2000 ರೂ.ಗಳ ನೋಟು ಬಂದಾಗಲಿವೆಯೇ? ಇಲ್ಲ ಈ ಕುರಿತಾದ ಎಲ್ಲ ವರದಿಗಳು ಸುಳ್ಳು ಎಂದು ಹೇಳಲಾಗಿದೆ. ಆದರೆ, ATM ಗಳಲ್ಲಿ ರೂ.2000 ಮುಖಬೆಲೆಯ ನೋಟುಗಳನ್ನು ಹಾಕುವುದನ್ನು ಕಮ್ಮಿ ಮಾಡಲಾಗಿದೆ. ಎಲ್ಲಾ ಪ್ರಮುಖ ಬ್ಯಾಂಕ್ ಗಳು ತಮ್ಮ ATMಗಳಲ್ಲಿ ರೂ.2000 ನೋಟುಗಳನ್ನು ಹಾಕುವುದನ್ನು ಕ್ರಮೇಣ ನಿಲ್ಲಿಸುತ್ತಿವೆ. ಆದರೆ, ರೂ.2000 ನೋಟುಗಳು ಚಲಾವಣೆಯ ಹೊರಗೆ ಇರಲಿವೆ ಎಂಬುದು ಇದರ ಅರ್ಥವಲ್ಲ.
ಈ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್ ಗಳಿಗೆ ನಿರ್ದೇಶನಗಳನ್ನು ನೀಡಿದ್ದು, ಏಟಿಎಂ ಗಳಲ್ಲಿ ರೂ.2000 ನೋಟುಗಳನ್ನು ಹಾಕುವುದನ್ನು ಕಡಿಮೆಮಾಡಲು ಹೇಳಿದ್ದು, ಕ್ರಮೇಣ ಈ ಏಟಿಎಂ ಗಳಿಂದ ಈ ನೋಟುಗಳನ್ನು ತೆಗೆದು ಹಾಕಲು ಸೂಚಿಸಿದೆ. ಹೀಗಾಗಿ ನೀವು ಏಟಿಎಂ ನಿಂದ ಹಣ ಡ್ರಾ ಮಾಡುವ ವೇಳೆ ನಿಮಗೆ ಈ ನೋಟುಗಳು ಸಿಗದೆ ಇರಬಹುದು. ಆದರೆ, ಕೇವಲ ಏಟಿಎಂನಲ್ಲಿ ದೊಡ್ಡ ಮುಖಬೆಲೆಯ ನೋಟುಗಳನ್ನು ಮಾತ್ರ ಹಾಕುವುದನ್ನು ನಿಲ್ಲಿಸಲು ಹೇಳಿರುವ RBI, ಈ ನೋಟುಗಳು ಎಂದಿನಂತೆ ಚಲಾವಣೆಯಲ್ಲಿ ಇರಲಿವೆ ಎಂದು ಸ್ಪಷ್ಟಪಡಿಸಿದೆ. ದೊಡ್ಡ ಮುಖಬೆಲೆಯ ನೋಟುಗಳ ಚಿಲ್ಲರೆ ಪಡೆಯಲು ಜನರು ಪರದಾಡುತ್ತಿದ್ದು, ಇಂತಹ ನೋಟುಗಳನ್ನು ಕೇವಲ ದೊಡ್ಡ ವ್ಯವಹಾರಗಳಲ್ಲಿ ಮಾತ್ರ ಉಪಯೋಗಿಸಬೇಕು ಎಂಬುದು RBI ಅಭಿಪ್ರಾಯವಾಗಿದೆ.
ATM ನಿಂದ ಕಾಣೆಯಾಗಲಿವೆ ರೂ.2000 ಮುಖಬೆಲೆಯ ನೋಟುಗಳು
ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮೇಣ ರೂ.2000 ಮುಖ ಬೆಲೆಯ ಚಲಾವಣೆಯನ್ನು ಕಮ್ಮಿ ಮಾಡಲು ನಿರ್ಧರಿಸಿದೆ. ಸಣ್ಣ ಪಟ್ಟಣ ಹಾಗೂ ನಗರಗಳಲ್ಲಿರುವ ATMಗಳಲ್ಲಿ ರೂ.2000 ಮುಖಬೆಲೆಯ ನೋಟುಗಳನ್ನು ಹಾಕಲಾಗುವ ಸ್ಲಾಟ್ ಗಳನ್ನು ತೆಗೆದುಹಾಕಲಾಗುತ್ತಿದೆ. ಆದರೆ, ದೊಡ್ಡ ದೊಡ್ಡ ಪಟ್ಟಣಗಳಲ್ಲಿನ ATMಗಳಲ್ಲಿ ಇವುಗಳ ಸಂಖ್ಯೆಯನ್ನು ಕ್ರಮೇಣವಾಗಿ ಕಡಿಮೆ ಮಾಡಲಾಗುವುದು. ಈ ಸ್ಲಾಟ್ ಗಳ ಜಾಗದಲ್ಲಿ ಶೀಘ್ರವೇ ರೂ.100, ರೂ.200 ಹಾಗೂ ರೂ.50 ಸ್ಲಾಟ್ ಗಳನ್ನು ಕ್ರಮೇಣ ಹೆಚ್ಚಿಸಲಾಗುತ್ತಿದ್ದು, ಕ್ರಮಬದ್ಧವಾಗಿ ಈ ಕೆಲಸ ಮಾಡಲಾಗುವುದು ಎಂದು RBI ಹೇಳಿದೆ.