Jobs In Koo - ದೇಶೀಯ ಮೈಕ್ರೋಬ್ಲಾಗಿಂಗ್ ವೇದಿಕೆ 'ಕೂ' (Koo App) ಮುಂದಿನ ಒಂದು ವರ್ಷದಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯನ್ನು 500 ಕ್ಕೆ ಹೆಚ್ಚಿಸಲಿದೆ. ಇದಕ್ಕಾಗಿ, ಕಂಪನಿಯು ಎಂಜಿನಿಯರಿಂಗ್, ಉತ್ಪನ್ನ ಮತ್ತು ಸಮುದಾಯ ನಿರ್ವಹಣಾ ತಂಡಗಳಲ್ಲಿ ನೇಮಕ ಮಾಡಲು ಯೋಜಿಸುತ್ತಿದೆ. ಟ್ವಿಟರ್ನ (Twitter) ಮುಖ್ಯ ಪ್ರತಿಸ್ಪರ್ಧಿ ಕು, ಇತ್ತೀಚೆಗೆ 10 ಮಿಲಿಯನ್ ಬಳಕೆದಾರರನ್ನು ಮುಟ್ಟುವ ಮೂಲಕ ಉತ್ತಮ ಬೆಳವಣಿಗೆಯನ್ನು ದಾಖಲಿಸಿದೆ. ಕಂಪನಿಯು ಪ್ರಸ್ತುತ ತನ್ನ ವೇತನ ಪಟ್ಟಿಯಲ್ಲಿ 200 ಉದ್ಯೋಗಿಗಳನ್ನು ಹೊಂದಿದೆ.
ಈ ಕುರಿತು ಹೇಳಿಕೆ ನೀಡಿರುವ ಕೂ (Koo) ಸಂಸ್ಥಾಪಕ ಅಪ್ರಮೆಯ್ ರಾಧಾಕೃಷ್ಣ , "ಕಂಪನಿಯು ಪ್ರಸ್ತುತ 200 ಉದ್ಯೋಗಿಗಳನ್ನು (Job Opportunity) ಹೊಂದಿದೆ. ಎಂಜಿನಿಯರಿಂಗ್, ಉತ್ಪನ್ನ ಮತ್ತು ಸಮುದಾಯ ನಿರ್ವಹಣೆಯಂತಹ ವಿಭಾಗಗಳಲ್ಲಿ ಹೊಸ ನೇಮಕಾತಿಯೊಂದಿಗೆ, ಮುಂದಿನ ಒಂದು ವರ್ಷದಲ್ಲಿ ಕಾರ್ಯಪಡೆಯು 500 ಕ್ಕೆ ತಲುಪುವ ಗುರಿ ಹೊಂದಲಾಗಿದೆ" ಎಂದಿದ್ದಾರೆ.
ಈ ವಿಭಾಗಗಳಲ್ಲಿಯೂ ಕೂಡ ನೇಮಕಾತಿ ನಡೆಯಲಿದೆ
ಇದರ ಹೊರತಾಗಿ, ಸಾಮಾಜಿಕ ಮಾಧ್ಯಮ ಕಂಪನಿ ಕು ಗವರ್ನಮೆಂಟ್ ರಿಲೇಶನ್ಸ್ ಮತ್ತು ಮಾರ್ಕೆಟಿಂಗ್, ಬ್ರಾಂಡ್ ಮಾರ್ಕೆಟಿಂಗ್ ನಂತಹ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಆದರೆ ಇವುಗಳು ಸಣ್ಣ ತಂಡಗಳನ್ನು ಒಳಗೊಂಡಿರುತ್ತವೆ. ಈ ಬಗ್ಗೆ ಮಾತನಾಡಿರುವ ರಾಧಾಕೃಷ್ಣ, "ನಾವು ನಮ್ಮಲ್ಲಿ ಕೆಲಸ ಮಾಡಲು ಮತ್ತು ಭಾರತೀಯ ತಂತ್ರಜ್ಞಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲ ಅತ್ಯುತ್ತಮ ಪ್ರತಿಭಾವಂತರನ್ನು ತೊಡಗಿಸಿಕೊಳ್ಳಲು ಬಯಸುತ್ತೇವೆ." ಎಂದು ಹೇಳಿದ್ದಾರೆ.
ಇದನ್ನೂ ಓದಿ-Amazon ಕಂಪನಿಯ ಈ ಸಿಕ್ರೆಟ್ ಸೈಟ್ ನಲ್ಲಿ ಎಂದಾದರು ಶಾಪಿಂಗ್ ಮಾಡಿದ್ದೀರಾ? ಅಗ್ಗದ ಬೆಲೆ ಕಂಡು ನೀವೂ ಬೆಚ್ಚಿಬೀಳುವಿರಿ
ಹಲವು ಭಾಷೆಗಳಲ್ಲಿ ಕೂ ಆಪ್ ಅನ್ನು ಬಳಸಬಹುದು
ರಾಧಾಕೃಷ್ಣ ಮತ್ತು ಮಯಾಂಕ್ ಬಿದವತ್ಕರಿಂದ ಸ್ಥಾಪಿತವಾದ ಕು ಅನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಬಳಕೆದಾರರು ತಮ್ಮ ಅನಿಸಿಕೆಯನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು ಮತ್ತು ಭಾರತೀಯ ಭಾಷೆಗಳಲ್ಲಿ ಈ ವೇದಿಕೆಗೆ ಸೇರಬಹುದು. ಕು ಅನ್ನು ಹಿಂದಿ, ತೆಲುಗು, ಬಾಂಗ್ಲಾ ಸೇರಿದಂತೆ ಇತರ ಹಲವು ಭಾಷೆಗಳಲ್ಲಿ ಬಳಸಬಹುದು.
ಟ್ವಿಟರ್ ಜೊತೆಗಿನ ಭಾರತ ಸರ್ಕಾರದ (Government Of India) ವಿವಾದ ಮತ್ತು ದೇಶೀಯ ಡಿಜಿಟಲ್ ಪ್ಲಾಟ್ಫಾರ್ಮ್ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಬೇಡಿಕೆಯ ನಡುವೆ ಕು ಭಾರತದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಭಾರತದ ಹಲವಾರು ಕೇಂದ್ರ ಮಂತ್ರಿಗಳು ಮತ್ತು ಸರ್ಕಾರಿ ಇಲಾಖೆಗಳು ಈ ಸ್ಥಳೀಯ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಅನುಮೋದಿಸಿದ ನಂತರ ಕು ಕಳೆದ ಕೆಲವು ತಿಂಗಳುಗಳಲ್ಲಿ ತನ್ನ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವನ್ನು ಕಂಡಿದೆ. ಕಂಪನಿಯ ಬಳಕೆದಾರರ ಸಂಖ್ಯೆ ಕಳೆದ ತಿಂಗಳು ಒಂದು ಕೋಟಿ ದಾಟಿದೆ. ಕಂಪನಿಯು ಮುಂದಿನ ಒಂದು ವರ್ಷದಲ್ಲಿ 10 ಕೋಟಿ ಬಳಕೆದಾರರನ್ನು ತಲುಪುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ 7 ಲಕ್ಷಕ್ಕೆ ಏರಿಕೆ? ಪೂರ್ಣ ಲೆಕ್ಕಾಚಾರ ಪರಿಶೀಲಿಸಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.