ದಿಢೀರ್ ತೂಕ ಇಳಿಕೆ ಈ ರೋಗಗಳ ಸಂಕೇತವೂ ಆಗಿರಬಹುದು!

Weight Loss: ಕೆಲವರು ಎಷ್ಟೇ ಪ್ರಯತ್ನಪಟ್ಟರೂ ನಿರೀಕ್ಷಿತ ಮಟ್ಟದಲ್ಲಿ ತೂಕ ಇಳಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ. ಆದರೆ, ಕೆಲವರಲ್ಲಿ ಇದ್ದಕ್ಕಿದ್ದಂತೆ ಗಮನಾರ್ಹ ಪ್ರಮಾಣದಲ್ಲಿ ತೂಕ ಇಳಿಕೆಯಾಗುತ್ತದೆ. ಇದು ಕೆಲವು ರೋಗಗಳ ಸಂಕೇತವೂ ಆಗಿರಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Jul 18, 2024, 02:47 PM IST
  • ತೂಕ ಇಳಿಕೆಗಾಗಿ ಯಾವುದೇ ರೀತಿಯಲ್ಲೂ ಪ್ರಯತ್ನಿಸದೆ ನಿರ್ದಿಷ್ಟ ಅವಧಿಯಲ್ಲಿ ಹೆಚ್ಚು ತೂಕ ನಷ್ಟ ಸಂಭವಿಸುವುದನ್ನು ಆರೋಗ್ಯಕರ ಎಂದು ಪರಿಗಣಿಸಲಾಗುವುದಿಲ್ಲ.
  • ಇದು ಕೆಲವು ರೋಗಗಳ ಸಂಕೇತವೂ ಆಗಿರಬಹುದು
ದಿಢೀರ್ ತೂಕ ಇಳಿಕೆ ಈ ರೋಗಗಳ ಸಂಕೇತವೂ ಆಗಿರಬಹುದು! title=

Weight Loss Reasons: ಪ್ರಸ್ತುತ ಜಗತ್ತಿನಲ್ಲಿ ತೂಕ ಹೆಚ್ಚಳ, ಸ್ಥೂಲಕಾಯತೆ ಬಹುತೇಕ ಜನರನ್ನು ಬಾಧಿಸುತ್ತಿರುವ ಸರ್ವೇ ಸಾಮಾನ್ಯವಾದ ಸಮಸ್ಯೆ. ತೂಕ ಇಳಿಸಿಕೊಳ್ಳಲು ಜನರು ಆಹಾರ ಪದ್ದತಿ ಬದಲಾಯಿಸುವುದರಿಂದ ಹಿಡಿದು, ಕಠಿಣ ವ್ಯಾಯಾಮ ಮಾಡುವವರೆಗೂ ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಆದಾಗ್ಯೂ, ನಿರೀಕ್ಷಿತ ಮಟ್ಟದಲ್ಲಿ ತೂಕ ಇಳಿಕೆ ಸಾಧ್ಯವಾಗುತ್ತಿಲ್ಲ ಎಂದು ಕೊರಗುತ್ತಾರೆ.  ಇದಕ್ಕೆ ವ್ಯತಿರಿಕ್ತವಾಗಿ,  ಕೆಲವರಲ್ಲಿ ಏನೂ ಮಾಡದಿದ್ದರೂ ಇದ್ದಕ್ಕಿದ್ದಂತೆ ಗಮನಾರ್ಹ ಪ್ರಮಾಣದಲ್ಲಿ ತೂಕ ಇಳಿಕೆ ಕಂಡು ಬರುತ್ತದೆ. ಇದು ಕೆಲವು ರೋಗ ಲಕ್ಷಣಗಳ ಎಚ್ಚರಿಕೆಯ ಗಂಟೆಯೂ ಆಗಿರಬಹುದು. 

ಹೌದು, ತೂಕ ಇಳಿಕೆಗಾಗಿ (Weight Loss) ಯಾವುದೇ ರೀತಿಯಲ್ಲೂ ಪ್ರಯತ್ನಿಸದೆ ನಿರ್ದಿಷ್ಟ ಅವಧಿಯಲ್ಲಿ ಹೆಚ್ಚು ತೂಕ ನಷ್ಟ ಸಂಭವಿಸುವುದನ್ನು ಆರೋಗ್ಯಕರ ಎಂದು ಪರಿಗಣಿಸಲಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ತಡಮಾಡದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. 

