Plasma Therapy: ಕರೋನಾ ಚಿಕಿತ್ಸೆಯಿಂದ ಪ್ಲಾಸ್ಮಾ ಥೆರೆಪಿ ಕೈಬಿಟ್ಟ ಐಸಿಎಂಆರ್

ಕೆಲವು ವೈದ್ಯಕೀಯ ತಜ್ಞರು ಮತ್ತು ವಿಜ್ಞಾನಿಗಳು, ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ಕೆ. ವಿಜಯರಾಘವನ್ ದೇಶದಲ್ಲಿ ಕೋವಿಡ್ -19 ಚಿಕಿತ್ಸೆಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಅವೈಜ್ಞಾನಿಕ ಬಳಕೆ ಎಂದು ಎಚ್ಚರಿಸಿದ್ದಾರೆ.

Written by - Yashaswini V | Last Updated : May 18, 2021, 06:50 AM IST
  • ಕೋವಿಡ್ -19 ಚಿಕಿತ್ಸೆಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಅವೈಜ್ಞಾನಿಕ ಬಳಕೆ ಎಂದು ಎಚ್ಚರಿಸಿದ್ದ ವಿಜ್ಞಾನಿಗಳು
  • ಕೋವಿಡ್ -19 ರೋಗಿಗಳ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯು (Plasma Therapy) ಪರಿಣಾಮಕಾರಿ ಎಂದು ಕಂಡುಬಂದಿಲ್ಲ
  • ಈ ಹಿನ್ನಲೆಯಲ್ಲಿ ಕರೋನಾ ಚಿಕಿತ್ಸೆಯ ಮಾರ್ಗಸೂಚಿಗಳಿಂದ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ಚಿಕಿತ್ಸೆಯ ಬಳಕೆಯನ್ನು ಕೈ ಬಿಡಲಾಗಿದೆ
Plasma Therapy: ಕರೋನಾ ಚಿಕಿತ್ಸೆಯಿಂದ ಪ್ಲಾಸ್ಮಾ ಥೆರೆಪಿ ಕೈಬಿಟ್ಟ ಐಸಿಎಂಆರ್  title=
Plasma therapy withdraws from corona treatment

ನವದೆಹಲಿ: ಕೊವಿಡ್ -19 ಚಿಕಿತ್ಸೆಯ ಮಾರ್ಗಸೂಚಿಗಳನ್ನು ಸರ್ಕಾರ ಸೋಮವಾರ ಪರಿಷ್ಕರಿದ್ದು, ಕರೋನಾ ಚಿಕಿತ್ಸೆಯ ಮಾರ್ಗಸೂಚಿಗಳಿಂದ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ಚಿಕಿತ್ಸೆಯ ಬಳಕೆಯನ್ನು ತೆಗೆದುಹಾಕಿದೆ. ಕೋವಿಡ್ -19 ರೋಗಿಗಳ ಚಿಕಿತ್ಸೆಯಲ್ಲಿ, ತೀವ್ರವಾದ ಅನಾರೋಗ್ಯವನ್ನು ನಿವಾರಿಸಲು ಮತ್ತು ಸಾವಿನ ಪ್ರಕರಣಗಳನ್ನು ಕಡಿಮೆ ಮಾಡಲು ಪ್ಲಾಸ್ಮಾ ಚಿಕಿತ್ಸೆಯು ಪ್ರಯೋಜನಕಾರಿ ಎಂದು ಸಾಬೀತಾಗಿಲ್ಲ. ಈ ಹಿನ್ನಲೆಯಲ್ಲಿ ಅದನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ.

ಪ್ಲಾಸ್ಮಾ ಚಿಕಿತ್ಸೆಯು ಪರಿಣಾಮಕಾರಿಯಾಗಿಲ್ಲ:
ಕೋವಿಡ್ -19 ರೋಗಿಗಳ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯು (Plasma Therapy) ಪರಿಣಾಮಕಾರಿ ಎಂದು ಕಂಡುಬಂದಿಲ್ಲ. ಈ ಹಿನ್ನಲೆಯಲ್ಲಿ ಕೋವಿಡ್ -19 ಗಾಗಿ ಸ್ಥಾಪಿಸಲಾದ ರಾಷ್ಟ್ರೀಯ ಕಾರ್ಯಪಡೆ-ಐಸಿಎಂಆರ್ (ICMR)ನ ಕಳೆದ ವಾರ ನಡೆದ ಸಭೆಯಲ್ಲಿ, ಎಲ್ಲಾ ಸದಸ್ಯರು ಕರೋನಾದ ಚಿಕಿತ್ಸೆಯ ಮಾರ್ಗಸೂಚಿಗಳಿಂದ ಪ್ಲಾಸ್ಮಾ ಥೆರಪಿಯನ್ನು ತೆಗೆದುಹಾಕಲು ಒಪ್ಪಿಕೊಂಡರು, ನಂತರ ಸರ್ಕಾರದ ನಿರ್ಧಾರ ಹೊರಬಿದ್ದಿದೆ.

