ಕಾನ್ಪುರ್ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವನ್ನು ವಿರೋಧಿಸಿ, ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿ ಲೀಟರ್‌ಗೆ 12 ರೂ.ಗೆ ಪೆಟ್ರೋಲ್ ವಿತರಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.ಕಾನ್ಪುರ್ ನ ಕಲ್ಯಾಣಪುರದಲ್ಲಿ ಪೆಟ್ರೋಲ್ ಪಂಪ್ 12 ರೂ.ಗೆ ಲೀಟರ್ ಪೆಟ್ರೋಲ್ ನೀಡುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ, ಪೆಟ್ರೋಲ್ ಭಾರಿಸಿಕೊಳ್ಳಲು ಸಾರ್ವಜನಿಕರ ದಂಡೆ ಹರಿದುಬಂದಿದೆ. ಈ ವೇಳೆ ಪ್ರತಿಭಟನೆ ನಡೆಸುವ ಭರದಲ್ಲಿ ಇಂಟಕ್ ಕಾರ್ಯಕರ್ತರೂ ಸೇರಿದಂತೆ ಸಾರ್ವಜನಿಕರೂ ಕೂಡ ಸಾಮಾಜಿಕ ಅಂತರ ನಿಯಮವನ್ನು ಅನುಸರಿಸಲು ಮರೆತಿದ್ದಾರೆ. ಹೀಗಾಗಿ ಐಎನ್‌ಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ಸೇರಿದಂತೆ 20 ರಿಂದ 25 ಜನರ ವಿರುದ್ಧ ಕಲ್ಯಾಣಪುರ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ವಿರುದ್ಧ ಪ್ರತಿಭಟಿಸಲು ಐಎನ್‌ಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ವಿಜಯ್ ಮಾರ್ಟೋಲಿಯಾ ಅವರ ನೇತೃತ್ವದಲ್ಲಿ ಕಲ್ಯಾನ್‌ಪುರದ ಬ್ರಹ್ಮದೇವ್ ಅಡ್ಡರಸ್ತೆಯಲ್ಲಿ ಬುಧವಾರ ವಿಶಿಷ್ಟ ಪ್ರತಿಭಟನೆ ನಡೆಸಲಾಗಿದೆ. ಐಎನ್‌ಟಿಯುಸಿ ಕಾರ್ಯಕರ್ತರು ಪೆಟ್ರೋಲ್ ಪಂಪ್‌ನಲ್ಲಿ 12 ರೂ.ಗೆ ಲೀಟರ್ ಪೆಟ್ರೋಲ್ ವಿತರಿಸಲಾಗುವುದು ಎಂದು ಬ್ಯಾನರ್ ಹಾಕುವ ಮೂಲಕ ಪ್ರತಿಭಟನೆಗೆ ಇಳಿದಿದ್ದಾರೆ. ಇದರ ನಂತರ, ಪೆಟ್ರೋಲ್ ತುಂಬಿಸಿಕೊಳ್ಳಲು ಅಲ್ಲಿ ಗ್ರಾಹಕರ ದಂಡೆ ಬಂದು ತಲುಪಿದೆ. ಕೇವಲ ಒಂದು ಗಂಟೆಗಾಗಿ ಪ್ರತಿ ಲೀಟರ್ ಪೆಟ್ರೋಲ್ ರೂ.12ಕ್ಕೆ ಎಂಬ ಕಾರ್ಯಕ್ರಮ ನಡೆಸಲಾಗಿದೆ. ಇದರ ಲಾಭ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಪೆಟ್ರೋಲ್ ಪಂಪ್ ಗೆ ತಲುಪಿದ್ದಾರೆ.
ಮಹಾಮಾರಿ ಕಾಯ್ದೆಯ ಅಡಿ ಪ್ರಕರಣ ದಾಖಲು
ಸದ್ಯ ಮಹಾಮಾರಿ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಹಾಗೂ ಅನುಮತಿ ಇಲ್ಲದೆ ಪ್ರದರ್ಶನ ನಡೆಸಿದ್ದಕ್ಕಾಗಿ ಕಲ್ಯಾಣ್ ಪುರ ಪೊಲೀಸರು ಇಂಟಾಕ್‌ನ ರಾಷ್ಟ್ರೀಯ ಉಪಾಧ್ಯಕ್ಷ ವಿಜಯ್ ಮಾರ್ಟೋಲಿಯಾ ಸೇರಿದಂತೆ ಸುಮಾರು 20 ರಿಂದ 25 ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದೇ ವೇಳೆ ಈ ಕುರಿತು ಹೇಳಿಕೆ ನೆಇರುವ ಇಂಟಕ್, FIR ಹಾಗೂ ಪೊಲೀಸರ ಭಯ ತೋರಿಸುವ ಸರ್ಕಾರದ ಎದುರು ನಾವು ತಲೆಬಾಹುವುದಿಲ್ಲ. ನಾವು ಜನಸಾಮಾನ್ಯರು ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತೇವೆ. ಇದಕ್ಕಾಗಿ ಸರ್ಕಾರ ಯಾವ ಶಿಕ್ಷೆ ಬೇಕಾದರೂ ನೀಡಬಹುದು. ಆದರೆ, ನಾವು ಇದೆ ರೀತಿ ಸಮಾಜದ ಹಿತದೃಷ್ಟಿಯಿಂದ ನಮ್ಮ ಧ್ವನಿ ಎತ್ತುತ್ತಲೇ ಇರುತ್ತೇವೆ ಎಂದು ಹೇಳಿದೆ.