ದಿಢೀರ್ ತೂಕ ಇಳಿಕೆ ಈ ರೋಗಗಳ ಸಂಕೇತವೂ ಆಗಿರಬಹುದು!
ಮಧುಮೇಹ: 

ಹಠಾತ್ ತೂಕ ಇಳಿಕೆಯು ಮಧುಮೇಹದ (Diabetes) ಸಾಮಾನ್ಯ ಲಕ್ಷಣವಾಗಿದೆ. ದೇಹದಲ್ಲಿ ಸಾಕಷ್ಟು ಇನ್ಸುಲಿನ್ ಉತ್ಪಾದನೆ ಆಗದಿದ್ದಾಗ ದೇಹವು ಅಸಮರ್ಥತೆಯಿಂದಾಗಿ ಅಧಿಕ ರಕ್ತದ ಗ್ಲೂಕೋಸ್ ಮಟ್ಟವನ್ನು ಉಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ತೂಕ ಇಳಿಕೆಯೂ ಸಂಭವಿಸಬಹುದು. 

ಇದನ್ನೂ ಓದಿ- ಕಣ್ಣಿನಲ್ಲಿ ಆಗುವ ಈ ಬದಲಾವಣೆಗಳು ಮಧುಮೇಹದ ಮುನ್ಸೂಚನೆ: ಗಮನ ಹರಿಸದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ

ಅಲ್ಸರ್: 
ಹೊಟ್ಟೆಯ ಹುಣ್ಣಿನ ಸಮಸ್ಯೆ ಅಥವಾ ಅಲ್ಸರ್ ನಿಂದ ಬಳಲುತ್ತಿರುವ ಜನರಲ್ಲೂ ಕೂಡ ತೂಕ ನಷ್ಟ ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. 

ಖಿನ್ನತೆ: 
ಕೆಲವರಲ್ಲಿ ಅತಿಯಾದ ದುಃಖ, ಹತಾಶೆಯ ಭಾವನೆಗಳು, ಖಿನ್ನತೆಯ ಸಮಸ್ಯೆಯಿಂದಾಗಿ ಉದ್ದೇಶಪೂರ್ವಕವಲ್ಲದ ತೂಕ ನಷ್ಟಕ್ಕೆ ಕಾರಣವಾಗಿರುತ್ತದೆ. 

ಇದನ್ನೂ ಓದಿ- ರಾತ್ರಿ ಮಲಗುವ ಮುನ್ನ ಹೊಕ್ಕಳಿಗೆ ಈ ಎಣ್ಣೆ ಹಚ್ಚಿ: ಬೆಳಗಾಗುವಷ್ಟರಲ್ಲಿ ಯೂರಿಕ್ ಆಸಿಡ್ ಪುಡಿಯಾಗಿ ಹೊರಬರುತ್ತದೆ

ಕ್ಯಾನ್ಸರ್: 
ಸ್ತನ, ಶ್ವಾಸಕೋಶ, ಮೇದೋಜ್ಜೀರಕ ಗ್ರಂಥಿ, ಅಂಡಾಶಯ ಮತ್ತು ಕರುಳಿನ ಕ್ಯಾನ್ಸರ್ ಸೇರಿದಂತೆ ವಿವಿಧ ರೀತಿಯ ಕ್ಯಾನ್ಸರ್‌ಗಳ ಸಂದರ್ಭದಲ್ಲಿಯೂ ತೂಕ ನಷ್ಟ ಸಂಭವಿಸಬಹುದು. 

ಥೈರಾಯ್ಡ್: 
ಕೆಲವರಲ್ಲಿ ಥೈರಾಯ್ಡ್ ಆರಂಭಿಕ ಹಂತದಲ್ಲಿಯೂ ಅತಿಯಾದ ತೂಕ ನಷ್ಟ ಸಂಭವಿಸುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News