Building Collapses in Thane: ಥಾಣೆಯಲ್ಲಿ ಕಟ್ಟಡ ಕುಸಿತದಿಂದ 7 ಆಘಾತಕಾರಿ ಸಾವು, ಮುಂದುವರೆದ ರಕ್ಷಣಾ ಕಾರ್ಯಾಚರಣೆ

Building collapses in Maharashtra's Thane: ಅಪಘಾತ ಸಂಭವಿಸಿದ ಕಟ್ಟಡವು 26 ವರ್ಷ ಹಳೆಯದು. ಅಪಘಾತದ ನಂತರ ಕಟ್ಟಡವನ್ನು ಮೊಹರು ಮಾಡಲಾಗಿದೆ. ಮಹಾರಾಷ್ಟ್ರ ಸರ್ಕಾರದ (Maharashtra Government) ಸಚಿವ ಏಕನಾಥ್ ಶಿಂಧೆ ಮೃತರ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Written by - Yashaswini V | Last Updated : May 29, 2021, 07:35 AM IST
  • ಮುಂಬೈ ಬಳಿಯ ಥಾಣೆಯಲ್ಲಿ ದೊಡ್ಡ ಅಪಘಾತ
  • ಐದು ಅಂತಸ್ತಿನ ಕಟ್ಟಡ ಚಪ್ಪಡಿ ಕುಸಿತ
  • ಮೃತರ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಮಹಾರಾಷ್ಟ್ರ ಸರ್ಕಾರ
Building Collapses in Thane: ಥಾಣೆಯಲ್ಲಿ ಕಟ್ಟಡ ಕುಸಿತದಿಂದ  7 ಆಘಾತಕಾರಿ ಸಾವು, ಮುಂದುವರೆದ ರಕ್ಷಣಾ ಕಾರ್ಯಾಚರಣೆ  title=
Building Collapses in Thane

ಮುಂಬೈ: Building collapses in Maharashtra's Thane- ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ದುರಂತದ ಸುದ್ದಿ ಬೆಳಕಿಗೆ ಬಂದಿದೆ. ಇಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಮುಂಬೈನ ಉಲ್ಹಾಸ್‌ನಗರದಲ್ಲಿ 5 ಅಂತಸ್ತಿನ ಕಟ್ಟಡದ ಒಂದು ಭಾಗ ಹಠಾತ್ತನೆ ಕುಸಿದು 7 ಜನರು ಸಾವನ್ನಪ್ಪಿದ್ದಾರೆ. ಅಪಘಾತದ ಕಾರಣ ಸ್ಪಷ್ಟವಾಗಿಲ್ಲ.

ಮಾಹಿತಿಯ ಪ್ರಕಾರ, ಉಲ್ಹಾಸ್‌ನಗರದ ಸಿದ್ಧಿ ಕಟ್ಟಡದ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಹಠಾತ್ ಅಪಘಾತವು ಪ್ರದೇಶದಲ್ಲಿ ಭೀತಿ ಸೃಷ್ಟಿಸಿದ್ದು ಸುದ್ದಿ ಬಂದ ಕೂಡಲೇ ಥಾಣೆ ಮುನ್ಸಿಪಲ್ ಕಾರ್ಪೋರೇಶನ್ ಮತ್ತು ಟಿಡಿಆರ್ಎಫ್ ತಂಡ ಸ್ಥಳಕ್ಕೆ ತಲುಪಿತು.

7 ಶವಗಳನ್ನು ವಶಪಡಿಸಿಕೊಳ್ಳಲಾಗಿದೆ:
ಅಗ್ನಿಶಾಮಕ ದಳದ  (Fire Brigade) ತಂಡ ಸ್ಥಳಕ್ಕೆ ತಲುಪಿ ಅವಶೇಷಗಳಲ್ಲಿ ಸಿಲುಕಿದ್ದ 7 ಶವಗಳನ್ನು ಹೊರತೆಗೆದಿದೆ. ಈ ಕಟ್ಟಡವು ಸುಮಾರು 26 ವರ್ಷ ಹಳೆಯದು ಎಂದು ಹೇಳಲಾಗುತ್ತಿದೆ. ಅಪಘಾತದ ನಂತರ ಕಟ್ಟಡವನ್ನು ಮೊಹರು ಮಾಡಲಾಗಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮಹಾರಾಷ್ಟ್ರ ಸರ್ಕಾರದ (Maharashtra Government) ಸಚಿವ ಏಕನಾಥ ಶಿಂಧೆ 5 ಲಕ್ಷ ರೂ.ಗಳ ಪರಿಹಾರ ಮೊತ್ತವನ್ನು ಘೋಷಿಸಿದ್ದಾರೆ.

ಇದನ್ನೂ ಓದಿ- ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಆಫ್ಘಾನ್, ಪಾಕ್, ಬಾಂಗ್ಲಾದ ಮುಸ್ಲಿಮೇತರರಿಗೆ ಕೇಂದ್ರದ ಅರ್ಜಿ ಆಹ್ವಾನ

ಪ್ರಕರಣದ ತನಿಖೆ ನಡೆಯುತ್ತಿದೆ :
ಕಟ್ಟಡ ಕುಸಿತಕ್ಕೆ (Building Collapse) ಕಾರಣವೇನು ಎಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ. ಇನ್ನೂ ಕೆಲವರು ಕಟ್ಟಡದ ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಅದೇ ಸಮಯದಲ್ಲಿ, ಥಾಣೆ ಮಹಾನಗರ ಪಾಲಿಕೆಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಗ್ನಿಶಾಮಕ ದಳದ ತಂಡದೊಂದಿಗೆ ಥಾಣೆ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳು ಕೂಡ ಸ್ಥಳದಲ್ಲಿದ್ದಾರೆ. ಅವರು ಅವಶೇಷಗಳಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸುವಲ್ಲಿ ನಿರತರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ- ಜೂನ್ 1 ರಿಂದ ದೇಶೀಯ ವಿಮಾನ ಪ್ರಯಾಣ ದುಬಾರಿ

ಕಟ್ಟಡ ಕುಸಿತದಲ್ಲಿ ಮಡಿದವರ ಪಟ್ಟಿ:
1) ಪುನೀತ್ ಬಜೋಮಲ್ ಚಂದ್ವಾನಿ (ವಯಸ್ಸು -14 ವರ್ಷ)
2) ದಿನೇಶ್ ಬಜೋಮಲ್ ಚಂದ್ವಾನಿ (ವಯಸ್ಸು - 40 ವರ್ಷ)
3) ದೀಪಕ್ ಬಜೋಮಲ್ ಚಂದ್ವಾನಿ (ವಯಸ್ಸು -42 ವರ್ಷ)
4) ಮೋಹಿನಿ ಬಜೋಮಲ್ ಚಂದ್ವಾನಿ (ವಯಸ್ಸು - 45 ವರ್ಷ)
5) ಕೃಷ್ಣ ಇನುಚಂದ್ ಬಜಾಜ್ (ವಯಸ್ಸು -26 ವರ್ಷ)
6) ಅಮೃತ ಇನುಚಂದ್ ಬಜಾಜ್ (ವಯಸ್ಸು- 54 ವರ್ಷಗಳು)
7) ಲವ್ಲಿ ಬಜಾಜ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News