ನವದೆಹಲಿ: Oxygen Level - ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನ ಪ್ರಕರಣಗಳ ನಡುವೆಯೇ ಆಕ್ಸಿಜನ್ ಸಿಲಿಂಡರ್ (Oxygen Cylinder) ಹಾಗೂ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಂಖ್ಯೆಯ ಬೇಡಿಕೆಯನ್ನೂ ಕೂಡ ಹೆಚ್ಚಿಸಿವೆ. ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ವೊಂದು ಭಾರಿ ವೈರಲ್ ಆಗುತ್ತಿದೆ. ಈ ಪೋಸ್ಟ್ ನಲ್ಲಿ ದೇಹದ ಆಕ್ಸಿಜನ್ (Oxygen)ಮಟ್ಟ ಹೆಚ್ಚಿಸಲು ಒಂದು ಮನೆ ಮದ್ದಿನ ಕುರಿತು ಹೇಳಲಾಗುತ್ತಿದೆ.
ಕರ್ಪೂರ, ಲವಂಗ್, ಅಜ್ವಾಯಿನ್ ಹಾಗೂ ನೀಲಗಿರಿ ಎಣ್ಣೆಯಿಂದ ದೇಹದ ಆಕ್ಸಿಜನ್ ಮಟ್ಟದಲ್ಲಿ ಸುಧಾರಣೆಯಾಗುತ್ತದೆಯೇ?
ಈ ವೈರಲ್ ಆಗುತ್ತಿರುವ ಪೋಸ್ಟ್ ಅನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಕೂಡ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನಲ್ಲಿ ಕರ್ಪೂರ, ಲವಂಗ ಹಾಗೂ ಅಜ್ವಾಯಿನ್ ಗಳ ಮಿಶ್ರಣಕ್ಕೆ ಕೆಲ ಹನಿ ನೀಲಗಿರಿ ಎಣ್ಣೆ ಬೆರೆಸಿ ಅದರ ವಾಸನೆಯನ್ನು ಘ್ರಾಣಿಸಿದರೆ ದೇಹದ ಆಕ್ಸಿಜನ್ ಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ ಎನ್ನಲಾಗಿದೆ. ಈ ವೈರಲ್ ಪೋಸ್ಟ್ ನಲ್ಲಿ ಬರೆಯಲಾಗಿರುವ ಪ್ರಕಾರ, 'ಕರ್ಪೂರ, ಲವಂಗ್, ಅಜ್ವಾಯಿನ್ ಹಾಗೂ ಯುಕೆಲಿಪ್ಟಿಸ್ ನ ಕೆಲ ಹನಿಗಳನ್ನು ಬೆರೆಸಿ ಅದರ ಚಿಕ್ಕ ಪೋಟ್ಲಿ ಅಥವಾ ಗಂಟು ತಯಾರಿಸಿ, ದಿನವಿಡೀ ಅದರ ವಾಸನೆ ತೆಗೆದುಕೊಂಡರೆ ಶರೀರದ ಆಕ್ಸಿಜನ್ ಮಟ್ಟ ಹೆಚ್ಚಾಗಿ ಕಂಜೆಶನ್ ಸಮಸ್ಯೆ ದೂರಾಗುತ್ತದೆ . ಈ ರೀತಿಯ ಗಂಟನ್ನು ಲಡಾಕ್ ಗೆ ಬರುವ ಯಾತ್ರಿಗಳಿಗೂ ಅವರ ದೇಹದ ಆಕ್ಸಿಜನ್ ಮಟ್ಟ ಕೆಳಜಾರಿದಾಗ ನೀಡಲಾಗುತ್ತಿದೆ ಮತ್ತು ಇದೊಂದು ಪರಿಣಾಮಕಾರಿ ಮನೆ ಮದ್ದಾಗಿದೆ (Home Remedy)" ಎನ್ನಲಾಗಿದೆ.
ಇದನ್ನು ಸಾಬೀತುಪಡಿಸುವ ಯಾವುದೇ ವರದಿಗಳಿಲ್ಲ
ಈ ರೀತಿಯ ಮನೆಮದ್ದಿನಿಂದ ದೇಹದ ಆಕ್ಸಿಜನ್ ಮಟ್ಟ ಹೆಚ್ಚಾಗುತ್ತದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ವರದಿಗಳಿಲ್ಲ (No reports to prove the claim). ಆದರೆ, ಸಹವಾಸಕ್ಕೆ ಸಂಬಂಧಿಸಿದ ಸಣ್ಣಪುಟ್ಟ ಸೋಂಕಿನಿಂದ ಆರಾಮ ನೀಡಲು ಈ ಥೆರಪಿ (Feel good therapy) ನಿಮಗೆ ಸಹಕರಿಸಬಹುದು.
