ರಾಯ್ ಪುರ್: ಛತ್ತೀಸ್ಗಢದ ಚುನಾವಣೆಗೆ ಒಂದು ದಿನ ಮೊದಲು ಕಾಂಕರ್ ಜಿಲ್ಲೆಯಲ್ಲಿ ನಕ್ಸಲರು ದಾಳಿ ನಡೆಸಿದ್ದು, ಹಳ್ಳಿಯ ಸಮೀಪ ಏಳು ಬಾಂಬ್ ಸ್ಫೋಟಿಸಿದ್ದಾರೆ. ಭಾನುವಾರ ನಡೆದ ಸ್ಫೋಟದಲ್ಲಿ ಓರ್ವ ಬಿಎಸ್ಎಫ್ ಜವಾನ್ ಗಾಯಗೊಂಡಿದ್ದಾರೆ.
ನಕ್ಸಲರು ದಾಳಿ ಪ್ರಾರಂಭಿಸಿದಾಗ ಬಿಎಸ್ಎಫ್ ಸೈನಿಕರು ಶೋಧ ಕಾರ್ಯದಲ್ಲಿ ತೊಡಗಿದ್ದರು. ಗಸ್ತು ಕರ್ತವ್ಯಕ್ಕೆ ತೆರಳಿದ್ದ ಬಿಎಸ್ಎಫ್ ತುಕಡಿಯ ಮೇಲೆ ನಕ್ಸಲರು ಏಕಾಏಕಿ ದಾಳಿ ಮಾಡಿ, ಸುಧಾರಿತ ಸ್ಫೋಟಕಗಳನ್ನು ಸ್ಫೋಟಿಸಿದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗೋಮ್ ಮತ್ತು ಗತ್ತಕಲ್ ಗ್ರಾಮಗಳ ನಡುವೆ ಹೂತಿಡಲಾಗಿದ್ದ ಏಳು ಸರಣಿ ಬಾಂಬ್ ಗಳು ಒಂದರ ನಂತರ ಒಂದು ಸ್ಫೋಟಗೊಂಡವು ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಕಂಕರ್ ಜಿಲ್ಲೆಯ ಕೊಯಾಲಿ ಬೆಡಾ ಸ್ಫೋಟದಲ್ಲಿ ಮಹೇಂದ್ರ ಸಿಂಗ್ ಎಂಬ ಬಿಎಸ್ಎಫ್ ಗಾಯಗೊಂಡಿದ್ದು, ಅವರಿಗೆ ಅಂಗಾಘರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.