Corona Vaccine ನಿಮ್ಮ ಬಳಿ ಹೇಗೆ ತಲುಪಲಿದೆ ಗೊತ್ತೇ?

ಕೊರೋನಾ ವ್ಯಾಕ್ಸಿನೇಷನ್ ಪ್ರಕ್ರಿಯೆಯು ಜನವರಿ 13 ರಿಂದ ಇಡೀ ದೇಶದಲ್ಲಿ ಪ್ರಾರಂಭವಾಗಬಹುದು ಎಂಬ ಬಗ್ಗೆ ಆರೋಗ್ಯ ಸಚಿವಾಲಯ ಸುಳಿವು ನೀಡಿದೆ. ಈ ಹಿನ್ನಲೆಯಲ್ಲಿ ಲಸಿಕೆ ಸಾಮಾನ್ಯ ಜನರಿಗೆ ಹೇಗೆ ತಲುಪುತ್ತದೆ ಎಂಬ ಪ್ರಶ್ನೆಗಳಿವೆ. ಈ ಪ್ರಕ್ರಿಯೆಯ ಬಗೆಗಿನ ಮಾಹಿತಿಗಳನ್ನು ನಿಮ್ಮ‌ ಮುಂದೆ ಇಡುತ್ತಿದ್ದೇವೆ.  

Written by - Yashaswini V | Last Updated : Jan 6, 2021, 06:45 AM IST
  • ದೇಶಾದ್ಯಂತ 4 ಬೃಹತ್ ಪ್ರಾಥಮಿಕ ಲಸಿಕೆ ಮಳಿಗೆಗಳಲ್ಲಿ ಸಂಗ್ರಹ. ಅಲ್ಲಿಂದ ಆರೋಗ್ಯ ಕೇಂದ್ರಗಳಿಗೆ ರವಾನೆ
  • ಪ್ರತಿ ಹಂತದಲ್ಲೂ ಲಸಿಕೆಗಳ ನಿಯಮಿತ ತಾಪಮಾನ ಕಾಪಾಡಿಕೊಳ್ಳಲು ಶೈತ್ಯಾಗಾರಗಳ ಸ್ಥಾಪನೆ
  • ಕೊರೋನಾ ವಾರಿಯರ್ಸ್ ಬಿಟ್ಟು ಉಳಿದವರು ಆನ್ ಲೈನ್ ನಲ್ಲಿ ನೊಂದಾಯಿಸಿಕೊಳ್ಳುವುದು ಕಡ್ಡಾಯ
Corona Vaccine ನಿಮ್ಮ ಬಳಿ ಹೇಗೆ ತಲುಪಲಿದೆ ಗೊತ್ತೇ? title=
Coronavirus Vaccine News Update

ನವದೆಹಲಿ: ಕೊರೋನಾ ಲಸಿಕೆಗಳನ್ನು (Covishield and Covaxin) ಬಳಸಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (Drugs Controller General Of India) ಅನುಮೋದನೆ ನೀಡಿದೆ. ಹಾಗಾಗಿ ಈಗ ವ್ಯಾಕ್ಸಿನೇಷನ್ (Vaccination) ಪ್ರಕ್ರಿಯೆ ಯಾವಾಗ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆ ಹುಟ್ಟುಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಸಚಿವಾಲಯವು ಇದೇ ಜನವರಿ 13ರಿಂದ ದೇಶಾದ್ಯಂತ ಲಸಿಕೆ ಪ್ರಾರಂಭಿಸುವುದಾಗಿ ಹೇಳಿದೆ.

ಆದರೆ ಆರೋಗ್ಯ ಸಚಿವಾಲಯದ (Health Department) ಈ ಪ್ರಕಟಣೆ ಪ್ರಕಟವಾಗುತ್ತಿದ್ದಂತೆ ಸಹಜವಾಗಿ ಜನರು 'ಕೊರೋನಾ ಲಸಿಕೆಗಳು (Corona Vaccine) ಸಾಮಾನ್ಯ ಜನರನ್ನು ಹೇಗೆ ತಲುಪುತ್ತವೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಕ್ಕಾಗಿ ಯಾವ ರೀತಿ ನೋಂದಣಿ ಮಾಡಿಕೊಳ್ಳಬೇಕು? ಅಥವಾ ಯಾವ ದಾಖಲೆಗಳ ಅಗತ್ಯವಿದೆ? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟುಕೊಂಡಿವೆ. ಆ ಎಲ್ಲಾ ಮಾಹಿತಿಗಳೂ ಇಲ್ಲಿವೆ.

