ಹೇಗೆ ಸಿಗುತ್ತೆ Mudra Loan? ಉದ್ಯಮ ಆರಂಭಿಸಲು ಮೋದಿ ಸರ್ಕಾರ ನೀಡುತ್ತೆ 10 ಲಕ್ಷ ರೂ. ಸಾಲ

ಶಿಶು ಸಾಲದ ಹೊರತಾಗಿ ಮುದ್ರಾ ಸಾಲದಲ್ಲಿ ಇನ್ನೂ 2 ವಿಧದ ಎರಡು ರೀತಿಯ ಸಾಲಗಳಿದ್ದು, ಅವುಗಳಿಗೆ ಕಿಶೋರ್ ಸಾಲ ಮತ್ತು ತರುಣ್ ಸಾಲ ಎಂದು ಕರೆಯಲಾಗುತ್ತದೆ.  

Last Updated : Jun 25, 2020, 06:10 PM IST
ಹೇಗೆ ಸಿಗುತ್ತೆ Mudra Loan? ಉದ್ಯಮ ಆರಂಭಿಸಲು ಮೋದಿ ಸರ್ಕಾರ ನೀಡುತ್ತೆ 10 ಲಕ್ಷ ರೂ. ಸಾಲ title=

ನವದೆಹಲಿ: ಮುದ್ರಾ ಸಾಲದಡಿ 50 ಸಾವಿರ ರೂಪಾಯಿಗಳ ಸಾಲವನ್ನು ತೆಗೆದುಕೊಳ್ಳುವ ಫಲಾನುಭವಿಗಳಿಗೆ ಬಡ್ಡಿದರದಲ್ಲಿ ಶೇ 2 ರಷ್ಟು ಸಬ್ಸಿಡಿ ನೆಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಶಿಶು ಸಾಲ ಯೋಜನೆಯಡಿ ಸಾಲ ಪಡೆದ ಸುಮಾರು 9 ಕೋಟಿ 35 ಲಕ್ಷ ಫಲಾನುಭವಿಗಳಿಗೆ ಸರ್ಕಾರದ ಈ ನಿರ್ಣಯದ ಲಾಭ ಸಿಗಲಿದೆ. ಇದು 1 ಜೂನ್ 2020 ರಿಂದ ಜಾರಿಯಾಗಲಿದ್ದು , 2021 ಮೇ 31 ರವರೆಗೆ ಮುಂದುವರೆಯಲಿದೆ. ಆದರೆ, ಶಿಶು ಸಾಲದ ಜೊತೆಗೆ ಮುದ್ರಾ ಸಾಲದಲ್ಲಿ ಇನ್ನೂ 2 ವಿಧದ ಸಾಲಗಳಿವೆ. ಇವುಗಳನ್ನು  ಕಿಶೋರ್ ಸಾಲ ಮತ್ತು ತರುಣ್ ಸಾಲ ಎಂದು ಕರೆಯಲಾಗುತ್ತದೆ. ಇದರ ಅಡಿಯಲ್ಲಿ ಸರ್ಕಾರ ಉದ್ಯಮ ಪ್ರಾರಂಭಿಸಲು 50 ಸಾವಿರದಿಂದ 5 ಲಕ್ಷ ಮತ್ತು 5 ಲಕ್ಷದಿಂದ 10 ಲಕ್ಷ ರೂಪಾಯಿ ಸಾಲ ನೀಡುತ್ತದೆ. ಮುದ್ರಾ ಸಾಲವನ್ನು ಹೇಗೆ ಪಡೆಯುವುದು ಎಂದು ತಿಳಿಯಲು ಒಂದು ವೇಳೆ ನೀವು ಬಯಸುತ್ತೀದ್ದರೆ. ಇಲ್ಲಿದೆ ಕಂಪ್ಲೀಟ್ ಮಾಹಿತಿ.

