ನವದೆಹಲಿ: Online Fraud - ಸ್ವಂತ ಉದ್ಯಮ ಆರಂಭಿಸುವ ಕನಸು ಯಾರಿಗೆ ತಾನೇ ಇರಲ್ಲ. ಆದರೆ, ಒಂದು ವೇಳೆ ನೀವು ಯಾವುದೇ ರೀತಿಯ ಪರಿಶೀಲನೆ ನಡೆಸದೆ, ಕೇವಲ ಗೂಗಲ್ ನಲ್ಲಿ ನೀಡಲಾಗಿರುವ ಮಾಹಿತಿ ಹಾಗೂ ಸಂಖ್ಯೆಗಳ ಮೇಲೆ ಭರವಸೆಯನ್ನಿಟ್ಟು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹೌದು, ದೆಹಲಿ ಪೋಲೀಸರ ಸೈಬರ್ ಸೆಲ್ ದೊಡ್ಡ ದೊಡ್ಡ ಬ್ರಾಂಡ್ ಗಳ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರೆದು ಫ್ರಂಚೈಸಿ ಕೊಡುವುದಾಗಿ ಹೇಳಿ ಜನರನ್ನು ವಂಚಿಸುತ್ತಿರುವ (Digital Fraud) ಒಂದು ಗ್ಯಾಂಗ್ ನ ಬಣ್ಣ ಬಯಲು ಮಾಡಿದೆ.
ಏನಿದು ಸಂಪೂರ್ಣ ಪ್ರಕರಣ?
ದೆಹಲಿ ಪೊಲೀಸರ ಸೈಬರ್ ಸೆಲ್ ಈ ಗ್ಯಾಂಗ್ ನ ರಹಸ್ಯ ಬೇಧಿಸಿದೆ ಮತ್ತು ಒಟ್ಟು 4 ಜನರನ್ನು ಬಂಧಿಸಿದೆ. ಈ ಜನರು 16 ರಾಜ್ಯಗಳಲ್ಲಿ ಒಟ್ಟು 126 ವಂಚನೆ ಪ್ರಕರಣಗಳನ್ನು ನಡೆಸಿದ್ದಾರೆ. ದೆಹಲಿ ಪೋಲಿಸ್‌ನ ಸೈಬರ್ ಸೆಲ್‌ನ ಡಿಸಿಪಿ ಅನೀಶ್ ರಾಯ್ ಪ್ರಕಾರ, ರಿಷಿಕಾ ಗರ್ಗ್ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ ತಾನು ಹಲ್ದಿರಾಮ್‌ನ ಮಳಿಗೆಯನ್ನು ತೆರೆಯಲು ಬಯಸಿದ್ದಾಗಿ ದೂರು ನೀಡಿದ್ದಳು ಮತ್ತು ಆಕೆ ಆನ್‌ಲೈನ್‌ನಲ್ಲಿ ನೋಡಿದಾಗ, ಹಲ್ದಿರಾಮ್‌ನ ವೆಬ್‌ಸೈಟ್ ಎಂದು ಹೇಳಿಕೊಂಡು ಹಲ್ದಿರಾಮ್‌ನ ಫ್ರ್ಯಾಂಚೈಸ್ ಮತ್ತು ಡೀಲರ್‌ಶಿಪ್ ಅನ್ನು ಔಟ್ಲೆಟ್ ತೆರೆಯಲು ಅವಕಾಶ ನೀಡಲಾಯಿತು. ರಿಶಿಕಾ ತಕ್ಷಣವೇ ವೆಬ್‌ಸೈಟ್‌ನಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದರು. ಬಳಿಕ ಅವರಿಗೆ ಫಾರ್ಮ್ ಅನ್ನು ಭರ್ತಿ ಮಾಡಲು, ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಸಲ್ಲಿಸಲು ಹೇಳಲಾಯಿತು.
ಸುಮಾರು 12 ಲಕ್ಷ ರೂ.ಗಳ ವಂಚನೆ
ಫ್ರಂಚೈಸಿ ತೆರೆಯುವ ನೆಪದಲ್ಲಿ ರಿಶಿಕಾ ಸಿಕ್ಯೋರಿಟಿ ಶುಲ್ಕ ಹಾಗೂ ಇತರೆ ಶುಲ್ಕಗಳನ್ನು ಸೇರಿದಂತೆ ಒಟ್ಟು 11.74 ಲಕ್ಷ ರೂ. ಪಾವತಿಸಿದ್ದಾರೆ. ಇದರಲ್ಲಿ 'ಹಲ್ದಿರಾಮ್ ಅಧಿಕಾರಿಗಳು' ಎಂದು ಹೇಳಿಕೊಂಡು ಆಶಿಶ್ ಕುಮಾರ್ ಹಾಗೂ ರವಿ ಕುಮಾರ್ ಮಾರ್ಗದರ್ಶನ ನೀಡಿದ್ದಾರೆ. ರಿಶಿಕಾ ಅವರಿಗೆ ಪುನಃ ರೂ.1.6 ಲಕ್ಷ ರೂ.ಪಾವತಿಸಲು ಹೇಳಿದಾಗ, ತಾವು ವಂಚನೆಗೆ ಒಳಗಾಗಿರುವ ಶಂಕೆ ರಿಶಿಕಾಗೆ ಉಂಟಾಗಿದೆ.