ಲಸಿಕೆ ಉತ್ಪಾದಕರಿಂದ ಸಾಮಾನ್ಯ ಜನರನ್ನು ಹೇಗೆ ತಲುಪುತ್ತದೆ? 
ಮೊದಲಿಗೆ, ತಯಾರಕರು ವಿಮಾನದ ಮೂಲಕ ಲಸಿಕೆಯನ್ನು ಪ್ರಾಥಮಿಕ ಲಸಿಕೆ ಅಂಗಡಿಗೆ ಕಳುಹಿಸಲು ಪ್ರಾರಂಭಿಸುತ್ತಾರೆ. ಕರ್ನಾಲ್ (Karnal), ಮುಂಬೈ (Mumbai), ಚೆನ್ನೈ (Chennai) ಮತ್ತು ಕೋಲ್ಕತ್ತಾ (Kolkatta)ದಲ್ಲಿ ದೇಶಾದ್ಯಂತ 4 ಪ್ರಾಥಮಿಕ ಲಸಿಕೆ ಮಳಿಗೆಗಳಿವೆ. ಇಲ್ಲಿ ಲಸಿಕೆಯನ್ನು ಅಗತ್ಯಕ್ಕೆ ತಕ್ಕಂತೆ ಸಂಗ್ರಹಿಸಿಡಲಾಗುತ್ತದೆ. ಇವೆಲ್ಲವೂ ಕೋಲ್ಡ್ ಚೈನ್ ಪಾಯಿಂಟ್‌ಗಳಾಗಿವೆ. ಅಲ್ಲಿ ಲಸಿಕೆಯ ತಾಪಮಾನವನ್ನು ನಿಯಂತ್ರಿಸುವ ವ್ಯವಸ್ಥೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ : COVID-19 ಲಸಿಕೆಗಾಗಿ ನೋಂದಾಯಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

ಲಸಿಕೆ ತಯಾರಕಾ ಕೇಂದ್ರದಿಂದ ಪ್ರಾಥಮಿಕ ಲಸಿಕೆ ಅಂಗಡಿವರೆಗೆ :
ಇದರ ನಂತರ ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾಡಳಿತದ ಜವಾಬ್ದಾರಿ ಇರುತ್ತದೆ. ಲಸಿಕೆಯನ್ನು ಶೈತ್ಯೀಕರಿಸಿದ ವ್ಯಾನ್ ಮೂಲಕ ಪ್ರಾಥಮಿಕ ಅಂಗಡಿಯಿಂದ ಜಿಲ್ಲಾ ಅಂಗಡಿಗೆ ಸಾಗಿಸಲಾಗುತ್ತದೆ. ನಂತರ ಜಿಲ್ಲಾ ಅಂಗಡಿಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗುತ್ತದೆ. ಪ್ರಾಥಮಿಕ ಲಸಿಕೆ ಅಂಗಡಿಗಳಂತಹ ಸೌಲಭ್ಯಗಳು ಲಭ್ಯವಿರುವ ದೇಶಾದ್ಯಂತ 37 ಜಿಲ್ಲಾ ಲಸಿಕೆ ಮಳಿಗೆಗಳನ್ನು ಸರ್ಕಾರ ರಚಿಸಿದೆ. ಪ್ರತಿ ಪ್ರಾಥಮಿಕ ಮತ್ತು ರಾಜ್ಯ ಮತ್ತು ಜಿಲ್ಲಾ ಲಸಿಕೆ ಅಂಗಡಿಯಲ್ಲಿ ಲೈವ್ ವ್ಯಾಕ್ಸಿನ್ ಟೆಂಪರೇಚರ್ ಡಿಜಿಟಲ್ ಟ್ರ್ಯಾಕ್ (Live Vaccine Temperature Digital Track) ಇರುತ್ತದೆ. ಅಂದರೆ ವಿತರಣಾ ಪ್ರಕ್ರಿಯೆ  ವೇಳೆ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪ್ರಧಾನ ಕಚೇರಿಯಿಂದ ನೇರಪ್ರಸಾರದ ಮೂಲಕ ಸಂಪರ್ಕಿಸಿ ಬಗೆಹರಿಸಿಕೊಳ್ಳಬಹುದು. ನಂತರ ಲಸಿಕೆ ಉಪ ಕೇಂದ್ರಕ್ಕೆ ಸಾಗಿಸಲಾಗುತ್ತದೆ.

ಜನ ಸಾಮಾನ್ಯರಿಗೆ ಆನ್ ಲೈನ್ ನೊಂದಣಿ ಕಡ್ಡಾಯ :
ಈಗಾಗಲೇ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಮಿಕರ (Corona Warriors) ಮಾಹಿತಿ ಸಂಗ್ರಹಿಸಲಾಗಿದೆ. ಆದ್ದರಿಂದ ಅವರು ನೋಂದಾಯಿಸುವ ಅಗತ್ಯವಿಲ್ಲ. ಆದರೆ ಲಸಿಕೆಗಾಗಿ ಸಾರ್ವಜನಿಕರು ಆನ್‌ಲೈನ್‌ನಲ್ಲಿ (online) ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ. ಇದರ ನಂತರ, ಪ್ರತಿ ಜಿಲ್ಲೆಯ ಡಿಎಂ (DM)ಗಳು ಯಾವ ದಿನ, ಎಷ್ಟು ಜನರು ಮತ್ತು ಎಷ್ಟು ಕೇಂದ್ರಗಳಿಗೆ ಲಸಿಕೆಗಳನ್ನು ನೀಡಬೇಕೆಂದು ನಿರ್ಧರಿಸುತ್ತಾರೆ. ವ್ಯಾಕ್ಸಿನ್ ಪಡೆದವರಿಗೆ ಕ್ಯೂಆರ್ ಕೋಡ್ (QR Code) ಹೊಂದಿರುವ ಪ್ರಮಾಣಪತ್ರವನ್ನು ಸಹ ನೀಡಲಾಗುವುದು, ಅದು ನಿಮಗೆ ಲಸಿಕೆ ನೀಡಲಾಗಿದೆ ಎಂದು ಸಾಬೀತುಪಡಿಸುತ್ತದೆ.

