ಅಯೋಧ್ಯಾ: ಅಯೋಧ್ಯೆಯ ರೈಲ್ವೆ ನಿಲ್ದಾಣವು ರಾಮ ಮಂದಿರದ ಪ್ರತಿರೂಪವಾಗಲಿದೆ ಎಂದು ಕೇಂದ್ರ ಸಚಿವ ಮನೋಜ್ ಸಿನ್ಹಾ ಹೇಳಿದ್ದಾರೆ.
ಅಯೋಧ್ಯಾ ರೈಲ್ವೆ ನಿಲ್ದಾಣ ಪುನರ್ನಿರ್ಮಾಣ ಮತ್ತು ಇತರ ಯೋಜನೆಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೈಲ್ವೆ ನಿಲ್ದಾಣದ ಸಂಪೂರ್ಣ ಪುನರ್ನಿರ್ಮಾಣಕ್ಕೆ 80 ಕೋಟಿ ರೂ. ಮೀಸಲಿಡಲಾಗಿದೆ. ಈ ಪ್ರಸ್ತಾಪವನ್ನು ರೈಲ್ವೆ ಸಚಿವಾಲಯ ಶೀಘ್ರದಲ್ಲೇ ಕೇಂದ್ರ ಸಚಿವ ಸಂಪುಟಕ್ಕೆ ಸಲ್ಲಿಸಲಿದೆ ಎಂದು ಸಿನ್ಹಾ ತಿಳಿಸಿದರು.
ಇಡೀ ದೇಶಕ್ಕೆ ಅಯೋದ್ಯೆಯನ್ನು ಪರಿಚಯಿಸಲು ರೈಲಿನೊಂದಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದ್ದು, ಇದರಿಂದ ರಾಮಭಕ್ತರು ಅಯೋಧ್ಯೆಗೆ ಭೇಟಿ ನೀಡುವಂತಾಗುತ್ತದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತದ ಅವಧಿಯಿಂದಲೂ ಅಯೋಧ್ಯಾ ರೈಲು ನಿಲ್ದಾಣದ ಅಭಿವೃದ್ಧಿ ಕುರಿತು ಚರ್ಚಿಸಲಾಗುತ್ತಿದೆ. ಅದರ ನಿರ್ಮಾಣ ಪೂರ್ಣಗೊಂಡಾಗ ರಾಮ ಮಂದಿರ ನಿರ್ಮಾಣ ಆರಂಭವಾಗಲಿದೆ ಎಂದು ಅವರು ಹೇಳಿದರು.