ಜಜೀರಾ ಏರ್‌ ವೇಸ್‌ ವಿಮಾನದಲ್ಲಿ ಬೆಂಕಿ; 150 ಪ್ರಯಾಣಿಕರೂ ಸುರಕ್ಷಿತ

ಜಜೀರಾ ಏರ್ ವೇಸ್ ವಿಮಾನದ ಇಂಜಿನ್ನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಗುರುವಾರ ಮುಂಜಾನೆ ನಡೆದಿದೆ. 

Last Updated : Aug 2, 2018, 01:16 PM IST
ಜಜೀರಾ ಏರ್‌ ವೇಸ್‌ ವಿಮಾನದಲ್ಲಿ ಬೆಂಕಿ; 150 ಪ್ರಯಾಣಿಕರೂ ಸುರಕ್ಷಿತ title=

ಹೈದರಾಬಾದ್‌ : ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಜಜೀರಾ ಏರ್ ವೇಸ್ ವಿಮಾನದ ಇಂಜಿನ್ನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಗುರುವಾರ ಮುಂಜಾನೆ ನಡೆದಿದೆ. 

ಕುವೈತ್ ನಿಂದ ಹೈದರಾಬಾದ್ ಗೆ ಆಗಮಿಸಿದ್ದ ಜಜೀರಾ ಜೆ9-608 ವಿಮಾನ ಲ್ಯಾಂಡ್ ಆದ ಬಳಿಕ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ಕೂಡಲೇ ಎಚ್ಚರಿಕೆ ವಹಿಸಿದ ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ಗ್ರೌಂಡ್ ಸ್ಟಾಫ್ ವಿಮಾನದ ಪೈಲೆಟ್'ಗೆ ವಿಚತ ತಿಳಿಸಿದ್ದಾರೆ. ಕೂಡಲೇ ಪೈಲೆಟ್ ಇಂಜಿನ್ ಆಫ್ ಮಾಡಿ ಸಮಯಪ್ರಜ್ಞೆ ಮೆರೆದಿದ್ದಾರೆ. ಇದರಿಂದಾಗಿ ವಿಮಾನದಲ್ಲಿದ್ದ 150 ಪ್ರಯಾಣಿಕರೂ ಸುರಕ್ಷಿತವಾಗಿ ಹೊರಗಿಳಿದಿದ್ದು, ಯಾವುದೇ ತೊಂದರೆ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. 
 

Trending News