಟಗಾರರು ತಮ್ಮ ಹುಟ್ಟುಹಬ್ಬದಂದು ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ ಗೊತ್ತಾ?

ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಆಗುವ ಪ್ರಯೋಜನಗಳು:

1. ಪೌಷ್ಟಿಕಾಂಶದ ಮೌಲ್ಯ:

ಬಾಳೆ ಎಲೆಗಳು ಪಾಲಿಫಿನಾಲ್ಸ್, ವಿಟಮಿನ್ ಎ ಮತ್ತು ವಿಟಮಿನ್ ಸಿ ಯಂತಹ ಅನೇಕ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತವೆ. ಹೀಗಾಗಿ ಬಾಳೆ ಎಲೆಯ ಮೇಲೆ ಆಹಾರವನ್ನು ಇರಿಸಿದಾಗ, ಈ ಕೆಲವು ಪೋಷಕಾಂಶಗಳು ಆಹಾರಕ್ಕೆ ಸೇರಿಕೊಂಡು ಪೌಷ್ಟಿಕಾಂಶದ ಮೂಲಕ ನಮ್ಮ ದೇಹವನ್ನು ಸೇರುತ್ತವೆ.

2. ರುಚಿ ಹೆಚ್ಚಳ:

ಬಾಳೆ ಎಲೆಯಲ್ಲಿ ಆಹಾರ ಸೇವಿಸುವುದರಿಂದ ಆಹಾರದ ರುಚಿ ಹೆಚ್ಚುತ್ತದೆ. ಎಲೆಗಳು ಆಹಾರಕ್ಕೆ ಸೌಮ್ಯವಾದ, ಮಣ್ಣಿನ ಪರಿಮಳವನ್ನು ನೀಡುತ್ತವೆ

3. ನೋಡಲು ಆಕರ್ಷಕ:

ಬಾಳೆ ಎಲೆಗಳ ಮೇಲೆ ಆಹಾರವನ್ನು ತಿನ್ನುವುದು ಆಹಾರಕ್ಕೆ ಸಾಂಪ್ರದಾಯಿಕ ಆಕರ್ಷಣೆಯನ್ನು ನೀಡುತ್ತದೆ. ಇದು ಸಂಪ್ರದಾಯವಾಗಿದ್ದರೂ ಸಹ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

4. ವಿಷಕಾರಿಯಲ್ಲದ ಆಯ್ಕೆ:

ಪ್ಲಾಸ್ಟಿಕ್ ಅಥವಾ ಥರ್ಮಾಕೋಲ್ ಪ್ಲೇಟ್‌’ಗಳಿಗೆ ಹೋಲಿಸಿದರೆ ಬಾಳೆ ಎಲೆಗಳು ವಿಷಕಾರಿಯಲ್ಲ, ಇದರಿಂದಾಗಿ ಹಾನಿಕಾರಕ ರಾಸಾಯನಿಕಗಳು ಆಹಾರದಲ್ಲಿ ಕಂಡುಬರುವುದಿಲ್ಲ. ಇದು ಕ್ಯಾನ್ಸರ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.

5. ಜೀರ್ಣಕ್ರಿಯೆ ಸುಧಾರಣೆ:

ಬಾಳೆ ಎಲೆಗಳಲ್ಲಿ ಬಡಿಸಿದ ಆಹಾರವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಲ್ಲಿ ಕಂಡುಬರುವ ಪಾಲಿಫಿನಾಲ್‌’ಗಳು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತವೆ

6. ನೈಸರ್ಗಿಕ ಸೋಂಕು ನಿವಾರಕ:

ಬಾಳೆ ಎಲೆಗಳು ನೈಸರ್ಗಿಕ ಆಂಟಿ ಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು ಅದು ಆಹಾರದಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಹಾಯ ಮಾಡುತ್ತದೆ.

7. ಪರಿಸರ ಸ್ನೇಹಿ:

ಪರಿಸರ ಮಾಲಿನ್ಯ ಮಾಡುವ ಪ್ಲೇಟ್’ಗಳಿಗಿಂತ ಇದು ನೈಸರ್ಗಿಕವಾದ ಉತ್ತಮ ಆಯ್ಕೆ. ಪ್ಲಾಸ್ಟಿಕ್ ಅಥವಾ ಫೋಮ್ ಪ್ಲೇಟ್‌ಗಳಿಂದ ಉಂಟಾಗುವ ಭೂ ಮಾಲಿನ್ಯವನ್ನು ಇದು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಹುಟ್ಟುಹಬ್ಬದಂದೇ ಶತಕ ಸಿಡಿಸಿ ಸಚಿನ್ ತೆಂಡೂಲ್ಕರ್ ವಿಶ್ವದಾಖಲೆ ಸರಿಗಟ್ಟಿದ ‘ಕಿಂಗ್’ ವಿರಾಟ್

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News