ದಿನವಿಡೀ ಇಷ್ಟು ಮಾತ್ರ ಮೊಟ್ಟೆ ತಿನ್ನಬೇಕು, ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

Risk Of Eating Too Much Egg : ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುವ ಮಾತಿನಂತೆ, ದಿನವೊಂದಕ್ಕೆ ಒಂದು ಮೊಟ್ಟೆ ತಿಂದರೆ ಅದು ನಿಜವಾಗಿಯೂ ಸೂಪರ್ ಫುಡ್. ಹಾಗಂತ ಸೂಪರ್ ಫುಡ್ ಎಂದ ಮಾತ್ರಕ್ಕೆ ಬೇಕಾಬಿಟ್ಟಿ ಮೊಟ್ಟೆ ತಿಂದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Written by - Ranjitha R K | Last Updated : Aug 29, 2022, 11:51 AM IST
  • ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು
  • ಆದರೆ ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು ?
  • ಈ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆ ?
ದಿನವಿಡೀ ಇಷ್ಟು ಮಾತ್ರ ಮೊಟ್ಟೆ ತಿನ್ನಬೇಕು, ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ  ಬುತ್ತಿ  title=
Risk Of Eating Too Much Egg (file photo)

Risk Of Eating Too Much Egg : ನಾವು ಸಾಮಾನ್ಯವಾಗಿ ಬೆಳಗಿನ ಉಪಹಾರ ಅಥವಾ ಊಟದೊಂದಿಗೆ ಮೊಟ್ಟೆಗಳನ್ನು ತಿನ್ನಲು ಇಷ್ಟಪಡುವವರು ಅನೇಕ ಮಂದಿ ಇದ್ದಾರೆ. ಮೊಟ್ಟೆಯನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುವ ಮಾತಿನಂತೆ, ದಿನವೊಂದಕ್ಕೆ ಒಂದು ಮೊಟ್ಟೆ ತಿಂದರೆ ಅದು ನಿಜವಾಗಿಯೂ ಸೂಪರ್ ಫುಡ್. ಹಾಗಂತ ಸೂಪರ್ ಫುಡ್ ಎಂದ ಮಾತ್ರಕ್ಕೆ ಬೇಕಾಬಿಟ್ಟಿ ಮೊಟ್ಟೆ ತಿಂದರೆ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.  ಹಾಗಿದ್ದರೆ ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡೋಣ. 

ಮೊಟ್ಟೆಯಲ್ಲಿ ಕಂಡುಬರುವ ಪೋಷಕಾಂಶಗಳ ಕಾರಣದಿಂದ ಮೊಟ್ಟೆಗಳನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಹೆಚ್ಚಿನ ಆರೋಗ್ಯ ತಜ್ಞರು ಇದನ್ನು ಪ್ರತಿದಿನ ತಿನ್ನಲು ಶಿಫಾರಸು ಮಾಡುತ್ತಾರೆ. ಇದು ಪ್ರೋಟೀನ್, ವಿಟಮಿನ್ ಡಿ, ವಿಟಮಿನ್ ಬಿ 12 ಮತ್ತು ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುತ್ತದೆ. ಇಷ್ಟೊಂದು ಪೋಷಕಾಂಶಗಳಿದ್ದರೂ ಅದನ್ನು ತಿನ್ನುವಲ್ಲಿ ಎಚ್ಚರಿಕೆ ವಹಿಸಬೇಕು.

ಇದನ್ನೂ ಓದಿ : ಈ ಐದು ವಸ್ತುಗಳನ್ನು ಫ್ರಿಜ್ ನಲ್ಲಿಟ್ಟು ನಂತರ ಬಿಸಿ ಮಾಡಿ ತಿನ್ನಲೇಬಾರದು.! ಯಾಕೆ ಗೊತ್ತಾ ?

ದಿನಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನಬೇಕು?
ಆರೋಗ್ಯವಂತ ವ್ಯಕ್ತಿ ಪ್ರತಿದಿನ ಒಂದು ಮೊಟ್ಟೆಯನ್ನು ಸೇವಿಸಿದರೆ, ಅದು ಅವನಿಗೆ ಸಾಕು. ಆದರೆ, ಇದು ನಿಮ್ಮ ಜೀವನಶೈಲಿಯ ಮೇಲೆ ಕೂಡಾ ಅವಲಂಬಿತವಾಗಿರುತ್ತದೆ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೆ ಇದ್ದರೆ, ದಿನಕ್ಕೆ ಮೂರು ಮೊಟ್ಟೆಗಳನ್ನು ಕೂಡಾ ತಿನ್ನಬಹುದು. ಇನ್ನು ಭಾರೀ ವ್ಯಾಯಾಮ ಮಾಡುವವರಿಗೆ ಹೆಚ್ಚಿನ ಪ್ರೋಟೀನ್ ಅಗತ್ಯವಿರುತ್ತದೆ. ಆಗ ಅವರು ತಿನ್ನುವ ಮೊಟ್ಟೆಯ ಪ್ರಮಾಣವನ್ನು ಹೆಚ್ಚಿಸಬಹುದು. 

ಹೆಚ್ಚು ಮೊಟ್ಟೆಗಳನ್ನು ತಿನ್ನುವ ಅನಾನುಕೂಲಗಳು :
1. ಅತಿಸಾರ
 ಅತಿಯಾದರೆ ಅಮೃತವೂ  ವಿಷ ಎನ್ನುವ ಮಾತನ್ನು ಕೇಳಿರಬಹುದು. ಮೊಟ್ಟೆಯ ವಿಷಯದಲ್ಲೂ ಇದು ನಿಜ. ಮೊಟ್ಟೆಯನ್ನು ಇತಿ ಮಿತಿಯಲ್ಲಿ ತಿಂದರೆ ಒಳ್ಳೆಯದು.  ಹೆಚ್ಚು ಮೊಟ್ಟೆಯನ್ನು ತಿನ್ನುವುದು ಅತಿಸಾರದ ಅಪಾಯವನ್ನು ಹೆಚ್ಚಿಸುತ್ತದೆ. ಒಮ್ಮೆ ಅತಿಸಾರ ಕಾಣಿಸಿಕೊಂಡರೆ, ನಮ್ಮ ದೇಹವು ದುರ್ಬಲಗೊಳ್ಳುತ್ತದೆ. 
 
2. ಮಲಬದ್ಧತೆ :
ಅಗತ್ಯಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುವುದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ಮಲಬದ್ಧತೆಯ ಸಮಸ್ಯೆಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ, ಹೊಟ್ಟೆ ಕಿರಿಕಿರಿ ಮತ್ತು ಗ್ಯಾಸ್ ಸಮಸ್ಯೆಗಳ ಅಪಾಯವೂ ಎದುರಾಗಬಹುದು. 

ಇದನ್ನೂ ಓದಿ : ಕೊಲೆಸ್ಟ್ರಾಲ್ ಹೆಚ್ಚಾಗಿದ್ದರೆ ತಪ್ಪಿಯೂ ಈ ಕೆಲಸಗಳನ್ನು ಮಾಡಬೇಡಿ

3. ಕೊಲೆಸ್ಟ್ರಾಲ್ : 
ಮೊಟ್ಟೆಯ ಹಳದಿ ಭಾಗದಲ್ಲಿ  ಆರೋಗ್ಯಕರ ಕೊಬ್ಬು ಇರುತ್ತದೆ. ಇದು ಸ್ಯಾಚುರೇಟೆಡ್ ಕೊಬ್ಬಿನಷ್ಟು ಹಾನಿಕಾರಕವಲ್ಲ. ಆದರೆ ಈಗಾಗಲೇ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಮೊಟ್ಟೆಗಳನ್ನು ಕಡಿಮೆ ತಿನ್ನಬೇಕು.

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News