ನವದೆಹಲಿ: Zydus Cadila Virafin - ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆಯೇ ಇಂದು ದೇಶದ ಔಷಧ ನಿಯಂತ್ರಕ ಪ್ರಾಧಿಕಾರ (DCGI) ಶುಕ್ರವಾರ ಕೊರೊನಾ ರೋಗಿಗಳ ಚಿಕ್ತಿತ್ಸೆಯ ವೇಳೆ ಬಳಸಲಾಗುವ ಔಷಧಿ ವಿರಾಫಿನ್ ಗೆ ಅನುಮತಿ ನೀಡಿದೆ. ಇದಕ್ಕಾಗಿ Zydus Cadila ಇತ್ತೀಚೆಗಷ್ಟೇ ತನ್ನ Pegylated Interferon Alpha-2B (Virafin)ಗೆ ಅನುಮತಿ ನೀಡುವಂತೆ DCGI ಕೋರಿತ್ತು. ಇದೀಗ ಕೊರೊನಾ ಮಧ್ಯಮ ಲಕ್ಷಣಗಳು ಹೊಂದಿರುವ ರೋಗಿಗಳ ಮೇಲೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.
Drugs Controller General of India (DGCI) approves emergency use for Zydus Cadila's Pegylated Interferon alpha-2b, ‘Virafin’ for treating moderate #COVID19 infection in adults. pic.twitter.com/bXBvHZaIBp
— ANI (@ANI) April 23, 2021
ಜೈಡಸ್ ಕ್ಯಾಡಿಲಾ ಕಂಪನಿಯ ಈ ಔಷಧಿ ಒಂದು ಸಿಂಗಲ್ ಡೋಸ್ ಔಷಧಿಯಾಗಿದೆ. ಇದರಿಂದ ಕೊರೊನಾ (Covid-19) ರೋಗಿಗಳ ಚಿಕಿತ್ಸೆಗೆ ಭಾರಿ ಲಾಭ ಸಿಗಲಿದೆ. ಈ ಔಷಧಿಯ ರೆಗ್ಯುಲೆಟರಿ ಫೈಲಿಂಗ್ ವೇಳೆ ಹೇಳಿಕೆ ನೀಡದ್ದ ಕಂಪನಿ, ಕೊರೊನಾ ಆರಂಭಿಕ ಲಕ್ಷಣಗಳು ಕಂಡು ಬಂದ ರೋಗಿಗಳಿಗೆ ಈ ಇಂಜೆಕ್ಷನ್ ನೀಡುವುದರಿಂದ ರೋಗಿ ತಕ್ಷಣ ಚೇತರಿಸಿಕೊಳ್ಳಲಿದ್ದಾನೆ ಹಾಗೂ ಹಲವು ರೀತಿಯ ಜಟಿಲ ಸಮಸ್ಯೆಗಳು ಕೂಡ ನಿವಾರಣೆಯಾಗಳಿವೆ ಎಂದು ಹೇಳಿತ್ತು. ವಿರಾಫಿನ್ ಹೆಸರಿನ ಈ ಔಷಧಿ ಆಸ್ಪತ್ರೆ/ಇನ್ಸ್ಟಿಟ್ಯೂಟ್ ಗಳಲ್ಲಿ ಬಳಕೆಗಾಗಿ ವೈದ್ಯಕೀಯ ತಜ್ಞ ಸಲಹೆಯ ಜೊತೆಗೆ ಶೀಘ್ರದಲ್ಲಿಯೇ ಲಭ್ಯವಾಗಲಿದೆ.
ಇದನ್ನೂ ಓದಿ- Big Relief: ಇನ್ಮುಂದೆ ಕೊರೊನಾ ಚಿಕಿತ್ಸೆ ಕ್ಯಾಶ್ ಲೆಸ್, ವಿಮಾ ಕಂಪನಿಗಳಿಗೆ IRDAI ಆದೇಶ
ಈ ಔಷಧದ ಕುರಿತು ಹೇಳಿಕೆ ನೀಡಿರುವ ಕಂಪನಿ, ಮೂರನೇ ಹಂತದ ಪರೀಕ್ಷೆಯಲ್ಲಿ ಈ ಔಷಧಿ ಕೊರೊನಾ (Coronavirus)ವಿರುದ್ಧ ಹೋರಾಟ ಮಾಡುವ ರೋಗಿಗಳಲ್ಲಿ ಭಾರಿ ಪ್ರಭಾವ ತೋರಿಸಿದೆ ಎಂದಿದೆ. ಟ್ರಯಲ್ ವೇಳೆ ಬಹುತೇಕ ರೋಗಿಗಳ RT-PCR ವರದಿ ಕೇವಲ ಏಳು ದಿನಗಳಲ್ಲಿ ಋಣಾತ್ಮಕ ಹೊರಬಂದಿದೆ ಎಂದು ಕಂಪನಿ ಹೇಳಿದ್ದು, ಈ ಔಷಧಿ ವೇಗವಾಗಿ ವೈರಸ್ ಅನ್ನು ಮಟ್ಟಹಾಕುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ- ಬೆಳಗೆದ್ದು ಪ್ರಾಣಾಯಾಮ ಮಾಡಿ ಕರೋನಾ ಬರಲ್ಲ : ಡಾ. ಸುಧಾಕರ್
ಈ ಕುರಿತು ಹೇಳಿಕೆ ನೀಡಿರುವ ಕ್ಯಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಶ್ರವಿಲ್ ಪಟೇಲ್, ಕೊರೊನಾ ಸೋಂಕಿಗೆ ಗುರಿಯಾದ ರೋಗಿಗಳಿಗೆ ಈ ಔಷಧಿ ತಕ್ಷಣ ನೀಡಿದರೆ ಇದು ಆ ರೋಗಿಯಲ್ಲಿನ ವೈರಲ್ ಲೋಡ್ ಅನ್ನು ತಕ್ಷಣಕ್ಕೆ ನಿಯಂತ್ರಣಕ್ಕೆ ತರುವಲ್ಲಿ ಸಾಬೀತಾಗಲಿದೆ ಎಂದಿದ್ದಾರೆ. ಸದ್ಯ ಭಾರತ ಕೊರೊನಾ ವೈರಸ್ ನ ಎರಡನೇ ಅಲೆ ಎದುರಿಸುತ್ತಿದೆ. ಪ್ರತಿನಿತ್ಯ ದಾಖಲೆ ಮುರಿಯುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಸುಮಾರು 3.32 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ಸಕ್ರೀಯ ಪ್ರಕರಣಗಳ ಸಂಖ್ಯೆ 24 ಲಕ್ಷಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ-Oxygen ಕೊರತೆಯ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಈ ಉಪಾಯಗಳ ಮೇಲೆ ವಿಶೇಷ ಗಮನಕೇಂದ್ರೀಕರಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.