ಪ್ರಧಾನಿ ಮೋದಿ ಶಪಥ ಸಮಾರಂಭಕ್ಕೆ 6500 ಅತಿಥಿಗಳು!

ಮೂಲಗಳ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಸಚಿವಾಲಯಗಳ ಎಲ್ಲಾ ಕಚೇರಿಗಳು ಸಮಯಕ್ಕೂ ಮೊದಲೇ ಮುಚ್ಚಲಿವೆ.

Last Updated : May 29, 2019, 01:37 PM IST
ಪ್ರಧಾನಿ ಮೋದಿ ಶಪಥ ಸಮಾರಂಭಕ್ಕೆ 6500 ಅತಿಥಿಗಳು! title=
File Image

ನವದೆಹಲಿ: ರಾಷ್ಟ್ರಪತಿ ಭವನದ ಆವರಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ನಾಳೆ ಸಂಜೆ 7 ಗಂಟೆಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಮೋದಿ ಶಪಥ ಸಮಾರಂಭಕ್ಕೆ 6500 ಅತಿಥಿಗಳು ಪಾಲ್ಗೊಳ್ಳಲಿದ್ದಾರೆ. ಮೂಲಗಳ ಪ್ರಕಾರ, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದ ಹಿನ್ನೆಲೆಯಲ್ಲಿ ಸಚಿವಾಲಯಗಳ ಎಲ್ಲಾ ಕಚೇರಿಗಳು ಸಮಯಕ್ಕೂ ಮೊದಲೇ ಮುಚ್ಚಲಿವೆ.

ಪ್ರಧಾನಿ ಮೊದಿಯವರೊಂದಿಗೆ 65 ರಿಂದ 70 ಮಂತ್ರಿಗಳು ಸಹ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಇದಲ್ಲದೆ, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟ ಬಿಜೆಪಿ ಕಾರ್ಯಕರ್ತರ ಕುಟುಂಬದವರನ್ನೂ ಕೂಡ ಪ್ರಮಾಣವಚನ ಸಮಾರಂಭಕ್ಕೆ ಕರೆಯಲಾಗಿದೆ ಎನ್ನಲಾಗಿದೆ.

ಈ ಬಾರಿ ಮೋದಿ ತಮ್ಮ ಕ್ಯಾಬಿನೆಟ್ ನಲ್ಲಿ ಅನುಭವ ಹೊಂದಿರುವ ಹಿರಿಯ ನಾಯಕರಿಗೆ ಮಾತ್ರವಲ್ಲದೆ ಯುವಜನಾಂಗಕ್ಕೆ, ಕ್ಷೇತ್ರದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದವರಿಗೆ, ಮಹಿಳೆಯರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದಲ್ಲದೆ ಜಾತಿ ಲೆಕ್ಕಾಚಾರ ಹಾಗೂ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯಗಳು ಹೀಗೆ ಕ್ಯಾಬಿನೆಟ್ ನಲ್ಲಿ ಸಚಿವರನ್ನು ಅಳೆದು ತೂಗಿ ಆರಿಸುವ ಸಾಧ್ಯತೆಯಿದೆ ಎಂದು ಹಲವು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ BIMSTEC ರಾಷ್ಟ್ರದ ಎಲ್ಲಾ ನಾಯಕರು ತಮ್ಮ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿದ್ದಾರೆ ಎಂಬುದು ಗಮನಾರ್ಹವಾಗಿದೆ.  ಮೋದಿ ಶಪಥ ಸಮಾರಂಭಕ್ಕೆ 6500 ಅತಿಥಿಗಳು ಭಾಗವಹಿಸುತ್ತಿದ್ದಾರೆ. ಮಾರಿಷಸ್ ಪ್ರಧಾನ ಮಂತ್ರಿ ಪ್ರವೀಣ್ ಕುಮಾರ್ ಜಗನ್ನಾಥ್ ಮತ್ತು ಕಿರ್ಗಿಸ್ತಾನ್ ಎಸ್. ಜೀನ್ಬೆಕೊವ್ ಅಧ್ಯಕ್ಷರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಒಪ್ಪಿಗೆ ನೀಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಬಾಂಗ್ಲಾದೇಶದ ಅಧ್ಯಕ್ಷ ಅಬ್ದುಲ್ ಹಮೀದ್, ಶ್ರೀಲಂಕಾದ ಅಧ್ಯಕ್ಷ ಮೈತಿಪಲಾ ಸಿರಿಸೇನಾ ಮತ್ತು ನೇಪಾಳದ ಪ್ರಧಾನ ಮಂತ್ರಿ ಕೆ.ಪಿ. ಶರ್ಮಾ ಒಲಿ ಸಹ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವಿ ಕುಮಾರ್ ಮಾಹಿತಿ ನೀಡಿದ್ದಾರೆ.

Trending News