ನವದೆಹಲಿ: ಲಾಕ್ ಡೌನ್ ಹಾಗೂ ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆ ಕೇಂದ್ರ ಸರ್ಕಾರ ಮಾಜಿ ನೌಕರರು ಹಾಗೂ ಪೆನ್ಷನ್ ಧಾರಕರಿಗೆ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಈ ಕುರಿತು ಹೇಳಿಕೆ ಪ್ರಕಟಿಸಿರುವ ಕೇಂದ್ರ ಸರ್ಕಾರ ಯಾವುದೇ ನೌಕರರ ಪೆನ್ಷನ್ ನಲ್ಲಿ ಯಾವುದೇ ರೀತಿಯ ಕಡಿತ ಮಾಡಲಾಗುವುದಿಲ್ಲ ಎಂದು ಪ್ರಕಟಿಸಿದೆ. ಕಳೆದ ಎರಡು ದಿನಗಳಿಂದ ಕೇಂದ್ರ ಸರ್ಕಾರ ಪೆನ್ಷನ್ ಧಾರಾಕಾರ ಪೆನ್ಷನ್ ನಲ್ಲಿ ಕಡಿತಗೊಳಿಸುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಕೇಳಿಬರಲಾರಂಭಿಸಿದ್ದವು.
ಭಾನುವಾರ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ವಿತ್ತ ಸಚಿವಾಲಯ, ಯಾವುದೇ ಮಾಜಿ ಕೇಂದ್ರ ಸರ್ಕಾರಿ ನೌಕರರ ಪೆನ್ಷನ್ ನಲ್ಲಿ ಯಾವುದೇ ರೀತಿಯ ಕಡಿತ ಮಾಡಲಾಗುವುದಿಲ್ಲ ಎಂದು ಹೇಳಿದೆ.
ಕೊರೊನಾ ವೈರಸ್ ತಡೆಗಟ್ಟುವಲ್ಲಿ ತೆಗೆದುಕೊಂಡ ಕೆಲ ನಿರ್ಧಾರಗಳಿಂದ ಕೇಂದ್ರ ಸರ್ಕಾರಕ್ಕ ಭಾರಿ ಆರ್ಥಿಕ ಹೊರೆ ಬಿದ್ದಿದ್ದು, ಇನ್ನೊಂದೆಡೆ ಲಾಕ್ ಡೌನ್ ಹಿನ್ನೆಲೆ ಕಂದಾಯ ಹಾಗೂ ಡಿಸ್ ಇನ್ವೆಸ್ಟ್ಮೆಂಟ್ ಸೇರಿದಂತೆ ಇತರೆ ಆದಾಯಗಳ ಮೇಲೆ ಭಾರಿ ಪರಿಣಾಮ ಉಂಟಾಗುತ್ತದೆ. ಕೇಂದ್ರ ಹಣಕಾಸು ಸಚಿವಾಲಯ ಮಾಡಿರುವ ಈ ಟ್ವೀಟ್ ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಹಂಚಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಸಚಿವಾಲಯ, "ಕೇಂದ್ರ ಸರ್ಕಾರ, ಪೆನ್ಷನ್ ಧಾರಾಕಾರ ಪೆನ್ಷನ್ ನಲ್ಲಿ ಶೇ.20 ರಷ್ಟು ಕಡಿತಮಾಡಲಿದೆ ಎಂಬ ಸುದ್ದಿಗಳು ಹರಿದಾದುತ್ತಿದ್ದು, ಇದೊಂದು ಸುಳ್ಳು ಸುದ್ದಿಯಾಗಿದೆ. ಅಷ್ಟೇ ಅಲ್ಲ ಸರ್ಕಾರಿ ನೌಕರರ ವೇತನ ಹಾಗೂ ಪೆನ್ಷನ್, ಸರ್ಕಾರದ ನಗದು ನಿರ್ವಹಣೆಗೆ ಸಂಬಂಧಿದ ನಿರ್ದೇಶನಗಳಿಂದ ಪ್ರಭಾವಿತಗೊಳ್ಳದು" ಎಂದು ಹೇಳಿದೆ.