General Insurance Premium: ಮಾಧ್ಯಮ ವರದಿಗಳ ಪ್ರಕಾರ, ಭಾರತೀಯ ಕಂಪನಿಗಳು ಮತ್ತು ವಾಹನ ಮಾಲೀಕರಿಗೆ ವಿಮಾ ಮೊತ್ತವು ಶೀಘ್ರದಲ್ಲೇ ಹೆಚ್ಚಾಗಲಿದೆ. ಉಕ್ರೇನ್ನಲ್ಲಿನ ಯುದ್ಧದ ಪರಿಣಾಮದಿಂದಾಗಿ ವಿಮಾ ಪ್ರೀಮಿಯಂನ ಮೊತ್ತ ಹೆಚ್ಚಾಗುವುದಕ್ಕೆ ಕಾರಣ ಎನ್ನಲಾಗಿದೆ.
1 September 2022: ಸೆಪ್ಟೆಂಬರ್ ತಿಂಗಳು ಆರಂಭಗೊಳ್ಳಲು ಎರಡೇ ದಿನಗಳು ಬಾಕಿ ಉಳಿದಿವೆ. ಹೊಸ ತಿಂಗಳ ಆರಂಭದೊಂದಿಗೆ ಶ್ರೀಸಾಮಾನ್ಯರ ಜೀವನದಲ್ಲಿ ಕೆಲ ಮಹತ್ವದ ಬದಲಾವಣೆಗಳು ಕೂಡ ಸಂಭವಿಸಲಿವೆ. ಬ್ಯಾಂಕಿಂಗ್, ಟೋಲ್ ಟ್ಯಾಕ್ಸ್ ಹಾಗೂ ಆಸ್ತಿ ಸೇರಿದಂತೆ ಹಲವು ಸೇವೆಗಳ ನಿಯಮಗಳಲ್ಲಿ ಬದಲಾವಣೆಗಳು ಸಂಭವಿಸಲಿವೆ.
ದೇಶದ ಬಡ ಜನರನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 2015ರಲ್ಲಿ ಸುರಕ್ಷ ಭೀಮ ಯೋಜನೆಯನ್ನ (PMSBY) ಪ್ರಾರಂಭಿಸಿತ್ತು. ಈ ಯೋಜನೆಯಲ್ಲಿ ವರ್ಷಕ್ಕೆ 12 ರೂ.ಗಳ ಪ್ರೀಮಿಯಂ ಠೇವಣಿ ಇರಿಸುವ ಮೂಲಕ ನೀವು ಸರ್ಕಾರದಿಂದ 2 ಲಕ್ಷ ರೂ.ವರೆಗೆ ಮರಣ ವಿಮೆ ಖಾತರಿ ಪಡೆಯಬಹುದು.
Health Insurance: ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳ ದೃಷ್ಟಿಯಿಂದ, ವಿಮೆ ಇಂದು ಎಲ್ಲರಿಗೂ ಬಹಳ ಮುಖ್ಯವಾಗಿದೆ. ವಿಮಾ ಕಂಪನಿಗಳು ಗ್ರಾಹಕರಿಂದ ಹಣವನ್ನು ವಸೂಲಿ ಮಾಡುವ ಬದಲು ಫಿಟ್ನೆಸ್ಗಾಗಿ ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿವೆ, ಇದರಿಂದ ಅವರು ಆರೋಗ್ಯ ವಿಮೆಯನ್ನೂ ಪಡೆಯುತ್ತಾರೆ ಮತ್ತು ಅದರ ಖರ್ಚಿನ ಭಾರವನ್ನು ಹೊರುವುದಿಲ್ಲ.
