IMA Vs Baba Ramdev: PM Modiಗೆ ಪತ್ರ ಬರೆದ IMA, Baba Ramdev ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಮನವಿ

IMA Vs Baba Ramdev:ಇನ್ನೊಂದೆಡೆ ಉತ್ತರಾಖಂಡ್ ನ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ತನ್ನ ನೋಟಿಸ್ ನಲ್ಲಿ ರಾಮದೇವ್ ವತಿಯಿಂದ ಕೊವಿಡ್ 19 ಪರಿಣಾಮಕಾರಿ ಔಷಧಿ ಎಂದು ಹೇಳಿಕೊಳ್ಳಲಾಗುತ್ತಿರುವ ಅವರ ಅವರ ಕೊರೋನಿಲ್ ಕಿಟ್ ಗೆ ಸಂಬಂಧಿಸಿದಂತೆ ಭ್ರಾಂತಿ ಹುಟ್ಟಿಸುವ ಜಾಹೀರಾತನ್ನು ತೆಗೆದುಹಾಕಿಸಲು ಮನವಿ ಮಾಡಿದೆ.

Written by - Nitin Tabib | Last Updated : May 26, 2021, 07:28 PM IST
  • ಬಾಬಾ ರಾಮ್ದೇವ್ ವಿರುದ್ಧ ಪ್ರಧಾನಿ ಮೋದಿಗೆ ಪತ್ರ ಬರೆದ IMA.
  • ರಾಮ್ದೇವ್ ಅವರನ್ನು ದೇಶದ್ರೋಹಿ ಎಂದು ಘೋಷಿಸಲು ಆಗ್ರಹ,
  • ಮುಂದಿನ 15 ದಿನಗಳೊಳಗೆ ರಾಮ್ದೇವ್ ಗೆ ಲಿಖಿತ ಕ್ಷಮೆಯಾಚಿಸಲು ಆಗ್ರಹಿಸಿದ IMA.
IMA Vs Baba Ramdev: PM Modiಗೆ ಪತ್ರ ಬರೆದ IMA, Baba Ramdev ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಮನವಿ title=
IMA vs Ramdev (File Photo)

ನವದೆಹಲಿ: IMA Vs Baba Ramdev - ಕರೋನಾ ಲಸಿಕೆ ಬಗ್ಗೆ ಯೋಗ ಗುರು ರಾಮದೇವ್ ತಪ್ಪು ಮಾಹಿತಿ ಹರಡಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ (IMA) ಆರೋಪಿಸಿದೆ. ರಾಮದೇವ್ ವಿರುದ್ಧ ದೇಶದ್ರೋಹ ಪ್ರಕರಣವನ್ನು ನೋಂದಾಯಿಸುವಂತೆ ಒತ್ತಾಯಿಸಿ IMA ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಪತ್ರ ಬರೆದಿದೆ. ತನ್ನ ಪತ್ರದಲ್ಲಿ ಉಲ್ಲೇಖಿಸಿರುವ ಐಎಂಎ, 'ಒಂದು ವೀಡಿಯೊದಲ್ಲಿ, ಕೊರೊನಾ ಲಸಿಕೆಯ ಎರಡೂ ಪ್ರಮಾಣವನ್ನು ತೆಗೆದುಕೊಂಡರೂ 10,000 ವೈದ್ಯರು ಮತ್ತು ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ ಎಂದು ಅವರು (Ramdev)ಹೇಳಿದ್ದಾರೆ' ಎಂದು ಆರೋಪಿಸಿದೆ. ಆದ್ದರಿಂದ ದೇಶದ್ರೋಹದ ಆರೋಪದ ಮೇಲೆ ರಾಮದೇವ್ ವಿರುದ್ಧ ಕ್ರಮ ಕೈಗೊಳ್ಳಬೇಕು ಅದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದೆ.