ಇದನ್ನೂ ಓದಿ- Black Fungus : ಬ್ಲ್ಯಾಕ್ ಫಂಗಸ್ ಬಗ್ಗೆ 'ಶಾಕಿಂಗ್' ಹೇಳಿಕೆ ನೀಡಿದ ಸಚಿವ ಸುಧಾಕರ್..!

ಆರಂಭದಲ್ಲಿ ಎಚ್ಚರಿಕೆ ನೀಡಿದ್ದ ವೈದ್ಯಕೀಯ ತಜ್ಞರು :
ಕೋವಿಡ್ -19 ರೋಗಿಗಳಿಗೆ ಕರೋನಾ ಚಿಕಿತ್ಸೆಯ (Corona Treatment) ಮಾರ್ಗಸೂಚಿಗಳನ್ನು ತಿದ್ದುಪಡಿ ಮಾಡುವ ಮೂಲಕ ಕರೋನಾ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ತೆಗೆದುಹಾಕಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ವೈದ್ಯಕೀಯ ತಜ್ಞರು ಮತ್ತು ವಿಜ್ಞಾನಿಗಳು, ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ಕೆ. ವಿಜಯರಾಘವನ್ ದೇಶದಲ್ಲಿ ಕೋವಿಡ್ -19 ಚಿಕಿತ್ಸೆಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಅವೈಜ್ಞಾನಿಕ ಬಳಕೆ ಎಂದು ಎಚ್ಚರಿಸಿದ್ದಾರೆ. ಪ್ಲಾಸ್ಮಾ ಚಿಕಿತ್ಸೆಯ ನಂತರವೂ ಕರೋನಾ ರೋಗಿಗಳನ್ನು ಉಳಿಸಲಾಗದಂತಹ ಅನೇಕ ಪ್ರಕರಣಗಳು ಬೆಳಕಿಗೆ ಬಂದಿರುವುದು ಗಮನಾರ್ಹವಾಗಿದೆ.

24 ಗಂಟೆಗಳಲ್ಲಿ 3 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿವೆ:
ಸೋಮವಾರ, ಭಾರತದಲ್ಲಿ ಕೋವಿಡ್ -19ನ 2,81,386 ಹೊಸ ಪ್ರಕರಣಗಳು ವರದಿಯಾಗಿವೆ. ಇದರ ನಂತರ ದೇಶದಲ್ಲಿ ಸೋಂಕಿತರ ಸಂಖ್ಯೆ 2,49,65,463 ಕ್ಕೆ ಏರಿದೆ. ಕಳೆದ 27 ದಿನಗಳಲ್ಲಿ ಇದೇ ಮೊದಲ ಬಾರಿಗೆ ಮೂರು ಲಕ್ಷಕ್ಕಿಂತ ಕಡಿಮೆ ಪ್ರಕರಣ ವರದಿಯಾಗಿದೆ. ಕಳೆದ 24 ಗಂಟೆಗಳಲ್ಲಿ 4,106 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 2,74,390 ಕ್ಕೆ ಏರಿದೆ.

ಇದನ್ನೂ ಓದಿ- Anti Covid-19 Drug 2DG Launched: Corona ವಿರುದ್ಧದ ಹೋರಾಟದಲ್ಲಿ ರೋಗಿಗಳಿಗೆ ಸಿಕ್ತು ಮತ್ತೊಂದು ಅಸ್ತ್ರ DRDO ಔಷಧಿ 2DG ಲಾಂಚ್

ಶೇ.84.51 ರಷ್ಟು ಜನರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ:
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಪ್ರಸ್ತುತ 35,16,997 ಜನರು ಕರೋನಾ ವೈರಸ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದು ಒಟ್ಟು ಪ್ರಕರಣಗಳಲ್ಲಿ ಶೇಕಡಾ 14.09 ಆಗಿದೆ. ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 2,11,74,076 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಮತ್ತು ರೋಗಿಗಳ ಚೇತರಿಕೆಯ ರಾಷ್ಟ್ರೀಯ ಪ್ರಮಾಣವು ಶೇಕಡಾ 84.81 ಆಗಿದೆ. ಅದೇ ಸಮಯದಲ್ಲಿ, ಕೋವಿಡ್ -19 ರ ಸಾವಿನ ಪ್ರಮಾಣವು ಶೇಕಡಾ 1.10 ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News