COVID-19: Hydroxychloroquine ಮೇಲಿನ ರಫ್ತು ನಿಷೇಧವನ್ನು ಭಾಗಶಃ ಹಿಂಪಡೆದ ಭಾರತ

ಕೊರೊನಾವೈರಸ್ COVID-19 ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಔಷಧ ಎಂದು ಕರೆಯಲ್ಪಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮೇಲಿನ ನಿಷೇಧವನ್ನು ಭಾರತ ಸರ್ಕಾರ ಭಾಗಶಃ ತೆಗೆದುಹಾಕಿದೆ.

Last Updated : Apr 7, 2020, 12:17 PM IST
COVID-19: Hydroxychloroquine ಮೇಲಿನ ರಫ್ತು ನಿಷೇಧವನ್ನು ಭಾಗಶಃ ಹಿಂಪಡೆದ ಭಾರತ title=

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಾಯದ ಮೇರೆಗೆ   ಕರೋನಾವೈರಸ್ (Coronavirus) COVID-19 ವಿರುದ್ಧದ ಹೋರಾಟದಲ್ಲಿ ಗೇಮ್ ಚೇಂಜರ್ ಔಷಧ ಎಂದು ಕರೆಯಲ್ಪಡುವ ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ರಫ್ತು ಮೇಲಿನ ನಿಷೇಧವನ್ನು ಭಾರತ ಸರ್ಕಾರ ಭಾಗಶಃ ತೆಗೆದುಹಾಕಿದೆ.

ದೇಶೀಯ ಅವಶ್ಯಕತೆಗಳನ್ನು ಪೂರೈಸಿದ ನಂತರವಷ್ಟೇ ಬೇಡಿಕೆಗೆ ಅನುಗುಣವಾಗಿ  ಬೇರೆ ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ಅನ್ನು ರಫ್ತು ಮಾಡಲಾಗುವುದು ಎಂದು ಝೀ ಮೀಡಿಯಾಕ್ಕೆ ತಿಳಿದುಬಂದಿದೆ.

COVID-19 ಸಂಬಂಧಿತ ಪರಿಸ್ಥಿತಿಗೆ ಅನುಗುಣವಾಗಿ ಹಂಚಿಕೆಗಳ ಬಗ್ಗೆ ಆಯಾ ದೇಶದ ಔಷಧ ಇಲಾಖೆ ಮತ್ತು ವಿದೇಶಾಂಗ ಸಚಿವಾಲಯಗಳು ನಿರ್ಧರಿಸುತ್ತವೆ. ಅದೇ ರೀತಿ ಭಾರತವೂ ಕೂಡ ತನ್ನ ಪರಿಸ್ಥಿತಿಗನುಗುಣವಾಗಿ ರಫ್ತು ಮಾಡುವುದನ್ನು ಮತ್ತು ರಫ್ತು ಮಾಡಬೇಕಾದ ಪ್ರಮಾಣವನ್ನು ನಿರ್ಧರಿಸಲಿದೆ.

ಏಪ್ರಿಲ್ 4 ರಂದು ಹೊರಡಿಸಿದ ಆದೇಶದಲ್ಲಿ, ಭಾರತದ ವಿದೇಶಾಂಗ ವಾಣಿಜ್ಯ ನಿರ್ದೇಶನಾಲಯವು ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್‌ನಿಂದ ತಯಾರಿಸಿದ ಇತರೆ ಔಷಧಿಗಳನ್ನು ನಿಷೇಧಿಸಿತ್ತು. COVID-19 ವಿರುದ್ಧ ಹೋರಾಡಲು ಮಲೇರಿಯಾ ವಿರೋಧಿ ಔಷಧವಾದ ಹೈಡ್ರಾಕ್ಸಿಕ್ಲೋರೋಕ್ವಿನ್ಗಾಗಿ ಭಾರತಕ್ಕೆ 30 ದೇಶಗಳಿಂದ ಬೇಡಿಕೆಗಳು ಬಂದಿವೆ. ಹಲವಾರು ವಿಶ್ವ ನಾಯಕರು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆಸಿದ ದೂರವಾಣಿ ಸಂಭಾಷಣೆಯ ವೇಳೆ ವೈಯಕ್ತಿಕವಾಗಿ ಕೂಡ ಇಂಥ ವಿನಂತಿಯನ್ನು ಮಾಡಿಕೊಂಡಿದ್ದಾರೆ. ಲ್ಯಾಟಿನ್ ಅಮೆರಿಕದಿಂದ ಯುರೋಪ್ ವರೆಗೆ ಹಲವು ದೇಶಗಳಿಂದ ಈ ಔಷಧಿಗಾಗಿ ಬೇಡಿಕೆ ಹೆಚ್ಚಿದೆ. ಈ ಔಷಧಿಗೆ ಸಂಬಂಧಿಸಿದಂತೆ ಭಾರತಕ್ಕೆ ಕೊಲ್ಲಿ ರಾಷ್ಟ್ರಗಳಿಂದಲೂ ಬೇಡಿಕೆ ಬಂದಿವೆ.