ಇನ್ನೊಂದೆಡೆ ಉತ್ತರಾಖಂಡ್ ನ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಅಲೋಪತಿ ಹಾಗೂ ಅಲೋಪತಿ ವೈದ್ಯರ ವಿರುದ್ದ ಅವಮಾನಕರ ಟಿಪ್ಪಣಿ ಮಾಡಿದ ಹಿನ್ನೆಲೆ ಮಾನಹಾನಿಯ ನೋಟಿಸ್ (Defamation Notice) ಕೂಡ ರವಾನಿಸಿದೆ. ಮುಂದಿನ 15 ದಿನಗಳ ಒಳಗೆ ತಪ್ಪೊಪ್ಪಿಕೊಂಡು ಕ್ಷಮೆ ಕೇಳದಿದ್ದರೆ, 1000 ಕೋಟಿ ರೂ. ಮಾನಹಾನಿ ಪರಿಹಾರ ನೀಡಲು ಸಿದ್ಧರಾಗಿರುವುದಾಗಿ ಹೇಳಿದೆ.

15 ದಿನಗಳ ಒಳಗೆ 'ಲಿಖಿತ ತಪ್ಪೊಪ್ಪಿಗೆ'ಯ ಬೇಡಿಕೆ 
IMA (ಉತ್ತರಾಖಂಡ) ಕಾರ್ಯದರ್ಶಿ ಅಜಯ್ ಖನ್ನಾ ನೀಡಿದ ಆರು ಪುಟಗಳ ನೋಟಿಸ್‌ನಲ್ಲಿ, ಅವರ ವಕೀಲ ನೀರಜ್ ಪಾಂಡೆ, ರಾಮದೇವ್ ಅವರ ಹೇಳಿಕೆಗಳನ್ನು ಅಲೋಪತಿ ಮತ್ತು ಅಲೋಪತಿ ಸಂಘಕ್ಕೆ ಸಂಬಂಧಿಸಿದ ಸುಮಾರು 2000 ವೈದ್ಯರ ಪ್ರತಿಷ್ಠೆ ಮತ್ತು ಚಿತ್ರಣವನ್ನು  ಹಾಳುಮಾಡಿದೆ ಎಂದಿದ್ದಾರೆ. ಐಪಿಸಿಯ ಸೆಕ್ಷನ್ 499 ರ ಅಡಿಯಲ್ಲಿ ಯೋಗ ಗುರುಗಳ ಅಭಿಪ್ರಾಯವನ್ನು 'ಕ್ರಿಮಿನಲ್ ಆಕ್ಷನ್' ಎಂದು ವಿವರಿಸಿ, ನೋಟಿಸ್ ನೀಡಿದ 15 ದಿನಗಳೊಳಗೆ ರಾಮದೇವ್ 'ಲಿಖಿತ ಕ್ಷಮೆಯಾಚಿಸಬೇಕು' ಎಂದು ಕೋರಿದ್ದಾರೆ. ಒಂದು ವೇಳೆ ರಾಮದೇವ್ (Yog Guru Ramdev) ಕ್ಷಮೆಯಾಚಿಸದೆ ಹೋದಲ್ಲಿ IMA ಪ್ರತಿ ಸದಸ್ಯರಿಗೆ 50 ಲಕ್ಷ ರೂ. ಲೆಕ್ಕದಲ್ಲಿ 1000 ಕೋಟಿ ರೂ. ಪರಿಹಾರ ನೀಡಬೇಕು ಎಂದು ಕೋರಲಾಗಿದೆ.

ಇದನ್ನೂ ಓದಿ-ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಯಾಸ್ ಚಂಡಮಾರುತದ ಆರ್ಭಟ

