ನವದೆಹಲಿ: ಈ ವರ್ಷ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಯಲ್ಲಿ ನಡೆಯಲಿರುವ ಐಪಿಎಲ್ 2020 (IPL2020) ಶೀರ್ಷಿಕೆಯ ಪ್ರಾಯೋಜಕತ್ವವನ್ನು ಆನ್ಲೈನ್ ಕಂಪನಿ ಡ್ರೀಮ್ ಇಲೆವನ್ (ಡ್ರೀಮ್ 11) ಪಡೆದುಕೊಂಡಿದೆ. ಇತ್ತೀಚೆಗೆ, ಚೀನಾದ ಮೊಬೈಲ್ ಕಂಪನಿ ವಿವೊಗೆ ಎದುರಾದ ಭಾರೀ ವಿರೋಧದ ನಂತರ ಈ ಪಂದ್ಯಾವಳಿಯ ಶೀರ್ಷಿಕೆ ಪ್ರಾಯೋಜಕತ್ವವನ್ನು ರದ್ದುಗೊಳಿಸಲಾಗಿತ್ತು. ವಿಶೇಷವೆಂದರೆ, ಪ್ರಾಯೋಜಕತ್ವದ ಸ್ಪರ್ಧೆಯಲ್ಲಿ, ಸ್ವಾಮಿ ರಾಮ್ದೇವ್ ಅವರ ಕಂಪನಿ ಪತಂಜಲಿ, ಟಾಟಾ, ಬೈಜುಜ್ ಹಾಗೂ ಅನ್ ಅಕಾಡೆಮಿಗಳು ಶಾಮೀಲಾಗಿದ್ದವು. ಆದರೆ ಡ್ರೀಮ್ 11 ಎಲ್ಲರನ್ನೂ ಹಿಂದಿಕ್ಕಿ ಶೀರ್ಷಿಕೆಯ ಪ್ರಾಯೋಜಕತ್ವವನ್ನು ತನ್ನದಾಗಿಸಿಕೊಂಡಿದೆ.
Dream11 wins IPL 2020 title sponsorship for Rs 222 crores: IPL Chairman Brijesh Patel
— ANI (@ANI) August 18, 2020
ಫ್ಯಾಂಟಸಿ ಸ್ಪೋರ್ಟ್ಸ್ ಪ್ಲಾಟ್ಫಾರ್ಮ್ ಡ್ರೀಮ್ 11 ಇಂಡಿಯನ್ ಪ್ರೀಮಿಯರ್ ಲೀಗ್ನ ಶೀರ್ಷಿಕೆ ಪ್ರಾಯೋಜಕತ್ವವನ್ನು ಚೀನಾದ ಕಂಪನಿ ವಿವೊ ಬದಲಿಗೆ ನಾಲ್ಕುವರೆ ತಿಂಗಳ ಅವಧಿಯ ಒಪ್ಪಂದಕ್ಕೆ 222 ಕೋಟಿ ರೂ. ನೀಡುವುದಾಗಿ ಹೇಳಿದೆ. ಡ್ರೀಮ್ 11 ಈಗಾಗಲೇ ಕಳೆದ ಕೆಲವು ವರ್ಷಗಳಿಂದ ಐಪಿಎಲ್ ಪ್ರಾಯೋಜಕತ್ವದ ಜೊತೆಗೆ ಸಂಬಂಧ ಹೊಂದಿದೆ.
ಈ ಕುರಿತು ಪಿಟಿಐ-ಭಾಷಾ ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿರುವ IPL ಅಧ್ಯಕ್ಷ ಬೃಜೇಶ್ ಪಟೇಲ್, " ಡ್ರೀಮ್ 11 222 ಕೋಟಿ ರೂ.ಗಳ ಅಧಿಕೃತ ಘೋಷಣೆ ಕೂಗುವ ಮೂಲಕ ಈ ಹಕ್ಕನ್ನು ಸಂಪಾದಿಸಿದೆ" ಎಂದಿದ್ದಾರೆ. ಟಾಟಾ ಸಮೂಹ ತನ್ನ ಅಂತಿಮ ಘೋಷಣೆ ಕೂಗಿಲ್ಲ ಹಾಗೂ ಎರಡು ಶೈಕ್ಷಣಿಕ ಕ್ಷೇತ್ರದ ಕಂಪನಿಗಳಾದ ಬಾಯ್ಜುಸ್ (201 ಕೋಟಿ ರೂ.) ಹಾಗೂ ಅನ್ ಅಕಾಡೆಮಿ (170 ಕೋಟಿ ರೂ.) ಕ್ರಮವಾಗಿ ಎರಡನೆಯ ಹಾಗೂ ಮೂರನೆಯ ಸ್ಥಾನಕ್ಕೆ ಮುಕ್ತಾಯಗೊಂಡಿವೆ.