ಜೈಪುರ: ಮಹಾರಾಷ್ಟ್ರ ಸರ್ಕಾರ ರಚನೆಯ ಕುರಿತು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ಅವರು, ಮಹಾರಾಷ್ಟ್ರದ ಜನರು ನಮಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಆದೇಶ ನೀಡಿದ್ದಾರೆ ಮತ್ತು ಇದು ನಮ್ಮ ನಿರ್ಧಾರ. ಆದಾಗ್ಯೂ, ಹೈಕಮಾಂಡ್ನ ಸೂಚನೆಗಳ ಪ್ರಕಾರ ನಾವು ಮುಂದುವರಿಯುತ್ತೇವೆ. ಇಂದು ಬೆಳಿಗ್ಗೆ 10 ಗಂಟೆಗೆ ಸಭೆ ಇದೆ. ಇದರಲ್ಲಿ ಮುಂದಿನ ಕಾರ್ಯತಂತ್ರವನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
Congress leader Mallikarjun Kharge on Maharashtra govt formation: There's a meeting at 10 am today. We will proceed according to instruction from high command. But our original decision & decision of the people is that we should sit in opposition, that is the present position. pic.twitter.com/9Z6YLBTI7m
— ANI (@ANI) November 11, 2019
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಯ ಅಧಿಕೃತ ನಿರಾಕರಣೆಯ ನಂತರ, ರಾಜ್ಯದಲ್ಲಿ ಹೊಸ ರಾಜಕೀಯ ಪರಿಸ್ಥಿತಿ ಉದ್ಭವಿಸುತ್ತಿದೆ. ಅಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಶಿವಸೇನೆ-ಎನ್ಸಿಪಿ (ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ) ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ. ಜೈಪುರದಲ್ಲಿ ನಡೆದ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಲಾಯಿತು.
ಷರತ್ತು ಬದ್ಧ ಬೆಂಬಲ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್?
ಹೆಚ್ಚಿನ ಶಾಸಕರು ಸೇನೆಯ ನೇತೃತ್ವದ ಸರ್ಕಾರವನ್ನು ಷರತ್ತುಗಳೊಂದಿಗೆ ಬೆಂಬಲಿಸುವ ಪರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ರಾಜ್ಯ ಉಸ್ತುವಾರಿ ಮಲ್ಲಿಕಾರ್ಜುನ್ ಖರ್ಗೆ ಶೀಘ್ರದಲ್ಲೇ ಸೋನಿಯಾ ಗಾಂಧಿಯವರಿಗೆ ರಾಜಕೀಯ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಿದ್ದಾರೆ. ಕುದುರೆ ವ್ಯಾಪಾರದ ಭಯದಿಂದ ಮಹಾರಾಷ್ಟ್ರದ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಶಾಸಕರು ದೆಹಲಿ-ಜೈಪುರ ಹೆದ್ದಾರಿಯಲ್ಲಿರುವ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದಾರೆ.
ಮಹಾರಾಷ್ಟ್ರದ ಶಾಸಕರ ಸಂಖ್ಯೆ:
ಹೊಸದಾಗಿ ಚುನಾಯಿತವಾದ ಮಹಾರಾಷ್ಟ್ರ ವಿಧಾನಸಭೆಯಲ್ಲಿ 105 ಶಾಸಕರನ್ನು ಹೊಂದಿರುವ ಬಿಜೆಪಿ ದೊಡ್ಡ ಪಕ್ಷವಾಗಿದೆ. ಶಿವಸೇನೆ 56 ಶಾಸಕರನ್ನು ಹೊಂದಿದ್ದರೆ, ಎನ್ಸಿಪಿ 54 ಮತ್ತು ಕಾಂಗ್ರೆಸ್ 44 ಶಾಸಕರನ್ನು ಹೊಂದಿದೆ.
ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ:
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೊಬ್ಬರ ಕಾಂಗ್ರೆಸ್ ಆಪ್ತ ಮೂಲವೊಂದು, "ಸಂಭವನೀಯ ಸನ್ನಿವೇಶದಲ್ಲಿ, ಕಾಂಗ್ರೆಸ್ ಬೆಂಬಲದೊಂದಿಗೆ ಸೇನಾ-ಎನ್ಸಿಪಿ ಸರ್ಕಾರವನ್ನು ರಚಿಸಬಹುದು, ಇದರಲ್ಲಿ ಎನ್ಸಿಪಿ ಸ್ಪೀಕರ್ ಹುದ್ದೆಯನ್ನು ಅಲಂಕರಿಸಬಹುದು" ಎಂದು ಹೇಳಿದರು.
ಪವಾರ್-ಸೋನಿಯಾ ಸಭೆ:
ಮಂಗಳವಾರ ಎನ್ಸಿಪಿ ಶಾಸಕರ ಸಭೆಯ ನಂತರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಹೊರಟಿರುವ ಶರದ್ ಪವಾರ್ ಅವರ ಸಮಾಲೋಚನೆಯ ಮೇಲೆ ಕಾಂಗ್ರೆಸ್ ತಂತ್ರವು ಅವಲಂಬಿತವಾಗಿರುತ್ತದೆ.
ಕಾಂಗ್ರೆಸ್ ರಾಜ್ಯದ ಶತ್ರುವಲ್ಲ:
ಸಮನ್ವಯ ಮತ್ತು ಸಂವಾದದ ಹಾದಿಯನ್ನು ತೆರವುಗೊಳಿಸಲು ಕಾಂಗ್ರೆಸ್ ರಾಜ್ಯದ ಶತ್ರುವಲ್ಲ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಹೇಳಿದೆ.
ಹೋಟೆಲ್ಗಳಲ್ಲಿ ಬೀಡು ಬಿಟ್ಟ ಶಾಸಕರು:
ಏತನ್ಮಧ್ಯೆ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮ ಶಾಸಕರನ್ನು ಭೇಟಿಯಾಗಿ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿದರು. ಶಿವಸೇನೆಯ ಶಾಸಕರನ್ನು ಮುಂಬೈನ ಹೋಟೆಲ್ನಲ್ಲಿ ಇರಿಸಲಾಗಿದೆ.
ಶರದ್ ಪವಾರ್ ಮೇಲೆ ಕಣ್ಣು:
ಈಗ ಎಲ್ಲರ ಕಣ್ಣುಗಳು ತಮ್ಮ ಶಾಸಕರನ್ನು ಭೇಟಿಯಾಗಲಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರತ್ತ ನೆಟ್ಟಿದೆ. ಎನ್ಸಿಪಿ ನಾಯಕ ನವಾಬ್ ಮಲಿಕ್, "ನಾವು ಒಂದೇ ದಿನದಲ್ಲಿ ಈ ವಿಷಯವನ್ನು ಪರಿಗಣಿಸುತ್ತೇವೆ" ಎಂದು ಹೇಳಿದರು.
ಮಿಲಿಂದ್ ಡಿಯೋರಾ ಅವರ ಟ್ವೀಟ್:
ಕಾಂಗ್ರೆಸ್ ಹಿರಿಯ ಮುಖಂಡ ಮಿಲಿಂದ್ ದಿಯೋರಾ ಅವರು ಭಾನುವಾರ ಟ್ವೀಟ್ ಮಾಡಿದ್ದು, "ಮಹಾರಾಷ್ಟ್ರದ ರಾಜ್ಯಪಾಲರು ಸರ್ಕಾರ ರಚಿಸಲು ಎರಡನೇ ದೊಡ್ಡ ಒಕ್ಕೂಟದ ಎನ್ಸಿಪಿ-ಕಾಂಗ್ರೆಸ್ ಅನ್ನು ಆಹ್ವಾನಿಸಬೇಕು ಏಕೆಂದರೆ ಸರ್ಕಾರ ರಚಿಸಲು ಬಿಜೆಪಿ-ಶಿವಸೇನೆ ನಿರಾಕರಿಸಿದೆ" ಎಂದಿದ್ದಾರೆ.