Vegetable Juice Good For High Blood Pressure: ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ, ಹೀಗಿರುವಾಗ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುತ್ತಿದೆ, ಜೊತೆಗೆ ವ್ಯಸ್ತ ಜೀವನಶೈಲಿಯ ಕಾರಣ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಆಗುತ್ತಿಲ್ಲ ಮತ್ತು ಅವರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ. , ಇದರಿಂದಾಗಿ ಅನೇಕ ಜೀವನಶೈಲಿಯ ರೋಗಗಳನ್ನು ಎದುರಿಸಬೇಕಾಗುತ್ತದೆ. ಹೃದಯಾಘಾತ, ರಕ್ತದೊತ್ತಡ, ರಕ್ತಹೀನತೆ, ಮೆದುಳಿನ ಕಾಯಿಲೆ ಇತ್ಯಾದಿಗಳು ಉಂಟಾಗುತ್ತಿವೆ.ಇದನ್ನು ನಿರ್ಲಕ್ಷಿಸುವುದು ಸಾಕಷ್ಟು ಮಾರಕ ಸಾಬೀತಾಗಬಹುದು. ರಕ್ತದೊತ್ತಡವು ಒಂದು ರೀತಿಯ ಜೀವನಶೈಲಿಯ ಕಾಯಿಲೆಯಾಗಿದ್ದು ಇದು ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡವನ್ನು ಹೈಪರ್ ಟೆನ್ಶನ್ ಎಂದೂ ಕರೆಯುತ್ತಾರೆ, ದೇಹದ ಎಲ್ಲಾ ಭಾಗಗಳಿಗೆ ರಕ್ತ ಪಂಪ್ ಮಾಡುವಲ್ಲಿ ಹೃದಯವು ಒಂದು ವೇಳೆ ಹೆಚ್ಚು ಒತ್ತಡಕ್ಕೆ ಒಳಗಾದರೆ, ಅಧಿಕ ರಕ್ತದೊತ್ತಡದ ಸಮಸ್ಯೆ ಎದುರಾಗುತ್ತದೆ, ಅದು ಹೃದಯಾಘಾತಕ್ಕೆ ಕಾರಣವಾಗಬಹುದು. ಹೀಗಾಗಿ ರಕ್ತದೊತ್ತಡವನ್ನು ನಿಯಂತ್ರಿಸುವ ಕೆಲ ಪ್ರಯೋಜನಕಾರಿ ಪಾನೀಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಅಧಿಕ ರಕ್ತದೊತ್ತಡ ಸಮಸ್ಯೆ ಇರುವ ರೋಗಿಗಳು ಈ ರಸವನ್ನು ನಿಯಮಿಉತವಾಗಿ ಸೇವಿಸಬೇಕು
ಅಧಿಕ ರಕ್ತದೊತ್ತಡಕ್ಕೆ ಅಜ್ವೈನ್ ಜ್ಯೂಸ್
ಅಜ್ವೈನ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಇದು ಭಾರತೀಯ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಸಾಂಬಾರ ಪದಾರ್ಥವಿದೆ.ಆಯುರ್ವೇದದ ಪ್ರಕಾರ, ಇದು ಎಲ್ಲಾ ರೀತಿಯ ರೋಗಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿರುವ ಔಷಧಿಯಾಗಿದೆ. ಅಜ್ವೈನ್ ಸೇವನೆಯಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ವಿಟಮಿನ್ ಕೆ, ಪೊಟ್ಯಾಸಿಯಮ್, ವಿಟಮಿನ್ ಬಿ 6, ಫೋಲೇಟ್ ಮುಂತಾದ ಅನೇಕ ರೀತಿಯ ಪೌಷ್ಟಿಕಾಂಶಗಳು ಇದರಲ್ಲಿ ಕಂಡುಬರುತ್ತವೆ, ಈ ಎಲ್ಲಾ ಅಂಶಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುತ್ತವೆ.