PMMY ಅಡಿ ಯಾರು ಸಾಲ ಪಡೆಯಬಹುದು
ತನ್ನ ವ್ಯವಹಾರವನ್ನು ಪ್ರಾರಂಭಿಸಲು ಬಯಸುವ ಯಾವುದೇ ಭಾರತೀಯ ಪ್ರಜೆ ಪಿಎಂಎಂವೈ ಅಡಿಯಲ್ಲಿ ಸಾಲ ಪಡೆಯಬಹುದು. ನೀವು ಪ್ರಸ್ತುತ ವ್ಯವಹಾರವನ್ನು ವಿಸ್ತರಿಸಲು ಬಯಸಿದರೆ ಮತ್ತು ಅದಕ್ಕಾಗಿ ಹಣದ ಅಗತ್ಯವಿದ್ದರೆ, ನೀವು ಪ್ರಧಾನ್ ಮಂತ್ರಿ ಮುದ್ರಾ ಯೋಜನೆಯಡಿ 10 ಲಕ್ಷ ರೂಪಾಯಿಗಳ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಏಪ್ರಿಲ್ 2015 ರಲ್ಲಿ ಪ್ರಾರಂಭವಾಗಿದೆ.

ಇದರಲ್ಲಿ ಮೂರು ರೀತಿಯ ಸಾಲಗಳಿವೆ
ಶಿಶು ಸಾಲ: ಶಿಶು ಸಾಲ ಯೋಜನೆಯ ಅಡಿ 50,000 ರೂ. ಸಾಲ ನೀಡಲಾಗುತ್ತದೆ.
ಕಿಶೋರ್ ಸಾಲ: ಕಿಶೋರ್ ಸಾಲದ ಯೋಜನೆಯ ಅಡಿ 50,000 ರಿಂದ 5 ಲಕ್ಷದವರೆಗೆ ಸಾಲ ನೀಡಲಾಗುತ್ತದೆ.
ತರುಣ್ ಸಾಲ: ತರುಣ್ ಸಾಲ ಯೋಜನೆಯಡಿ 5 ಲಕ್ಷದಿಂದ 10 ಲಕ್ಷ ವರೆಗಿನ ಸಾಲವನ್ನು ನೀಡಲಾಗುತ್ತದೆ.

PMMY ಸಾಲ ಹೇಗೆ ಪಡೆಯಬೇಕು?
ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಸಾಲಕ್ಕಾಗಿ, ನೀವು ಸರ್ಕಾರ ಅಥವಾ ಬ್ಯಾಂಕ್ ಶಾಖೆಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸುತ್ತಿದ್ದರೆ, ನಂತರ ನೀವು ಮಾಲೀಕತ್ವ ಅಥವಾ ಬಾಡಿಗೆ ದಾಖಲೆಗಳು, ಕೆಲಸಕ್ಕೆ ಸಂಬಂಧಿಸಿದ ಮಾಹಿತಿ, ಆಧಾರ್, ಪ್ಯಾನ್ ಸಂಖ್ಯೆ ಮತ್ತು ಇತರ ಹಲವು ದಾಖಲೆಗಳನ್ನು ಒದಗಿಸಬೇಕು. ಮುದ್ರಾ ಯೋಜನೆಯ ವೆಬ್‌ಸೈಟ್‌ನಲ್ಲಿ ಸಾಲ ನೀಡುವ  ಎಲ್ಲ ಬ್ಯಾಂಕುಗಳ ವಿವರಗಳನ್ನು ನೀಡಲಾಗಿದ್ದು,  ಫಾರ್ಮ್ ಅನ್ನು ನೀವು ಆನ್‌ಲೈನ್ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ
ಸಾಲದ ಅರ್ಜಿಯನ್ನು https://www.mudra.org.in/ ವೆಬ್‌ಸೈಟ್‌ ಮೂಲಕ ಡೌನ್‌ಲೋಡ್ ಮಾಡಿ.
ಶಿಶು ಸಾಲದ ಅರ್ಜಿ ಭಿನ್ನವಾಗಿರುತ್ತದೆ. ಆದರೆ ತರುಣ್ ಮತ್ತು ಕಿಶೋರ್ ಸಾಲಕ್ಕೆ ಫಾರ್ಮ್ ಒಂದೇ ಆಗಿರುತ್ತದೆ.
ಸಾಲದ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
ಸರಿಯಾದ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಹೆಸರು, ವಿಳಾಸ ಇತ್ಯಾದಿಗಳ ಮಾಹಿತಿಯನ್ನು ಒದಗಿಸಿ.
ನೀವು ಎಲ್ಲಿ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತೀರಿ ಎಮುದರ ಮಾಹಿತಿ ನೀಡಲು ಮರೆಯದಿರಿ.
ಒಬಿಸಿ, ಎಸ್‌ಸಿ / ಎಸ್‌ಟಿ ವಿಭಾಗಗಳ ಅಡಿಯಲ್ಲಿ ಬರುವ ಅರ್ಜಿದಾರರು ಜಾತಿ ಪ್ರಮಾಣಪತ್ರ ಸಲ್ಲಿಸಬೇಕು.
2 ಪಾಸ್ಪೋರ್ಟ್ ಸೈಜ್ ಫೋಟೋಗಳನ್ನು ನೀಡಿ.
ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್‌ಗೆ ಹೋಗಿ ಉಳಿದ ಎಲ್ಲಾ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ.
ಎಲ್ಲಾ ದಾಖಲೆಗಳನ್ನು ಸಲ್ಲಿಸಿ.
ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ನಿಮ್ಮಿಂದ ಕೆಲಸದ ಬಗ್ಗೆ ಮಾಹಿತಿ ಪಡೆದು, ನೀವು ನೀಡಿದ ಮಾಹಿತಿಯ ಆಧಾರದ ಮೇಲೆ, ನಿಮ್ಮ ಪಿಎಂಎಂವೈ ಸಾಲಕ್ಕೆ ಅನುಮೋದನೆ ನೀಡುತ್ತಾರೆ.

