ದೆಹಲಿ:ಯಮುನಾ ನದಿಯಲ್ಲಿ ಹೆಚ್ಚಿದ ಮಾಲಿನ್ಯದಿಂದಾಗಿ ನೀರಿನ ಸರಬರಾಜು ಕುಂಠಿತ

      

Last Updated : Jan 6, 2018, 06:08 PM IST
ದೆಹಲಿ:ಯಮುನಾ ನದಿಯಲ್ಲಿ ಹೆಚ್ಚಿದ ಮಾಲಿನ್ಯದಿಂದಾಗಿ ನೀರಿನ ಸರಬರಾಜು ಕುಂಠಿತ title=

ಹೊಸದಿಲ್ಲಿ: ಯಮುನಾದಲ್ಲಿ ಮಾಲಿನ್ಯ ಹೆಚ್ಚಳದಿಂದಾಗಿ ದೆಹಲಿಯ ಬಹುತೇಕ  ಭಾಗಗಳಲ್ಲಿ ನೀರು ಸರಬರಾಜು ಮುಂದಿನ ಕೆಲವು ದಿನಗಳವರೆಗೆ ಅಡ್ಡಿಯುಂಟಾಗಲಿದೆ .

ದೆಹಲಿಯ ಜಲ ಮಂಡಳಿಯ ನೀಡಿರುವ ಮಾಹಿತಿಯ ಪ್ರಕಾರ ವಝಿರಾಬಾದ್ ಮತ್ತು ಚಂದ್ರವಾಲ್ ಮತ್ತು ಒಖ್ಲಾ ಸ್ಥಾವರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮಾಲಿನ್ಯದ ಹೆಚ್ಚಳದಿಂದ ಉತ್ತರ ದೆಹಲಿ, ಕೇಂದ್ರೀಯ ದೆಹಲಿ, ಪಶ್ಚಿಮ ದೆಹಲಿಯ ಭಾಗ, ದಕ್ಷಿಣ ದೆಹಲಿಯ ಭಾಗ, ದೆಹಲಿ ಕ್ಯಾಂಟ್ ಪ್ರದೇಶಗಳು ಮತ್ತು ಎನ್ಡಿಎಂಸಿ ಪ್ರದೇಶಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಡಿಮೆ  ಪ್ರಮಾಣದ ನೀರು ದೊರಕಬಹುದೆಂದು ಹೇಳಲಾಗಿದೆ.

ವಝಿರಾಬಾದ್ ಅಣೆಕಟ್ಟಿನ ಮತ್ತು ಒಖ್ಲಾ ದಳದ ನಡುವೆ 15 ಚರಂಡಿಗಳ ಮೂಲಕ ತ್ಯಾಜ್ಯ ನೀರಿನ ವಿಸರ್ಜನೆಯು ತೀವ್ರವಾದ  ಮಾಲಿನ್ಯವನ್ನುಂಟುಮಾಡುತ್ತದೆ. ಇದರಿಂದಾಗಿ  ದೆಹಲಿಯ ನಿವಾಸಿಗಳು ಹೊಸ ವರ್ಷದ ಮೊದಲೆರಡು ದಿನಗಳಲ್ಲಿ ಇದೇ ರೀತಿಯ ಸಮಸ್ಯೆಯನ್ನು ಎದುರಿಸಿದರು. ಕೈಗಾರಿಕಾ ಮಾಲಿನ್ಯಕಾರಕಗಳ ಹೆಚ್ಚಳ ಮತ್ತು ಅಮೋನಿಯ ಮಟ್ಟವನ್ನು ಹೆಚ್ಚುತ್ತಿರುವ ಕಾರಣದಿಂದಾಗಿ ಯಮುನಾ ನದಿಯು ಕಲುಸಿತಗೊಂಡಿದೆ ಎಂದು ಹೇಳಲಾಗಿದೆ.

Trending News