ನವದೆಹಲಿ: Driving License New Rules - ಚಾಲನಾ ಪರವಾನಗಿ ಹೊಸ ನಿಯಮಗಳಿಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಈಗ ನೀವು ಚಾಲನಾ ಪರವಾನಗಿ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿಗೆ (RTO) ಭೇಟಿ ನೀಡುವ ಅಗತ್ಯವಿಲ್ಲ. ಕೇಂದ್ರ ಸರ್ಕಾರ ಚಾಲನಾ ಪರವಾನಗಿ ಮಾಡುವ ನಿಯಮಗಳನ್ನು (Driving License New Rules 2021) ಬದಲಾಯಿಸಿದೆ. ಸರ್ಕಾರವು ಇದೀಗ DL ಪ್ರಕ್ರಿಯೆಯನ್ನು ಬಹಳ ಸುಲಭವಾಗಿಸಿದೆ. ಸರ್ಕಾರದ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಈಗ ಡ್ರೈವಿಂಗ್ ಲೈಸನ್ಸ್ ಗಾಗಿ ಡ್ರೈವಿಂಗ್ ಟೆಸ್ಟ್ ನೀಡುವ ಅವಶ್ಯಕತೆ ಇಲ್ಲ
ಚಾಲನಾ ಪರವಾನಗಿಗಾಗಿ (New Driving License) ಸರ್ಕಾರ ನಿಯಮಗಳಲ್ಲಿ ತಿದ್ದುಪಡಿ ಮಾಡಿದೆ. ಹೊಸ ನಿಯಮದ ಪ್ರಕಾರ, ಈಗ ನೀವು RTO ಕಚೇರಿಗೆ ಭೇಟಿ ನೀಡಿ ಯಾವುದೇ ರೀತಿಯ ಚಾಲನಾ ಪರೀಕ್ಷೆಯನ್ನು (DL Test) ನೀಡುವ ಅಗತ್ಯವಿಲ್ಲ. ಈ ನಿಯಮಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸೂಚಿಸಿದೆ. ಈ ನಿಯಮಗಳು ಈ ತಿಂಗಳಿನಿಂದ ಜಾರಿಗೆ ಬಂದಿವೆ. ಈ ಹೊಸ ಬದಲಾವಣೆಯೊಂದಿಗೆ, ತಮ್ಮ ಚಾಲನಾ ಪರವಾನಗಿಗಾಗಿ ಆರ್‌ಟಿಒನ ವೇಟಿಂಗ್ ಲಿಸ್ಟ್ ಕೋಟ್ಯಂತರ ಜನರಿಗೆ ದೊಡ್ಡ ಪರಿಹಾರವೆ ಸಿಕ್ಕಂತಾಗಿದೆ.
ಡ್ರೈವಿಂಗ್ ಸ್ಕೂಲ್ ಹೋಗಿ ಟ್ರೇನಿಂಗ ಪಡೆಯಬೇಕು
ಚಾಲನಾ ಪರವಾನಗಿ ಪಡೆಯಲು RTOನಲ್ಲಿ ತಮ್ಮ ಪರೀಕ್ಷೆಗಾಗಿ ಕಾಯುತ್ತಿರುವ ಅರ್ಜಿದಾರರಿಗೆ ಇದನ್ನು ಸಚಿವಾಲಯವು ತಿಳಿಸಿದೆ. ಈಗ ಅವರು ಯಾವುದೇ ಮಾನ್ಯತೆ ಪಡೆದ ಚಾಲನಾ ತರಬೇತಿ ಶಾಲೆಯಲ್ಲಿ ಚಾಲನಾ ಪರವಾನಗಿಗಾಗಿ ತಮ್ಮಹೆಸರನ್ನು ನೋಂದಾಯಿಸಿಕೊಳ್ಳಬಹುದು. ಚಾಲನಾ ತರಬೇತಿ ಶಾಲೆಯಿಂದ ತರಬೇತಿ ಪಡೆದು ಅಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ಸಚಿವಾಲಯ ಹೇಳಿದೆ. ಅರ್ಜಿದಾರರಿಗೆ ಶಾಲೆಯಿಂದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ, ಅರ್ಜಿದಾರರ ಚಾಲನಾ ಪರವಾನಗಿಯನ್ನು ನೀಡಲಾಗುವುದು ಎಂದು ಹೇಳಲಾಗಿದೆ.
ಹೊಸ ನಿಯಮಗಳಲ್ಲಿ ಏನೇನಿದೆ ? (New Driving License Rules)
ತರಬೇತಿ ಕೇಂದ್ರಗಳಿಗೆ ಸಂಬಂಧಿಸಿದಂತೆ ರಸ್ತೆ ಮತ್ತು ಸಾರಿಗೆ ಸಚಿವಾಲಯ ಕೆಲವು ಮಾರ್ಗಸೂಚಿಗಳು ಮತ್ತು ಷರತ್ತುಗಳನ್ನು ವಿಧಿಸಿದೆ. ಇವು ತರಬೇತಿ ಕೇಂದ್ರಗಳ ಪ್ರದೇಶದಿಂದ ತರಬೇತುದಾರನ ಶಿಕ್ಷಣದವರೆಗೆ ಎಲ್ಲಾ ಅಂಶಗಳನ್ನು ಒಳಗೊಂಡಿವೆ. ಹಾಗಾದರೆ ಬನ್ನಿ ಆ ನಿಯಮಗಳು ಯಾವುದು ತಿಳಿದುಕೊಳ್ಳೋಣ.