ಕ್ಷಮೆ ಕೊರದೆ ಹೋದಲ್ಲಿ FIR
ರಾಮದೇವ್ ಅವರು ತಮ್ಮ ಎಲ್ಲಾ ಸುಳ್ಳು ಆರೋಪಗಳು ಹಾಗೂ ಅವಹೇಳನಕಾರಿ ಹೇಳಿಕೆಗಳ ವಿಡಿಯೋ ತುಣುಕೊಂದನ್ನು ತಯಾರಿಸಬೇಕು. ಈ ವಿಡಿಯೋ ತುಣುಕನ್ನು, ತಾವು ಆರೋಪಮಾಡಿ ಹಂಚಿಕೊಂಡ ಸಾಮಾಹಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ಹಂಚಿಕೊಳ್ಳಬೇಕು ಎಂದು Uttarakhand IMA ಆಗ್ರಹಿಸಿದೆ. ಇನ್ನೊಂದೆಡೆ ಕೊವಿಡ್ 19 (Covid-19) ವಿರುದ್ಧ ಪ್ರಭಾವಿ ಔಷಧಿ ಎಂದು ಪ್ರಚಾರಪಡಿಸಲಾಗಿರುವ ರಾಮದೇವ್ ಅವರ ಸಂಸ್ಥೆಯ ಉತ್ಪನ್ನ ಕೊರೋನಿಲ್ ಕಿಟ್ ಗೆ ಸಂಬಂಧಿಸಿದಂತೆ ಭ್ರಾಂತಿ ಹುಟ್ಟಿಸುವ ಜಾಹೀರಾತುಗಳನ್ನು ಕೂಡ ತೆಗೆದುಹಾಕಲು ನೋಟಿಸ್ ನಲ್ಲಿ ಹೇಳಲಾಗಿದೆ. ನೋಟಿಸ್ ಪ್ರಕಾರ, ಹೀಗೆ ಮಾಡದೆ ಹೋದಲ್ಲಿ IAM ಯೋಗಗುರು ವಿರುದ್ಧ FIR ಹಾಗೂ ಒಂದು ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಹೇಳಿದೆ.

ಇದನ್ನೂ ಓದಿ-Cyclone Yaas : ಒಡಿಶಾ, ಪಶ್ಚಿಮ ಬಂಗಾಳದಲ್ಲಿ ನಗರಗಳಿಗೆ ನುಗ್ಗಿದ ನೀರು, ರಕ್ಷಣಾ ಕಾರ್ಯದಲ್ಲಿ ಸೇನೆ

'ಇಡೀ ದೇಶವನ್ನು christianityಗೆ ಪರಿವರ್ತಿಸುವ ಕುತಂತ್ರ'
ಇನ್ನೊಂದೆಡೆ ರಾಮದೇವ್ ಆಪ್ತರಾಗಿರುವ ಆಚಾರ್ಯ ಬಾಲಕೃಷ್ಣ ಇದೊಂದು ಕುತಂತ್ರ ಎಂದು ಹೇಳಿದ್ದು, IMA ಸಂಘಟನೆಯ ಅಡಿ ಅಲೋಪತಿ ವೈದ್ಯರ ಮೂಲಕ ರಾಮದೇವ್ ಅವರನ್ನು ಗುರಿಯಾಗಿಸಿ ಆಯುರ್ವೇದದ ಮೇಲೆ ಗುರಿಸಾಧಿಸಲಾಗುತ್ತಿದೆ ಎಂದಿದ್ದಾರೆ. ಈ ಕುರಿತು ಸೋಮವಾರ ಟ್ವೀಟ್ ಮಾಡಿರುವ ಆಚಾರಿ ಬಾಲಕೃಷ್ಣ, ಇಡೀ ದೇಶವನ್ನು christianity ಗೆ ಪರಿವರ್ತಿಸುವ ಹುನ್ನಾರದ ಅಡಿ ರಾಮದೇವ್ ಅವರನ್ನು ಗುರಿಯಾಗಿಸಿ, ಯೋಗ ಹಾಗೂ ಆಯುರ್ವೇದಕ್ಕೆ ಮಸಿಬಳೆಯುವ ಕೆಲಸ ನಡೆಯುತ್ತಿದೆ ಎಂದಿದ್ದಾರೆ. ಇದಲ್ಲದೆ, 'ಈಗಲಾದರೂ ಎಚ್ಚೆತ್ತುಕೊಳ್ಳಿ ದೇಶದ ನಿವಾಸಿಗಳೆ, ಇಲ್ಲದೆ ಹೋದಲ್ಲಿ ಮುಂಬರುವ ಪೀಳಿಗೆ ನಿಮ್ಮನ್ನು ಎಂದಿಗೂ ಕ್ಷಮಿಸುವುದಿಲ್ಲ' ಎಂದು ಹೇಳಿದ್ದಾರೆ.

ಇದನ್ನೂ ಓದಿ- Cyclone Yaas: ಒಡಿಶಾ, ಬಂಗಾಳದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಇಲ್ಲಿದೆ Video

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News