ಇದನ್ನೂ ಓದಿ- ನಿಮ್ಮ ಲಿವರ್ ಹೆಲ್ತ್ ಕಾಪಾಡಿ.! ಈ 5 ಆಹಾರಗಳಿಂದ ದೂರ ಇರಿ
ಮೂಗುಗಟ್ಟುವಿಕೆ ನಿವಾರಣೆಯಿಂದ ಕೂಡ ಆಕ್ಸಿಜನ್ ಮಟ್ಟ ಸುಧಾರಿಸುತ್ತದೆ ಎಂಬುದನ್ನು ಸಾಬೀತುಪಡಿಸಲು ಕೂಡ ಯಾವುದೇ ತಥ್ಯಗಳಿಲ್ಲ
ಚರ್ಮದ ಮೇಲೆ ತುರಿಕೆ ಅಥವಾ ನೋವನ್ನು ಕಡಿಮೆ ಮಾಡಲು ಕರ್ಪೂರವನ್ನು ಉಜ್ಜಲಾಗುತ್ತದೆ, ಆದರೆ ಮುಚ್ಚಿದ ಮೂಗು (Nasal Congestion) ತೆರೆಯುವಲ್ಲಿ ಕರ್ಪೂರ ಪ್ರಯೋಜನಕಾರಿ ಎಂದು ಯಾವುದೇ ಅಧ್ಯಯನವಿಲ್ಲ. ಇದಲ್ಲದೆ ಮುಚ್ಚಿದ ಮೂಗು ತೆರೆದುಕೊಳ್ಳುವುದರಿಂದ ದೇಹದ ಆಕ್ಸಿಜನ್ ಮಟ್ಟ ಹೆಚ್ಚಾಗುತ್ತದೆ ಎಂಬುದಕ್ಕೂ ಕೂಡ ಯಾವುದೇ ಅಧ್ಯಯನವಿಲ್ಲ. ಅಂತೆಯೇ, ಲವಂಗ, ಅಜ್ವಾಯಿನ್ ಮತ್ತು ನೀಲಗಿರಿ ಎಣ್ಣೆ ದೇಹದ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ಅಧ್ಯಯನಗಳಿಲ್ಲ ಎನ್ನಲಾಗಿದೆ.
ಇದನ್ನೂ ಓದಿ-Watermelon Benefits: ಪುರುಷರು ಬೇಸಿಗೆಯಲ್ಲಿ 'ಕಲ್ಲಂಗಡಿ' ಸೇವಿಸುವುದರಿಂದ ಆರೋಗ್ಯಕ್ಕಿದೆ ಭಾರಿ ಲಾಭ!
ಯಾವುದೇ ಉಪಾಯವನ್ನು ಅನುಸರಿಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ
ಒಟ್ಟಾರೆ ಹೇಳುವುದಾದರೆ, ಕರೋನಾವನ್ನು ತಪ್ಪಿಸಲು ಅಥವಾ ಕರೋನಾದಿಂದ ರಕ್ಷಿಸಿಕೊಳ್ಳಲು ಕಷಾಯ ತೆಗೆದುಕೊಳ್ಳುವುದು, ಉಗಿ ತೆಗೆದುಕೊಳ್ಳುವುದು ಮತ್ತು ಆಯುರ್ವೇದ ಔಷಧಿಗಳನ್ನು ಅಳವಡಿಸಿಕೊಳ್ಳುವುದು ಮುಂತಾದ ಹಲವು ಕ್ರಮಗಳು ಈ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಆದರೆ ನಿಮ್ಮ ವೈದ್ಯರ ಸಲಹೆಯನ್ನು ಪಡೆಯದೇ ಯಾವುದೇ ಪರಿಹಾರವನ್ನು ಅನುಸರಿಸಬೇಡಿ .
ಇದನ್ನೂ ಓದಿ-Banana For Weight Loss: ಸುಲಭವಾಗಿ ತೂಕ ಇಳಿಸಲು ಈ ರೀತಿಯ ಬಾಳೆಹಣ್ಣು ಬಳಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.