ನವದೆಹಲಿ: ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬ್ಯಾಂಕಾಕ್ಗೆ ಹೊರಟಿದ್ದ ಗೋಏರ್ ವಿಮಾನವೊಂದು ಕೆಲವೇ ಕ್ಷಣಗಳಲ್ಲಿ ಹಿಂದಿರುಗಿದ ಘಟನೆ ಶುಕ್ರವಾರ ನಡೆದಿದೆ.
ವಿಮಾನಗಳು ಕಾರ್ಯನಿರ್ವಹಿಸುವಾಗ ಕಡ್ಡಾಯವಾಗಿ ಹೊಂದಿರಬೇಕಾದ ನ್ಯಾವಿಗೇಷನ್ ಚಾರ್ಟ್ ಅನ್ನೇ ಮರೆತು ಬ್ಯಾಂಕಾಕ್ಗೆ ಹಾರಿದ್ದ ಬಜೆಟ್ ಕ್ಯಾರಿಯರ್ ಗೋಏರ್ ನ ದೆಹಲಿ-ಬ್ಯಾಂಕಾಕ್ ವಿಮಾನ ಕೆಲವೇ ಕ್ಷಣಗಳಲ್ಲಿ ರಾಜಧಾನಿಗೆ ಮರಳಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ವಿಮಾನವು ಬ್ಯಾಂಕಾಕ್ಗೆ ಹೊರಡುವ ಮುನ್ನ ಕಡ್ಡಾಯವಾಗಿ ಹೊಂದಿರಬೇಕಾದ ನ್ಯಾವಿಗೇಷನ್ ಚಾರ್ಟ್ಗಳನ್ನು ಇರಿಸಿಕೊಂಡಿಲ್ಲ ಎಂಬುದನ್ನು ಸಿಬ್ಬಂದಿ ಅರಿತ ಕೂಡಲೇ 146 ಪ್ರಯಾಣಿಕರಿದ್ದ ಗೋಏರ್ ಎ 320 ವಿಮಾನ-ವಿಟಿ ಡಬ್ಲ್ಯುಜೆಎ- ನವದೆಹಲಿಗೆ ಮರಳಿತು. ಬಳಿಕ ಅಗತ್ಯ ಚಾರ್ಟ್ ಗಳನ್ನು ಪಡೆದು ಮತ್ತೆ ವಿಮಾನವು ಬ್ಯಾಂಕಾಕ್ ಗೆ ಮರಳಿತು ಎಂದು ವಿಮಾನ ಸಂಸ್ಥೆ ವಕ್ತಾರರು ತಿಳಿಸಿದ್ದಾರೆ.