ಕೇವಲ ಅತ್ಯಲ್ಪ ಪ್ರಿಮಿಯಂ ಪಾವತಿಸಿ 5 ಲಕ್ಷ ರೂ.ವರೆಗೆ Corona Kvacha ಪಾಲಿಸಿ ಪಡೆಯಿರಿ

ಕರೋನಾ ವೈರಸ್ ಚಿಕಿತ್ಸೆಗಾಗಿ ವಿಮಾ ಕಂಪನಿಗಳು ಪರಿಚಯಿಸುತ್ತಿರುವ ಕರೋನಾ ಕವಚ್ ಪಾಲಿಸಿಗಳು ಜನರ ಪಾಲಿಗೆ ವರದಾನವಾಗಿಯೇ ಪರಿಣಮಿಸುತ್ತಿವೆ. ವಿಮಾ ಕಂಪನಿಗಳಲ್ಲದೆ, ಇದೀಗ ಬ್ಯಾಂಕುಗಳು ಸಹ ಈ ಪಾಲಿಸಿಯನ್ನು ಮಾರಾಟ ಮಾಡುತ್ತಿವೆ.

Last Updated : Aug 2, 2020, 05:35 PM IST
ಕೇವಲ ಅತ್ಯಲ್ಪ ಪ್ರಿಮಿಯಂ ಪಾವತಿಸಿ 5 ಲಕ್ಷ ರೂ.ವರೆಗೆ Corona Kvacha ಪಾಲಿಸಿ ಪಡೆಯಿರಿ title=

ನವದೆಹಲಿ: ಕರೋನಾ ವೈರಸ್ ಚಿಕಿತ್ಸೆಗಾಗಿ ವಿಮಾ ಕಂಪನಿಗಳು ಪರಿಚಯಿಸುತ್ತಿರುವ ಕರೋನಾ ಕವಚ್ ಪಾಲಿಸಿಗಳು ಜನರ ಪಾಲಿಗೆ ವರದಾನವಾಗಿಯೇ ಪರಿಣಮಿಸುತ್ತಿವೆ. ವಿಮಾ ಕಂಪನಿಗಳಲ್ಲದೆ, ಇದೀಗ ಬ್ಯಾಂಕುಗಳು ಸಹ ಈ ಪಾಲಿಸಿಯನ್ನು ಮಾರಾಟ ಮಾಡುತ್ತಿವೆ. ಇದಕ್ಕಾಗಿ ಬ್ಯಾಂಕ್ ಗಳು ವಿಮಾ ಕಂಪನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿವೆ.

ಇತೀಚೆಗಷ್ಟೇ ಕೆನರಾ ಬ್ಯಾಂಕ್ ಒಟ್ಟು ಮೂರು ವಿಮಾ ಕಂಪನಿಗಳ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂರು ಕಂಪನಿಗಳಲ್ಲಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್, ಬಜಾಜ್ ಅಲಿಯಾನ್ಸ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಎಚ್‌ಡಿಎಫ್‌ಸಿ ಅರ್ಗೋ ಹೆಲ್ತ್ ಇನ್ಶುರೆನ್ಸ್ ಶಾಮೀಲಾಗಿವೆ.

ಎಷ್ಟು ಕವರೇಜ್ ಸಿಗಲಿದೆ?
ಈ ಪಾಲಿಸಿಯಡಿಯಲ್ಲಿ ಒಬ್ಬ ವ್ಯಕ್ತಿಯು ಕನಿಷ್ಠ 50,000 ರಿಂದ 5 ಲಕ್ಷ ರೂ. ವಿಮಾ ಮಾಡಿಸಬಹುದಾಗಿದೆ. ವೈಯಕ್ತಿಕವಾಗಿ ಅಥವಾ ಕುಟುಂಬಕ್ಕಾಗಿ ಈ ಪಾಲಸಿಯಿನ್ನು ಖರೀದಿಸಬಹುದು. ರೋಗದ ಚಿಕಿತ್ಸೆಯ ಸಮಯದಲ್ಲಿ ಆಸ್ಪತ್ರೆಯ ಹಾಸಿಗೆಯ ಬಾಡಿಗೆಗೆ ಯಾವುದೇ ನಿಗದಿತ ಮಿತಿಯಿಲ್ಲ ಮತ್ತು ಇದನ್ನು ಮನೆಯಲ್ಲಿಯೇ ಇದ್ದುಕೊಂಡು 15 ದಿನಗಳ ಚಿಕಿತ್ಸೆಗೆ ಸಹ ಬಳಸಬಹುದು. ಈ ಪಾಲಿಸಿಯಡಿ ವಿಮಾ ಅವಧಿ ಗರಿಷ್ಠ  ಒಂಭತ್ತುವರೆ ತಿಂಗಳು ಇರಲಿದೆ.

ವಿಮಾ ನಿಯಂತ್ರಕ IRDAI ಕರೋನಾ ಕವಚ್ ಪಾಲಸಿಯನ್ನು ಗ್ರೂಪ್ ಪಾಲಸಿಯಡಿ ಸೇರಿಸಲು ವಿಮಾ ಕಂಪನಿಗಳಿಗೆ ನಿರ್ದೇಶನ ನೀಡಿದೆ. ಇದರೊಂದಿಗೆ ಕಂಪೆನಿಗಳು ಕರೋನಾ ಕವಚ್ ಪಾಲಿಸಿಯನ್ನು ಗ್ರೂಪ್ ಇನ್ಸುರೆನ್ಸ್ ಪಾಲಸಿಯಾಗಿಯೂ ಸಹ ನೀಡಲು ಸಾಧ್ಯವಾಗಲಿದೆ. ಇದು ಕೋಟ್ಯಂತರ ದುಡಿಯುವ ಜನರಿಗೆ ನೇರವಾಗಿ ಪ್ರಯೋಜನವನ್ನು ನೀಡಲಿದೆ. ಕರೋನದ ವಿರುದ್ಧ ರಕ್ಷಣೆಗಾಗಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಕಂಪನಿಗಳು ಮತ್ತು ಇತರ ವ್ಯಾಪಾರ ಘಟಕಗಳು ತಮ್ಮ ಉದ್ಯೋಗಿಗಳಿಗೆ ವಿಮಾ ರಕ್ಷಣೆಯನ್ನು ಒದಗಿಸಲು ಇದು ಸಹಾಯ ಮಾಡುತ್ತದೆ.

ಜುಲೈ 10 ರಂದು ಆರಂಭಗೊಂಡ ಈ ಅಲ್ಪಾವಧಿಯ ವೈಯಕ್ತಿಕ ಕರೋನಾ ಕವಚ್ ಆರೋಗ್ಯ ವಿಮಾ ಪಾಲಿಸಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲಾ 30 ಸಾಮಾನ್ಯ ವಿಮಾ ಕಂಪನಿಗಳು ಈ ಅಲ್ಪಾವಧಿಯ ಪಾಲಿಸಿಯನ್ನು ನೀಡಿವೆ. 
 

Trending News