ಭಾರತದ ಔಷಧ ನಿಯಂತ್ರಕರು ಶುಕ್ರವಾರ ಜೈಡಸ್ ಕ್ಯಾಡಿಲಾ ಕಂಪನಿಯ ಮೂರು ಡೋಸ್ ಕೋವಿಡ್ -19 ಡಿಎನ್ಎ ಲಸಿಕೆಯನ್ನು ಅನುಮೋದಿಸಿದ್ದಾರೆ. 12 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರು ಮತ್ತು ಮಕ್ಕಳ ಮೇಲೆ ಈ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ.
Zydus Cadila ಕೊವಿಡ್ ಲಸಿಕೆಯ ಹೆಸರು ZyCov-D. ಭಾರತದ ಔಷಧ ನಿಯಂತ್ರಕ (DCGI)ನ ತಜ್ಞರ ಸಮಿತಿಯು ಶುಕ್ರವಾರ ತುರ್ತು ಬಳಕೆಗಾಗಿ ಈ ಲಸಿಕೆಯನ್ನು ಅನುಮೋದಿಸಿದೆ. ಈ ಲಸಿಕೆಯ 2 ಡೋಸ್ಗಳ ಪರಿಣಾಮದ ಬಗ್ಗೆ ಸಮಿತಿಯು ಫಾರ್ಮಾ ಕಂಪನಿಯಿಂದ ಹೆಚ್ಚುವರಿ ದತ್ತಾಂಶವನ್ನು ಕೋರಿದೆ.
Johnson & Johnson Covid-19 Vaccine: ಮಕ್ಕಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಕೋವಿಡ್ -19 ಲಸಿಕೆಯ (Covid-19 Vaccine) ಕುರಿತು ನಡೆಯುತ್ತಿರುವ ಸಂಶೋಧನೆಯ ಫಲಿತಾಂಶಗಳು ಮುಂದಿನ ತಿಂಗಳು ಬರಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Union Health Minister Mansukh Mandavia) ಹೇಳಿದ ಸಮಯದಲ್ಲಿ ಜಾನ್ಸನ್ ಮತ್ತು ಜಾನ್ಸನ್ ಅನುಮತಿ ಕೋರಿದ ಸುದ್ದಿ ಬಂದಿದೆ.
ರೋಗಲಕ್ಷಣದ ಕೋವಿಡ್ ಪ್ರಕರಣಗಳ ವಿರುದ್ಧ ಅದರ ಲಸಿಕೆ ಶೇಕಡಾ 66.6 ಮತ್ತು ಮಧ್ಯಮ ಕಾಯಿಲೆಗೆ 100 ಪ್ರತಿಶತ ಪರಿಣಾಮಕಾರಿ ಎಂದು ಜೈಡಸ್ ಹೇಳಿಕೊಂಡಿದೆ. ಇದಲ್ಲದೆ 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಸುರಕ್ಷಿತವಾಗಿದೆ ಎಂದು ಅದು ಹೇಳಿದೆ.
Zydus Cadila Virafin - ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆಯೇ ಇಂದು ದೇಶದ ಔಷಧ ನಿಯಂತ್ರಕ ಪ್ರಾಧಿಕಾರ (DCGI) ಶುಕ್ರವಾರ ಕೊರೊನಾ ರೋಗಿಗಳ ಚಿಕ್ತಿತ್ಸೆಯ ವೇಳೆ ಬಳಸಲಾಗುವ ಔಷಧಿ ವಿರಾಫಿನ್ ಗೆ ಅನುಮತಿ ನೀಡಿದೆ.
Coronavirus News - ಪೆಗಿಲೇಟೆಡ್ ಇಂಟರ್ಫೆರಾನ್ ಆಲ್ಫಾ 2 ಬಿ ಔಷಧಿ ತನ್ನ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿ ಕೋವಿಡ್ -19 ಚಿಕಿತ್ಸೆಗೆ ಸಂಬಂಧಿಸಿದಂತೆ ಉತ್ತೀಜನಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂದು Zydus Cadila ತನ್ನ ಹೇಳಿಕೆಯಲ್ಲಿ ತಿಳಿಸಿದೆ.
Zydus Cadila: ZyCov-D ಹೆಸರಿನ ಈ ಲಸಿಕೆ ಪರೀಕ್ಷೆ ಯಶಸ್ವಿಯಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕ್ಯಾಡಿಲಾ, ತನ್ನ ಲಸಿಕೆಯ ಮೊದಲ ಹಾಗೂ ಎರಡನೇ ಹಂತದ ಪರೀಕ್ಷೆಗಳು ಯಶಸ್ವಿಯಾಗಿವೆ ಎಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.