ಅಧಿಕ ರಕ್ತದೊತ್ತಡಕ್ಕೆ ಪಾಲಕ್ ಜ್ಯೂಸ್
ಪಾಲಕ್ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಇದು ಪೊಟ್ಯಾಸಿಯಮ್ನ ಉತ್ತಮ ಆಗರವಾಗಿದೆ, ಪೊಟ್ಯಾಸಿಯಂ ದೇಹಕ್ಕೆ ತುಂಬಾ ಲಾಭವನ್ನು ನೀಡುತ್ತದೆ. ಏಕೆಂದರೆ ಪೊಟ್ಯಾಸಿಯಮ್ ಕಾರಣದಿಂದ, ರಕ್ತ ಪರಿಚಲನೆ ಸುಲಲಿತಗೊಳ್ಳುತ್ತದೆ, ಇದು ಹೃದಯಕ್ಕೆ ಒತ್ತಡವನ್ನು ಉಂಟುಮಾಡುವುದಿಲ್ಲ. ನಿಮಗೆ ರಕ್ತದೊತ್ತಡ ಸಮಸ್ಯೆ ಇದ್ದರೆ ಪಾಲಕ್ ಜ್ಯೂಸ್ ಸೇವನೆ ನಿಮಗೆ ಪ್ರಯೋಜನವನ್ನು ನೀಡಲಿದೆ.
ಅಧಿಕ ರಕ್ತದೊತ್ತಡಕ್ಕೆ ಬೀಟ್ರೂಟ್ ಜ್ಯೂಸ್
ಬೀಟ್ರೂಟ್ ಕೂಡ ಆರೋಗ್ಯಗಳಿಂದ ಭರಪೂರವಾಗಿರುವ ತರಕಾರಿಯಾಗಿದೆ. ಸೋಡಿಯಂ, ಪೊಟ್ಯಾಸಿಯಮ್, ಫಾಸ್ಫರಸ್ ಮುಂತಾದ ಸಾಕಷ್ಟು ಪೌಷ್ಟಿಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇವು ರಕ್ತದೊತ್ತಡ ನಿಯಂತ್ರಣಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಇದರಲ್ಲಿ ನೈಟ್ರೇಟ್ ಕೂಡ ಹೇರಳ ಪ್ರಮಾಣದಲ್ಲಿರುವ ಕಾರಣ ದೇಹದಲ್ಲಿನ ರಕ್ತ ಪರಿಚಲನೆ ಇದರಿಂದ ಉತ್ತಮಗೊಳ್ಳುತ್ತದೆ. ಇದೇ ಕಾರಣದಿಂದ ಇದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಸಾಕಷ್ಟು ಪರಿಹಾರ ನೀಡುತ್ತದೆ.
ಇದನ್ನೂ ಓದಿ-High Cholesterol Food: ಈ ವಸ್ತುಗಳು ಇದ್ದಕ್ಕಿದ್ದಂತೆ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು
ಅಧಿಕ ರಕ್ತದೊತ್ತಡಕ್ಕೆ ಟೊಮೆಟೊ ಜ್ಯೂಸ್
ಟೊಮೇಟೊ ಪ್ರತಿಯೊಬ್ಬರ ಅಡುಗೆಮನೆಯಲ್ಲಿಯೂ ಕಂಡುಬರುವ ಒಂದು ಸಾಮಾನ್ಯ ತರಕಾರಿಯಾಗಿದೆ.ಇದು ವಿಟಮಿನ್ ಸಿ, ಎ ಮುಂತಾದ ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದೆ, ಜೊತೆಗೆ ಇದು ದೇಹಕ್ಕೆ ಒಳ್ಳೆಯದು ಎಂದು ಪರಿಗಣಿಸಲಾದ ರಂಜಕ, ತಾಮ್ರ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಖನಿಜ ಪದಾರ್ಥಗಳನ್ನು ಇದು ಒಳಗೊಂಡಿದೆ. ನೀವು ದೈನಂದಿನ ಆಹಾರದಲ್ಲಿ ಟೊಮೆಟೊವನ್ನು ಸೇರಿಸಿದರೆ, ಅದು ಪ್ರಯೋಜನಕಾರಿಯಾಗಿದೆ ಏಕೆಂದರೆ ಇದು ರಕ್ತದೊತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ-Leaves for diabetes : ಈ ಎರಡು ಮರಗಳ ಎಲೆಗಳನ್ನು ತಿನ್ನುವುದರಿಂದ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್
(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.