"ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ 'ಜಾತ್ಯತೀತ' ಎಂಬ ಪದವಿದೆ. ಶಿವಸೇನೆ ಸಂವಿಧಾನವನ್ನು ಅನುಸರಿಸುತ್ತದೆ. ಎಲ್ಲಾ ರೈತರು ಮತ್ತು ಸಾಮಾನ್ಯ ಜನರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಸಹಾಯ ನೀಡಬೇಕು. ಶಿವಾಜಿ ಮಹಾರಾಜ್ ಅವರು ಎಲ್ಲಾ ಸಮುದಾಯಗಳನ್ನು ಒಟ್ಟುಗೂಡಿಸುವ ಮೂಲಕ ತಮ್ಮ ರಾಜ್ಯವನ್ನು ಮಾಡಿದರು" ಎಂದು ಶಿವಸೇನೆ ನಾಯಕ ಸಂಜಯ್ ರೌತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಮಾತುಕತೆ ಮಧ್ಯೆ, ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರೌತ್ ಅವರು ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಕಳೆದ 10-15 ದಿನಗಳಿಂದ ಜಾರಿಯಲ್ಲಿರುವ ಅಡೆತಡೆಗಳು ಬಗೆಹರಿದಿವೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ(Maharashtra) ಹೊಸ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಮುಂಬೈಯಿಂದ ದೆಹಲಿಗೆ ರಾಜಕೀಯ ಆಂದೋಲನ ತೀವ್ರಗೊಂಡಿದೆ. ಶಿವಸೇನೆ(Shiv Sena) ಮತ್ತು ಎನ್ಸಿಪಿ(NCP) ನಡುವೆ ಹೊಸ ಸರ್ಕಾರ ರಚನೆಯಲ್ಲಿ ಕಾಂಗ್ರೆಸ್(Congress) ಪಾತ್ರ ಏನು ಎಂದು ಚರ್ಚಿಸಲು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ.
ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಮಹಾರಾಷ್ಟ್ರದ(Maharashtra) ಮುಖ್ಯಮಂತ್ರಿಯಾಗಬಹುದು ಎಂದು ಮೂಲಗಳು ತಿಳಿಸಿವೆ. ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಒಪ್ಪಂದದಲ್ಲಿ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ (Ajit Pawar) ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ನೀಡುವ ನಿರೀಕ್ಷೆಯಿದ್ದು, ಜಯಂತ್ ಪಾಟೀಲ್ ಅವರಿಗೆ ಗೃಹ ಸಚಿವ ಸ್ಥಾನವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.
ಕಳೆದ 25 ವರ್ಷಗಳಿಂದ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿವೆ. ಇಂದು ಇಲ್ಲದಿದ್ದರೆ, ನಾಳೆ ಅವರು ಮತ್ತೆ ಒಂದಾಗುತ್ತಾರೆ. ಜನರು ಅವರಿಗೆ ಸರ್ಕಾರ ರಚಿಸುವ ಆದೇಶ ನೀಡಿದ್ದಾರೆ. ಆದ್ದರಿಂದ, ಅವರು ಆದಷ್ಟು ಬೇಗ ಸರ್ಕಾರ ರಚಿಸಬೇಕು ಎಂದು ಶರದ್ ಪವಾರ್ ಹೇಳಿದ್ದಾರೆ.
ಜೀ ಮೀಡಿಯಾದ ಚಾನೆಲ್ 24 ತಾಸ್ನ ಡೆಬಿಟ್ ಶೋನಲ್ಲಿ, ಕಾಕಡೆ ಅವರು ಶಿವಸೇನೆಯ 56 ಶಾಸಕರಲ್ಲಿ 45 ಮಂದಿ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರೆಲ್ಲರೂ ಬಿಜೆಪಿಗೆ ಬೆಂಬಲ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.