ಅಗತ್ಯ ದಾಖಲೆಗಳು
ಗುರುತಿನ ಪ್ರಮಾಣಪತ್ರ
ನಿವಾಸದ ಪುರಾವೆ
ಯಂತ್ರೋಪಕರಣಗಳು ಇತ್ಯಾದಿ ಮಾಹಿತಿ
ಪಾಸ್ಪೋರ್ಟ್ ಗಾತ್ರದ ಫೋಟೋ
ವ್ಯಾಪಾರ ಪ್ರಮಾಣಪತ್ರ
ವ್ಯವಹಾರ ವಿಳಾಸದ ಪುರಾವೆ

ವ್ಯವಹಾರ ಮಾದರಿ
ಸ್ವಯಂ ಮಾಲೀಕ
ಪಾಲುದಾರಿಕೆ
ಸೇವಾ ವಲಯದ ಕಂಪನಿಗಳು
ಸೂಕ್ಷ್ಮ ಉದ್ಯಮ
ಅಂಗಡಿಗಳನ್ನು ದುರಸ್ತಿ ಮಾಡಿ
ಲಾರಿಗಳ ಮಾಲೀಕರು
ಆಹಾರ ಸಂಬಂಧಿತ ವ್ಯವಹಾರ
ಮಾರಾಟಗಾರ (ಹಣ್ಣುಗಳು ಮತ್ತು ತರಕಾರಿಗಳು)
ಸೂಕ್ಷ್ಮ ಉತ್ಪಾದನಾ ಸಂಸ್ಥೆಗಳು

ಬಡ್ಡಿದರಗಳು ಯಾವುವು?
ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಬಡ್ಡಿದರ ಒಂದು ಬ್ಯಾಂಕ್ ನಿಂದ ಇನ್ನೊಂದು ಬ್ಯಾಂಕ್ ಗೆ ವಿಭಿನ್ನವಾಗಿವೆ. ಅಂದರೆ, ಮುದ್ರಾ ಸಾಲಗಳಿಗೆ ವಿವಿಧ ಬ್ಯಾಂಕುಗಳು ವಿಭಿನ್ನ ಬಡ್ಡಿದರಗಳನ್ನು ವಿಧಿಸಬಹುದು. ಬಡ್ಡಿದರವು ಸಾಲಗಾರನ ವ್ಯವಹಾರದ ಸ್ವರೂಪ ಮತ್ತು ಅದಕ್ಕೆ ಸಂಬಂಧಿಸಿದ ಅಪಾಯದ ಮೇಲೆ ಅವಲಂಭಿಸಿದೆ. ಸಾಮಾನ್ಯವಾಗಿ, ಕನಿಷ್ಠ ಬಡ್ಡಿದರ ಶೇಕಡಾ 12 ರಷ್ಟಿದೆ.

Trending News