ದೇಶದಲ್ಲಿ ಕೋವಿಡ್‌ ಅಬ್ಬರ: ಒಂದೇ ದಿನದಲ್ಲಿ ಶೇ.3 ರಷ್ಟು ಹೆಚ್ಚಳವಾಯ್ತು ಪ್ರಕರಣ!

ಶನಿವಾರದಂದು 8,329 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ ದಿನ ಬಂದ ವರದಿಯ ಪ್ರಕಾರ, ಒಟ್ಟಾರೆಯಾಗಿ ಕೊರೊನಾ ಪ್ರಕರಣಗಳಲ್ಲಿ ಶೇಕಡಾ 3 ರಷ್ಟು ಏರಿಕೆಯಾಗಿದೆ.

Written by - Bhavishya Shetty | Last Updated : Jun 12, 2022, 11:52 AM IST
  • ದೇಶದಲ್ಲಿ ಮತ್ತೆ ಏರಿಕೆಯಾಗುತ್ತಿದೆ ಕೊರೊನಾ
  • ಮಹಾರಾಷ್ಟ್ರದಲ್ಲಿ ಹೆಚ್ಚು ಕೊರೊನಾ ಪ್ರಕರಣ ದಾಖಲು
  • ದೆಹಲಿಯಲ್ಲಿ ಹೊಸದಾಗಿ 795 ಪ್ರಕರಣ ದಾಖಲು
ದೇಶದಲ್ಲಿ ಕೋವಿಡ್‌ ಅಬ್ಬರ: ಒಂದೇ ದಿನದಲ್ಲಿ ಶೇ.3 ರಷ್ಟು ಹೆಚ್ಚಳವಾಯ್ತು ಪ್ರಕರಣ! title=
India Covid Update

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 8,582 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಅಷ್ಟೇ ಅಲ್ಲದೆ, ಒಂದೇ ದಿನದಲ್ಲಿ10 ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ. ಶನಿವಾರದಂದು 8,329 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕಳೆದ ದಿನ ಬಂದ ವರದಿಯ ಪ್ರಕಾರ, ಒಟ್ಟಾರೆಯಾಗಿ ಕೊರೊನಾ ಪ್ರಕರಣಗಳಲ್ಲಿ ಶೇಕಡಾ 3 ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: ಪುಲ್ವಾಮಾದಲ್ಲಿ 3 LeT ಭಯೋತ್ಪಾದಕರು ಹತ್ಯೆ: ಶಸ್ತ್ರಾಸ್ತ್ರ, ಮದ್ದುಗುಂಡು ವಶಕ್ಕೆ

ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣ: 
ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 44,513 ಕ್ಕೆ ಏರಿದೆ. ಇನ್ನು ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕಳೆದ ದಿನ 2,922 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.

ದೆಹಲಿಯಲ್ಲಿ ಹೊಸದಾಗಿ 795 ಪ್ರಕರಣ ದಾಖಲು: 
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ದಿನ 795 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಮತ್ತು ಸೋಂಕಿನ ಪ್ರಮಾಣವು ಶೇಕಡಾ 4.11 ಕ್ಕೆ ಏರಿಕೆ ಕಂಡಿದೆ. ಈ ಕುರಿತಾಗಿ ನಗರದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. 

ಇದನ್ನೂ ಓದಿ: ಎರಡನೇ ಟಿ20ಯಿಂದ ದಿನೇಶ್ ಕಾರ್ತಿಕ್ ಔಟ್! ಈ ಆಟಗಾರನಿಗೆ ಅವಕಾಶ ನೀಡಬೇಕು?

ಗಮನಾರ್ಹವಾಗಿ, 7 ಆಗಸ್ಟ್ 2020 ರಂದು, ದೇಶದಲ್ಲಿ ಸೋಂಕಿತರ ಸಂಖ್ಯೆ 20 ಲಕ್ಷವನ್ನು ಮೀರಿತ್ತು. 23 ಆಗಸ್ಟ್ 2020 ರಲ್ಲಿ 30 ಲಕ್ಷ ಮತ್ತು 5 ಸೆಪ್ಟೆಂಬರ್ 2020 ರಲ್ಲಿ 40 ಲಕ್ಷಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿದ್ದವು. ಸೋಂಕಿನ ಒಟ್ಟು ಪ್ರಕರಣಗಳು 16 ಸೆಪ್ಟೆಂಬರ್ 2020 ರಲ್ಲಿ 50 ಲಕ್ಷ, 28 ಸೆಪ್ಟೆಂಬರ್ 2020 ರಲ್ಲಿ 60 ಲಕ್ಷ, 11 ಅಕ್ಟೋಬರ್ 2020 ರಲ್ಲಿ 70 ಲಕ್ಷ, 29 ಅಕ್ಟೋಬರ್ 2020ರಲ್ಲಿ 80 ಲಕ್ಷ ಮತ್ತು ನವೆಂಬರ್ 20 ರಲ್ಲಿ 90 ಲಕ್ಷ ಪ್ರಕರಣಗಳು ದಾಖಲಾಗಿದೆ. ಆದರೆ 19 ಡಿಸೆಂಬರ್ 2020 ರ ಸಮಯಕ್ಕೆ ದೇಶದಲ್ಲಿ ಒಂದು ಕೋಟಿಗೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕಳೆದ ವರ್ಷ ಮೇ 4 ರಂದು ಸೋಂಕಿತರ ಸಂಖ್ಯೆ 20 ಮಿಲಿಯನ್ ಮತ್ತು ಜೂನ್ 23, 2021 ರಂದು 30 ಮಿಲಿಯನ್ ದಾಟಿತ್ತು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News