ನವದೆಹಲಿ: ಭಾರತದಲ್ಲಿ ಶೀಘ್ರದಲ್ಲೇ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊರೊನಾವೈರಸ್ ಲಸಿಕೆ (Corona Vaccine) ಲಭ್ಯವಾಗುವ ಸಾಧ್ಯತೆಯಿದೆ. ಬೆಂಗಳೂರು ಮೂಲದ ಔಷಧೀಯ ಕಂಪನಿ ಜೈಡಸ್ ಕ್ಯಾಡಿಲಾ (Zydus Cadila) ತನ್ನ ಲಸಿಕೆಯನ್ನು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಬಳಕೆಗಾಗಿ ಅನುಮತಿ ನೀಡುವಂತೆ ಕೋರಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಅರ್ಜಿ ಸಲ್ಲಿಸಿದೆ.
ಜೈಡಸ್ ಕ್ಯಾಡಿಲಾ ತನ್ನ ZyCoV-D 3-ಡೋಸ್ ಕೋವಿಡ್ ಶಾಟ್‌ಗಾಗಿ ತುರ್ತು ಬಳಕೆಯ ಅನುಮೋದನೆಯನ್ನು ಕೋರಿದ್ದಾರೆ. ಅದು "ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್‌ಎ ಲಸಿಕೆ" ಆಗಿದೆ. ಶಾಟ್ "ಸೂಜಿ ಮುಕ್ತ" ಮತ್ತು "ಮಕ್ಕಳಿಗೆ ಸುರಕ್ಷಿತವಾಗಿದೆ" ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯು ವಾರ್ಷಿಕವಾಗಿ 120 ಮಿಲಿಯನ್ ಡೋಸ್ ಶಾಟ್ ತಯಾರಿಸುವ ಗುರಿ ಹೊಂದಿದೆ:
ಜೈಕೋವ್-ಡಿಗೆ ಅನುಮೋದನೆ ಸಿಕ್ಕರೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್, ಭಾರತ್ ಬಯೋಟೆಕ್ನ ಕೊವಾಕ್ಸಿನ್ (Covaxin), ರಷ್ಯಾದ ಸ್ಪುಟ್ನಿಕ್ ವಿ ಮತ್ತು ಯುಎಸ್ ನಿರ್ಮಿತ ಮಾಡರ್ನಾ ನಂತರ ಭಾರತದಲ್ಲಿ ಬಳಕೆಗೆ ಲಭ್ಯವಾಗುವ ಐದನೇ ಲಸಿಕೆ ಇದಾಗಲಿದೆ.
ಇದನ್ನೂ ಓದಿ- Corona Vaccine New Guidelines: ಗರ್ಭಿಣಿಯರಿಗೆ ಕರೋನ ಲಸಿಕೆ ಸುರಕ್ಷಿತವಾಗಿದೆಯೇ? ಇಲ್ಲಿದೆ ಹೊಸ ಮಾರ್ಗಸೂಚಿ
ರೋಗಲಕ್ಷಣದ ಕೋವಿಡ್ ಪ್ರಕರಣಗಳ ವಿರುದ್ಧ ಅದರ ಲಸಿಕೆ ಶೇಕಡಾ 66.6 ಮತ್ತು ಮಧ್ಯಮ ಕಾಯಿಲೆಗೆ 100 ಪ್ರತಿಶತ ಪರಿಣಾಮಕಾರಿ ಎಂದು ಜೈಡಸ್ ಕ್ಯಾಡಿಲಾ (Zydus Cadila) ಕಂಪನಿ ಹೇಳಿಕೊಂಡಿದೆ. 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಈ ಲಸಿಕೆ ಸುರಕ್ಷಿತವಾಗಿದೆ ಎಂದು ಅದು ಹೇಳಿದೆ. ಆದರೆ ಅದರ ಪ್ರಾಯೋಗಿಕ ಡೇಟಾವನ್ನು ಅದು ಇನ್ನೂ ಬಹಿರಂಗಗೊಳಿಸಿಲ್ಲ.
ಜೈಕೋವ್-ಡಿ 12-18 ವರ್ಷ ವಯಸ್ಸಿನ ಸುಮಾರು 28,000 ಕ್ಕೂ ಹೆಚ್ಚು ಸ್ವಯಂಸೇವಕರೊಂದಿಗೆ ಕೊನೆಯ ಹಂತದ ಪ್ರಯೋಗದಲ್ಲಿ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ತೋರಿಸಿದೆ ಎಂದು ಜೈಡಸ್ ಹೇಳಿಕೊಂಡಿದೆ.
ಇದನ್ನೂ ಓದಿ- ಇಲ್ಲಿ ಎಲ್ಲಾ ಔಷಧಿಗಳ ಮೇಲೆ ಸಿಗಲಿದೆ ರಿಯಾಯಿತಿ, ಸಮಯಕ್ಕೆ ಸರಿಯಾಗಿ ಸಿಗಲಿದೆ ಡೆಲಿವೆರಿ
ಜೈಕೋವ್-ಡಿ (ZyCoV-D) ಲಸಿಕೆ ಭಾರತದಲ್ಲಿ ಇಲ್ಲಿಯವರೆಗೆ ಬಳಸಿದ ಶಾಟ್ ಗಳಿಗಿಂತ ಭಿನ್ನವಾಗಿ ಮೂರು-ಡೋಸ್ ಕಟ್ಟುಪಾಡು ಹೊಂದಿದೆ. ಇದನ್ನು ಸೂಜಿ ಮುಕ್ತ ವ್ಯವಸ್ಥೆಯ ಮೂಲಕ ಅನ್ವಯಿಸಲಾಗುತ್ತದೆ ಎಂದು ಹೇಳಲಾಗಿದೆ.
ಲಸಿಕೆಯನ್ನು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ ಕನಿಷ್ಠ ಮೂರು ತಿಂಗಳವರೆಗೆ 25 ಡಿಗ್ರಿ ತಾಪಮಾನದಲ್ಲಿ ಉತ್ತಮ ಸ್ಥಿರತೆಯನ್ನು ತೋರಿಸಿದೆ ಎಂದು ಕಂಪನಿಯು ಹೇಳುತ್ತದೆ, ಇದು ಶಾಟ್ ಅನ್ನು ಸಾಗಿಸಲು ಮತ್ತು ಸಂಗ್ರಹಿಸಲು ಸುಲಭವಾಗಿಸುತ್ತದೆ ಮತ್ತು ಯಾವುದೇ ಕೋಲ್ಡ್ ಚೈನ್ ಸ್ಥಗಿತ ಸವಾಲುಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.