ಏಪ್ರಿಲ್ 6ರಂದು ಭಾರತ ಸರ್ಕಾರವು ಸಕ್ರಿಯ ಔಷಧೀಯ ಪದಾರ್ಥಗಳ (ಎಪಿಐ) ರಫ್ತು ನೀತಿ ಮತ್ತು ಈ ಎಪಿಐಗಳಿಂದ ತಯಾರಿಸಿದ ಸೂತ್ರೀಕರಣಗಳನ್ನು ಉಚಿತ ವರ್ಗಕ್ಕೆ ನಿರ್ಬಂಧಿಸದಂತೆ ತೆಗೆದುಹಾಕಲು ನಿರ್ಧರಿಸಿದೆ.

COVID-19 ಕರೋನವೈರಸ್ ಚಿಕಿತ್ಸೆಯಲ್ಲಿ ಬಳಸಲ್ಪಡುವ ಮಲೇರಿಯಾ ವಿರೋಧಿ ಔಷಧವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಅಮೆರಿಕಕ್ಕೆ ರಫ್ತು ಮಾಡದಿದ್ದರೆ ವಾಷಿಂಗ್ಟನ್ ಭಾರತದ ವಿರುದ್ಧ ಪ್ರತೀಕಾರಕ್ಕೆ ಮುಂದಾಗಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಏಪ್ರಿಲ್ 6ರಂದು ಎಚ್ಚರಿಸಿದ್ದಾರೆ. ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಭಾರತ ನಮಗೆ ಔಷಧಿಯನ್ನು ಒದಗಿಸದಿದ್ದರೆ ಅದೊಂದು ಅಚ್ಚರಿಯ ಸಂಗತಿ. ಏಕೆಂದರೆ ಭಾರತವು ಅಮೆರಿಕದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.

"ಒಂದೊಮ್ಮೆ ಇದು ಪ್ರಧಾನಿ ನರೇಂದ್ರ ಮೋದಿ ನಿರ್ಧಾರವಾಗಿದ್ದರೆ ನನಗೆ ಆಶ್ಚರ್ಯವಾಗುತ್ತದೆ. ಅವರು ಅದನ್ನು ನನಗೆ ಹೇಳಬೇಕಾಗಿತ್ತು. ನಾನು ಭಾನುವಾರ ಬೆಳಿಗ್ಗೆ ಅವರೊಂದಿಗೆ ಮಾತನಾಡಿದೆ.  ಔಷಧಿ ಪೂರೈಕೆಗೆ ನೀವು ಅವಕಾಶ ನೀಡಿದ್ದನ್ನು ನಾವು ಪ್ರಶಂಸಿಸುತ್ತೇವೆ ಎಂದಿದ್ದರು. ಆದರೆ ಈಗ ಔಷಧಿ ರಫ್ತು ನಿಷೇಧಿಸಿದರೆ ಇದು ಭಾರತದ ಪ್ರತೀಕಾರವಲ್ಲದೆ ಮತ್ತೇನು" ಎಂದು ಟ್ರಂಪ್ ಅನುಮಾನದ ಮಾತುಗಳನ್ನಾಡಿದ್ದಾರೆ.
 

Trending News