>> ದ್ವಿಚಕ್ರ ವಾಹನ, ತ್ರಿಚಕ್ರ ವಾಹನಗಳು ಮತ್ತು ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳು ಕನಿಷ್ಠ ಒಂದು ಎಕರೆ ಭೂಮಿಯನ್ನು ಹೊಂದಿರುವ ಕುರಿತು ಅಧಿಕೃತ ಏಜೆನ್ಸಿ ಖಚಿತಪಡಿಸಬೇಕು. ಈ ಕಟ್ಟಳೆ ಮಧ್ಯಮ ಮತ್ತು ಭಾರೀ ಪ್ರಯಾಣಿಕ, ಸರಕು ವಾಹನಗಳು ಅಥವಾ ಟ್ರೇಲರ್‌ಗಳ ಕೇಂದ್ರಗಳಿಗೆ ಎರಡು ಎಕರೆ ಭೂಮಿ ನಿಗದಿಪಡಿಸಲಾಗಿದೆ.
ಇದನ್ನೂ ಓದಿ-Good News: DL ಮತ್ತು RC ಎಕ್ಸ್ಪೈರ್ ಆಗಿದೆಯಾ? ಟೆನ್ಶನ್ ಬೇಡ... ಈ ದಿನಾಂಕದ ಮಾನ್ಯತೆ ಇರಲಿದೆ
>> ತರಬೇತುದಾರ ಕನಿಷ್ಠ ಅಂದರೆ 12ನೇ ತರಗತಿ ಪಾಸಾಗಿರಬೇಕು. ಆತನಿಗೆ ಕನಿಷ್ಠ ಅಂದರೆ 5 ವರ್ಷಗಳ ಡ್ರೈವಿಂಗ್ ಅನುಭವ ಇರಬೇಕು. ಸಾರಿಗೆ ನಿಯಮಗಳ ಕುರಿತು ಆತ ಚೆನ್ನಾಗಿ ಅರಿತಿರಬೇಕು.
>> ಇದಕ್ಕಾಗಿ ಸಚಿವಾಲಯ ಒಂದು ಸಿಲೆಬಸ್ ಕೂಡ ನಿಗದಿಪಡಿಸಿದೆ. ಲಘುವಾಹನ ಚಾಲನೆಗಾಗಿ ಇರುವ ಸಿಲೆಬಸ್ ಅವಧಿ ಗರಿಷ್ಟ 4 ವಾರಗಳದ್ದಾಗಿದ್ದು, ಇದು 29 ಗಂಟೆ ನಡೆಯಲಿದೆ. ಈ ಡ್ರೈವಿಂಗ್ ಸೆಂಟರ್ ಗಳ ಸಿಲೆಬಸ್ ಅನ್ನು 2 ಭಾಗಗಳಲ್ಲಿ ವಿಂಗಡಿಸಲಾಗಿದ್ದು, ಇದರಲ್ಲಿ ಥಿಯರಿ ಹಾಗೂ ಪ್ರ್ಯಾಕ್ಟಿಕಲ್ ಒಳಗೊಂಡಿವೆ.
ಇದನ್ನೂ ಓದಿ-DL-RC Book : ವಾಹನ ಸವಾರರಿಗೆ ಸಿಹಿ ಸುದ್ದಿ : ಸವಾರರು ಇನ್ಮುಂದೆ DL, RC ಕೊಂಡೊಯ್ಯಬೇಕಿಲ್ಲ
>> ಜನರಿಗೆ ಮೂಲಭೂತ ರಸ್ತೆಗಳು, ಗ್ರಾಮೀಣ ರಸ್ತೆಗಳು, ರಾಜ್ಯ ಹೆದ್ದಾರಿ, ನಗರ ರಸ್ತೆಗಳು, ರಿವರ್ಸಿಂಗ್, ಪಾರ್ಕಿಂಗ್, ಎತ್ತರದ ಹಾಗೂ ಇಳಿಜಾರು ಡ್ರೈವಿಂಗ್ ಕುರಿತು ತರಬೇತಿ ನೀಡಲು 21ಗಂಟೆ ವ್ಯಯಿಸಬೇಕು. ಉಳಿದ 8 ಗಂಟೆಗಳು ಥಿಯರಿಗಾಗಿ ಮೀಸಲಿಡಲಾಗಿದೆ. ಇದರಲ್ಲಿ ರಸ್ತೆಯ ಶಿಷ್ಟಾಚಾರ ತಿಳಿಯುವುದು, ರೋಡ್ ರೇಜ್, ಟ್ರಾಫಿಕ್ ಮಾಹಿತಿ, ದುರ್ಘಟನೆಯ ಕಾರಣಗಳನ್ನು ಅರಿಯುವುದು. ಪ್ರಾಥಮಿಕ ಚಿಕಿತ್ಸೆ ಹಾಗೂ ಡ್ರೈವಿಂಗ್ ಇಂಧನದ ದಕ್ಷತೆಯ ಕುರಿತು ಅರಿವು ಮೂಡಿಸಬೇಕು.
ಇದನ್ನೂ ಓದಿ-Driving Licence: ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿದೆಯೇ? ಚಿಂತೆಬಿಡಿ, ಈ ರೀತಿ ಮತ್ತೆ ಪಡೆಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.