ಇದನ್ನೂ ಓದಿ : ರಾಜ್ಯದಲ್ಲಿ ಮೊದಲ ಹಂತದಲ್ಲಿ 6.3 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ

COWIN ಅಪ್ಲಿಕೇಶನ್ ಮೂಲಕ ನೋಂದಾಯಿಸಿ :
ಕೋವಿನ್ ಆ್ಯಪ್ (CoWin App) ಸಾರ್ವಜನಿಕರಿಗೆ ತಮ್ಮನ್ನು ಆಧಾರ್‌ನಲ್ಲಿ ನೋಂದಾಯಿಸಿಕೊಳ್ಳುವ ಸೌಲಭ್ಯವನ್ನು ಒದಗಿಸುತ್ತದೆ. ನಿಮ್ಮ ಫೋನ್‌ನಲ್ಲಿ ಪ್ಲೇ ಸ್ಟೋರ್ (Play Store) ಅಥವಾ ಆಪಲ್ ಸ್ಟೋರ್‌ (Appel Store)ನಿಂದ ಈ ಅಪ್ಲಿಕೇಶನ್ ಡೌನ್‌ಲೋಡ್ (Application download) ಮಾಡಿಕೊಳ್ಳಬಹುದು. ಈ ಅಪ್ಲಿಕೇಶನ್ 12 ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಸರ್ಕಾರವು ಈ ಅಪ್ಲಿಕೇಶನ್ ಅನ್ನು ಡಿಜಿಲಾಕರ್‌ಗೆ ಲಿಂಕ್ ಮಾಡಿರುವುದರಿಂದ ನೀವು ಲಸಿಕೆ ಪ್ರಮಾಣಪತ್ರವನ್ನು ಕೋವಿನ್ ಅಪ್ಲಿಕೇಶನ್‌ನಲ್ಲಿಯೇ ಪಡೆದುಕೊಳ್ಳಬಹುದು.

24-ಗಂಟೆಗಳ ಸಹಾಯವಾಣಿ :
ಸರ್ಕಾರ ಶೀಘ್ರದಲ್ಲೇ ಚಾಟ್‌ಬಾಟ್ ಸೌಲಭ್ಯವನ್ನು ಪ್ರಾರಂಭಿಸಲಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಯಲ್ಲಿ ನೀವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸಿದರೆ ದಿನದ 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಚಾಟ್‌ಬಾಟ್‌ನಿಂದ ಸಹಾಯ ಪಡೆಯಬಹುದು.

ಇದನ್ನೂ ಓದಿ : ಮೊದಲ ಡೋಸ್ Vaccine ಬಳಿಕ ಎರಡನೇ ಡೋಸ್ ಹಾಕುವ ಹೊತ್ತಿಗೆ ಸ್ಟಾಕ್ ಕೊನೆಗೊಂಡರೆ, ಮುಂದೆ?

ಯಶಸ್ವಿ ಡ್ರೈ ರನ್ :
ವ್ಯಾಕ್ಸಿನೇಷನ್ ಪ್ರಕ್ರಿಯೆಯ ಬಗ್ಗೆ ಖಾತರಿಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಕಳೆದ ಡಿಸೆಂಬರ್ 28 ಮತ್ತು 29ರಂದು ನಾಲ್ಕು ರಾಜ್ಯಗಳಲ್ಲಿ ಡ್ರೈ ರನ್ (Dry Run) ನಡೆಸಿತ್ತು. ನಂತರ ಜನವರಿ 2ರಂದು ದೇಶಾದ್ಯಂತ 125 ಜಿಲ್ಲೆಗಳ 286 ತಾಣಗಳಲ್ಲಿ ದೊಡ್ಡ ಮಟ್ಟದ ಡ್ರೈ ರನ್ ನಡೆಸಿತ್ತು. ಸರ್ಕಾರದ ಪ್ರಕಾರ ಈ ಡ್ರೈ ರನ್ ಗಳು ಯಶಸ್ವಿಯಾಗಿವೆ. ಆಗ ಎದುರಾದ ಕೆಲವು ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಮತ್ತೀಗ ಲಸಿಕೆ ವಿತರಣೆಗೆ ಮುಂದಾಗುತ್ತಿದೆ‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News