ಆಂಧ್ರಪ್ರದೇಶ (ಅಮರಾವತಿ): ಮುಂದಿನ ಮೂರು ದಿನಗಳವರೆಗೆ ಆಂಧ್ರಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ತಿಳಿಸಿದೆ. ಚಿತ್ತೂರು, ನೆಲ್ಲೂರು, ಪ್ರಕಾಶಂ ಜಿಲ್ಲೆಗಳು ಗುರುವಾರದ ತನಕ ಮಧ್ಯಮ ಮಳೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
"ಅನಂತಪುರ, ಗುಂಟೂರು, ಕೃಷ್ಣ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕಡಪಾ, ಕರ್ನೂಲ್, ವಿಶಾಖಪಟ್ಟಣಂ, ವಿಜಯನಗರಂ, ಶ್ರೀಕಾಕುಲಂ ಜಿಲ್ಲೆಗಳಲ್ಲೂ ಪ್ರತ್ಯೇಕವಾದ ಮಳೆಯಾಗುವ ಸಾಧ್ಯತೆಯಿದೆ" ಎಂದು ಹವಾಮಾನ ಮುನ್ಸೂಚನೆ ಸಂಸ್ಥೆ ತಿಳಿಸಿದೆ.
"ಅಕ್ಟೋಬರ್ 31 ರಂದು ಚಿತ್ತೂರು, ನೆಲ್ಲೂರು, ಕಡಪಾ, ಅನಂತಪುರ, ಕರ್ನೂಲ್, ಪ್ರಕಾಶಂ, ಗುಂಟೂರು, ಕೃಷ್ಣ ಜಿಲ್ಲೆಗಳಲ್ಲಿ ಮಧ್ಯಮ ಮಳೆ ಬೀಳಲಿದೆ. ಪೂರ್ವ ಮತ್ತು ಪಶ್ಚಿಮ ಗೋದಾವರಿ, ವಿಜಯನಗರಂ, ವಿಶಾಖಪಟ್ಟಣಂ, ಶ್ರೀಕಾಕುಲಂ ಜಿಲ್ಲೆಗಳ ಪ್ರತ್ಯೇಕ ಭಾಗಗಳಲ್ಲಿಯೂ ಧಾರಾಕಾರ ಮಲೆಯಾಗುವ ಸಾಧ್ಯತೆಯಿದೆ" ಎಂದು ಐಎಂಡಿ ತನ್ನ ಬುಲೆಟಿನ್ ನಲ್ಲಿ ಹೇಳಿದೆ.