ನವದೆಹಲಿ: ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಕೇರಳ ಮೂಲದ ಭಾರತೀಯ ವಿದ್ಯಾರ್ಥಿನಿಗೆ ನಾವೆಲ್ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢವಾಗಿದೆ. ಈ ವಿದ್ಯಾರ್ಥಿನಿ ಸದ್ಯ ವುಹಾನ್ ವಿಶ್ವವಿದ್ಯಾನಿಲಯದಿಂದ ಭಾರತಕ್ಕೆ ಆಗಮಿಸಿದ್ದು, ಆಕೆಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಧೃಡಪಡಿಸಿದೆ. ಸದ್ಯ ಈ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಿದ್ದು, ಆಕೆಯನ್ನು ವೈದ್ಯರು ನಿರೀಕ್ಷಣೆಯಲ್ಲಿ ಇಟ್ಟಿದ್ದಾರೆ ಎನ್ನಲಾಗಿದೆ.
Update on Novel #Coronavirus: one positive case reported in #Kerala.#nCoV2020.
Read the details here:https://t.co/hYknfIKQiY@PMOIndia @drharshvardhan @AshwiniKChoubey @PIB_India @DDNewslive @airnewsalerts @ANI
— Ministry of Health (@MoHFW_INDIA) January 30, 2020
ಕೊರೊನಾ ವೈರಸ್ ದಾಳಿಗೆ ತುತ್ತಾಗಿರುವ ಚೀನಾದಲ್ಲಿ ಈಗಾಗಲೇ 170ಜನರು ಈ ಮಾರಕ ವೈರಸ್ ರೋಗಕ್ಕೆ ಬಲಿಯಾಗಿದ್ದಾರೆ. ಸದ್ಯ ಈ ರೋಗ ಚೀನಾದಿಂದ ಇತರೆ ದೇಶಗಳಿಗೆ ಹರಡುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ಅಂದರೇನು?
ಕೊರೊನಾ ವೈರಸ್, ವೈರಸ್ ಗಳ ಒಂದು ದೊಡ್ಡ ಸಮೂಹವಾಗಿದೆ. ಇದರಿಂದ ಶ್ವಾಶಕೋಶಕ್ಕೆ ಸಂಬಂಧಿಸಿದ ತೊಂದರೆ ಉಂಟಾಗುತ್ತದೆ. ಸಾಮಾನ್ಯ ಶೀತದ ಮೂಲಕ ಶ್ವಾಸಕೋಶ ಪ್ರಭಾವಿತಗೊಳ್ಳುತ್ತದೆ. ಈ ವೈರಸ್ ಸೋಂಕು ತಗಲುತ್ತಲೇ ಶ್ವಾಸಕ್ಕೆ ಸಂಬಂಧಿಸಿದ ತೊಂದರೆ, ಕೆಮ್ಮು, ಶೀತ ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತವೆ. ಹಾಗೂ ಇದರಿಂದ ನ್ಯೂಮೋನಿಯಾ ಕೂಡ ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಆದರೆ, ಇದೀಗ ಚೀನಾದಲ್ಲಿ ಕೊರೊನಾ ವೈರಸ್ ಗೆ ತುತ್ತಾದ ರೋಗಿಗಳ ಮೂಲಕ ಆಸ್ಪತ್ರೆಯ ದಾಯಿ ಹಾಗೂ ನೌಕರರಿಗೂ ಕೂಡ ಈ ಸೋಂಕು ತಗುಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಈ ವೈರಸ್ ಬಂದಿದ್ದಾದರೂ ಎಲ್ಲಿಂದ?
ವಿಜ್ಞಾನಿಗಳು ಹೇಳುವ ಪ್ರಕಾರ ಈ ವೈರಸ್ ಪ್ರಾಣಿಗಳ ಒಂದು ಪ್ರಜಾತಿಯಿಂದ ಮತ್ತೊಂದು ಪ್ರಜಾತಿಗೆ ಹರಡಿ ಬಳಿಕ ಮಾನವರಲ್ಲಿ ಸೋಂಕಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಈ ಬಾರಿ ಹರಡಿರುವ ಈ ವೈರಸ್ ಈ ಮೊದಲು ಹರಡಿರುವ ವೈರಸ್ ಗಿಂತ ಭಿನ್ನವಾಗಿದ್ದು, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಚೀನಾ ಇರುವರೆಗೆ ಈ ವೈರಸ್ ನ ಮೂಲದ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಚೀನಾದ ಪ್ಯಾಕಿಂಗ್ ಯುನಿವರ್ಸಿಟಿಯ ಹೆಲ್ತ್ ಸೈನ್ಸ್ ಸೆಂಟರ್ ನ ಸಂಶೋಧಕರ ಪ್ರಕಾರ ಈ ಕೊರೊನಾ ವೈರಸ್ ಸೋಂಕು ಹಾವುಗಳಿಂದ ಮನುಷ್ಯರಿಗೆ ಹರಡಿರುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನೊಂದೆಡೆ ಚೈನಾ ಅಕಾಡೆಮಿ ಆಫ್ ಸೈನ್ಸಸ್ ನಡೆಸಿರುವ ಇನ್ನೊಂದು ಅಧ್ಯಯನ ಬಾವಲಿ ಹಾಗೂ ಹಾವುಗಳಿಂದ ಈ ವೈರಸ್ ಉತ್ಪತ್ತಿಯಾಗಿದೆ ಎಂದು ಹೇಳಿದೆ.
ಈ ವೈರಸ್ ಸೋಂಕಿನ ಮೊದಲ ಪ್ರಕರಣ ಎಲ್ಲಿ ಪತ್ತೆಯಾಗಿದೆ?
ಮೊಟ್ಟಮೊದಲ ಬಾರಿಗೆ ಚೀನಾದ ವುಹಾನ್ ನಲ್ಲಿ ಸಿವಿಯರ್ ಏಕ್ಯೂಟ್ ರೆಸ್ಪಿರೆಟರಿ ಸಿಂಡ್ರೋಮ್ ಸೋಂಕಿನ ನಿಘೂಢ ಕೊರೊನಾ ವೈರಸ್ ಪ್ರಕರಣ ಬೆಳಕಿಗೆ ಬಂದಿದೆ. ಚೀನಾದಲ್ಲಿ ಈಗಾಗಲೇ ಸುಮಾರು 18 ಜನರು ಈ ಮಾರಕ ವೈರಸ್ ಕಾಯಿಲೆಗೆ ಬಲಿಯಾಗಿದ್ದು, 600ಕ್ಕೂ ಅಧಿಕ ಜನರಿಗೆ ಈ ವೈರಸ್ ನ ಸೋಂಕು ತಗುಲಿದೆ.