ನಿಗದಿತ ಸಮಯದಲ್ಲಿ ಆದಾಯ ಸಿಗದಿರುವ ವರ್ಗಕ್ಕೆ ಅತ್ಯಂತ ಮಹತ್ವವಾಗಿರುವ ಈ ಪ್ರಸ್ತಾವನೆ
ವಿಮಾ ನಿಯಂತ್ರಣ ಸಂಸ್ಥೆಯಿಂದ ಮುಂಚಿತವಾಗಿ ಪಾಲಿಸಿಯ ವಿಮಾ ಪ್ರೀಮಿಯಂ ಪಾವತಿಸುವ ಅವಕಾಶ
ಪ್ರೀಮಿಯಂ ಮೇಲೆ ರಿಯಾಯಿತಿ ಅಥವಾ ಬಡ್ಡಿ ಪಾವತಿಯ ಪ್ರಸ್ತಾವನೆ ಇರಿಸಿರುವ ವಿಮಾ ನಿಯಂತ್ರಣ ಸಂಸ್ಥೆ
ಟ್ರಾಫಿಕ್ ವಾಯ್ಲೇಶನ್ಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಜನರ ಹೆಸರು ಅಗ್ರಸ್ಥಾನದಲ್ಲಿದೆ. ನಿರಂತರವಾಗಿ ಹೆಚ್ಚುತ್ತಿರುವ ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳ ದೃಷ್ಟಿಯಿಂದ, ಪರವಾನಗಿ ವಿಮಾ ನಿಯಂತ್ರಣ ಸಂಸ್ಥೆ ಐಆರ್ಡಿಎ ವಾಹನ ವಿಮಾ ಪಾಲಿಸಿಯೊಂದಿಗೆ 'ಸಂಚಾರ ಉಲ್ಲಂಘನೆ ಪ್ರೀಮಿಯಂ' ಅನ್ನು ಸೇರಿಸಲು ಪ್ರಸ್ತಾಪಿಸಿದೆ.
ಕರೋನಾ ವೈರಸ್ ಚಿಕಿತ್ಸೆಗಾಗಿ ವಿಮಾ ಕಂಪನಿಗಳು ಪರಿಚಯಿಸುತ್ತಿರುವ ಕರೋನಾ ಕವಚ್ ಪಾಲಿಸಿಗಳು ಜನರ ಪಾಲಿಗೆ ವರದಾನವಾಗಿಯೇ ಪರಿಣಮಿಸುತ್ತಿವೆ. ವಿಮಾ ಕಂಪನಿಗಳಲ್ಲದೆ, ಇದೀಗ ಬ್ಯಾಂಕುಗಳು ಸಹ ಈ ಪಾಲಿಸಿಯನ್ನು ಮಾರಾಟ ಮಾಡುತ್ತಿವೆ.
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ವಿಮಾ ಪಾಲಸಿ ಧಾರಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಹೌದು ಇದೀಗ ವಿಮಾ ಪಾಲಸಿ ಹೊಂದಿದವರು ತಮ್ಮ ಮಾರ್ಚ್ ಪಾಲಿಸಿಯ ಪ್ರೀಮಿಯಂ ಅನ್ನು ಮೇ 31 ರವರೆಗೆ ಭರ್ತಿ ಮಾಡಲು ಇದರಿಂದ ಸಾಧ್ಯವಾಗಲಿದೆ.
ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಎಲ್ಲಾ ಆರೋಗ್ಯ ವಿಮಾ ನೀಡುವ ಕಂಪನಿಗಳಿಗೆ ತಮ್ಮ ಗ್ರಾಹಕರಿಗೆ ಕಂತುಗಳಲ್ಲಿ ಪ್ರೀಮಿಯಂ ಪಾವತಿಸುವ ಆಯ್ಕೆಯನ್ನು ನೀಡುವಂತೆ ಕೇಳಿದೆ. ಹೀಗಾಗಿ ಗ್ರಾಹಕರು ಮುಂದಿನ ಒಂದು ವರ್ಷದ ಅವಧಿಗೆ ತಮ್ಮ ಆರೋಗ್ಯ ವಿಮಾ ಪ್ರೀಮಿಯಂ ಅನ್ನು ಕಂತುಗಳಲ್ಲಿ ಜಮಾ ಮಾಡಬಹುದು ಎಂದು ಇರ್ಡಾ ಹೇಳಿದೆ. ಈ ಸೌಲಭ್ಯವನ್ನು ಮಾರ್ಚ್ 21, 2021 ರವರೆಗೆ ಸುಮಾರು ಒಂದು ವರ್ಷದ ಅವಧಿಗೆ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.