ವಿಶಾಖಪಟ್ಟಣ: ಮುಂದಿನ 24 ಗಂಟೆಗಳಲ್ಲಿ ಆಂಧ್ರಪ್ರದೇಶದಲ್ಲಿ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.ಇದರಿಂದ ಪೂರ್ವ ಕರಾವಳಿ ತೀರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನಿನ್ನೇ ಆಗ್ನೆಯ ದಿಕ್ಕಿನಲ್ಲಿ ವಾಯುಭಾರದ ಒತ್ತಡ ಹೆಚ್ಚಾಗಿ ಅದು ವಾಯುವ್ಯ ಭಾಗಕ್ಕೆ ವಿಸ್ತರಿಸಿದೆ. ಅದೇ ದಿನ ಮಧ್ಯರಾತ್ರಿಯ ವೇಳೆ ವಾಯುಭಾರ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈಗ ಆಂಧ್ರದ ತೀರದಲ್ಲಿರುವ ಅಂಗೊಲ್ ಮತ್ತು ಕಾಕಿನಾಡ್ ನಡುವೆ ಡಿಸೆಂಬರ್ 17ಕ್ಕೆ ಚಂಡಮಾರುತ ಹಾದು ಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Heavy rainfall warning for #AndhraPradesh and #TamilNadu: pic.twitter.com/zoIIBi0N1T
— NDMA India (@ndmaindia) December 14, 2018
ಚಂಡಮಾರುತವು ಉತ್ತರ-ವಾಯುವ್ಯ ದಿಕ್ಕಿಗೆ ವಿಸ್ತರನೆಗೊಂಡುಗೊಂಡು, ಆಗ್ನೇಯದ ಬೊಬಿ ಅಕ್ಷಾಂಶ 8.5 ° ಎನ್ ಮತ್ತು ರೇಖಾಂಶ 87.4 ° ಇ, ಟ್ರಿನಿಕಾಮಾಲಿ (ಶ್ರೀಲಂಕಾ) ಪೂರ್ವಕ್ಕೆ 670 ಕಿ.ಮೀ. ಪೂರ್ವಕ್ಕೆ 930 ಕಿ.ಮೀ. ಚೆನ್ನೈ (ತಮಿಳುನಾಡು) ಮತ್ತು ಪೂರ್ವಕ್ಕೆ 1090 ಕಿ.ಮೀ ದೂರದಲ್ಲಿ ಮಚಿಲಿಪಟ್ಟಣಂ (ಆಂಧ್ರಪ್ರದೇಶ) ದಲ್ಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಡಿಸೆಂಬರ್ 15 ಮತ್ತು 17 ರಂದು ಆಂಧ್ರದ ಪ್ರದೇಶ ಕರಾವಳಿ ಭಾಗ, ದಕ್ಷಿಣ ಛತ್ತೀಸ್ ಗಡ್,ಒಡಿಷಾದಲ್ಲಿ ಭಾರಿ ಮಳೆಯಾಗಳಿದೆ ಎಂದು ಹವಾಮಾನ ವರದಿ ತಿಳಿಸಿದೆ.