ಸೈಬರ್ ಸೆಲ್ ಕದ ತಟ್ಟಿದ ರಿಶಿಕಾ
ರಿಷಿಕಾ ಗರ್ಗ್ ತಕ್ಷಣವೆ ತಮ್ಮ ಜತೆಗೆ ನಡೆದ ಈ ಆನ್‌ಲೈನ್ ವಂಚನೆಯನ್ನು ಸೈಬರ್ ಸೆಲ್‌ಗೆ ವರದಿ ಮಾಡಿದ್ದಾರೆ. ಪ್ರಕರಣವನ್ನು ದಾಖಲಿಸಿದ ನಂತರ ಸೈಬರ್ ಸೆಲ್ ತನಿಖೆ ಆರಂಭಿಸಿದೆ. ತನಿಖೆಯ ಸಮಯದಲ್ಲಿ, ಹಲ್ದಿರಾಮ್ ಹೆಸರಿನಲ್ಲಿ ಹೆಚ್ಚಿನ ಸಂಖ್ಯೆಯ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಈ ಎಲ್ಲಾ ವೆಬ್‌ಸೈಟ್‌ಗಳು ಫೇಕ್ ಹಲ್ದಿರಾಮ್‌ನ ಫ್ರ್ಯಾಂಚೈಸಿ ನೀಡುತ್ತಿರುವುದು ಗಮನಕ್ಕೆ ಬಂದಿದೆ.
ಇದನ್ನೂ ಓದಿ-Corona Vaccine: ವ್ಯಾಕ್ಸಿನ್ ನಕಲಿಯಾಗಿದೆಯೋ ಅಥವಾ ಅಸಲಿ? ಹೇಗೆ ಪತ್ತೆಹಚ್ಚಬೇಕು ಎಂದು ಹೇಳಿದ ಸರ್ಕಾರ
ಪ್ರಕರಣದಲ್ಲಿ ನಾಲ್ವರ ಬಂಧನ
ತನಿಖೆಯ ಸಮಯದಲ್ಲಿ ಬಹಿರಂಗಗೊಂಡ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ, ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಜನರು ಈ ನಕಲಿ ವೆಬ್‌ಸೈಟ್‌ಗಳಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇಂತಹ ವಂಚಕರು ಬಹು ಬ್ಯಾಂಕ್ ಖಾತೆಗಳನ್ನು ಮತ್ತು ಹೆಚ್ಚಿನ ಸಂಖ್ಯೆಯ ನಕಲಿ ಸಿಮ್ ಕಾರ್ಡ್ ಗಳನ್ನು ವಂಚನೆ ಮಾಡಲು ಬಳಸುತ್ತಿದ್ದಾರೆ. ಇವುಗಳ ಆಧಾರದ ಮೇಲೆ ಪೊಲೀಸರು ಶಂಕಿತರನ್ನು ಗುರುತಿಸಿದ್ದಾರೆ. ತನಿಖೆಯ ನಂತರ, ಆಗಸ್ಟ್ 27 ರ ರಾತ್ರಿ, ನಳಂದ, ಫರಿದಾಬಾದ್, ಲುಧಿಯಾನ ಮತ್ತು ದೆಹಲಿ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ ಪೊಲೀಸರು 4 ಜನರನ್ನು ಬಂಧಿಸಿದ್ದಾರೆ. ಇದರಲ್ಲಿ ಅದರ ಸೂತ್ರಧಾರ ವಿಕಾಸ್ ಮಿಸ್ತ್ರಿ ಮತ್ತು ತಾಂತ್ರಿಕ ಸಹಾಯಕ ವಿನಯ್ ವಿಕ್ರಮ್ ಸಿಂಗ್ ಅವರ ಹೆಸರುಗಳೂ ಕೂಡ ಶಾಮೀಲಾಗಿವೆ.
ಅಮೂಲ್ ಹಾಗೂ ಪತಂಜಲಿ ಹೆಸರಿನಲ್ಲಿಯೂ ಕೂಡ ವಂಚನೆ
ಬಂಧಿತ ಆರೋಪಿಗಳಿಂದ ಪತ್ತೆಯಾದ ಸಲಕರಣೆಗಳ ಪರಿಶೀಲನೆ ಮತ್ತು ನಕಲಿ ಹಲ್ದಿರಾಮ್ ವೆಬ್‌ಸೈಟ್‌ಗಳಿಗೆ (Fake Website) ಸಂಬಂಧಿಸಿದ ದತ್ತಾಂಶಗಳು ಆರೋಪಿಗಳು ಅಮುಲ್ ಮತ್ತು ಪತಂಜಲಿಯಂತಹ ಪ್ರಸಿದ್ಧ ಬ್ರಾಂಡ್‌ಗಳ ನಕಲಿ ಸೈಟ್‌ಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಭಾರತದಾದ್ಯಂತ ಜನರನ್ನು ಮೋಸಗೊಳಿಸಲು ಈ ವೆಬ್‌ಸೈಟ್‌ಗಳನ್ನು ಬಳಸಲಾಗುತ್ತಿತ್ತು.
ಇದನ್ನೂ ಓದಿ-Ujjwala Yojana : ಈ ದಾಖಲೆಗಳು ನಿಮ್ಮ ಬಳಿ ಇದ್ದರೆ ನೀವು ಪಡೆಯಬಹುದು ಉಜ್ವಲ ಯೋಜನೆಯ 'ಉಚಿತ LPG ಸಿಲಿಂಡರ್'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.