ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ನಾಳೆ ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ: ಸಂಜಯ್ ರೌತ್

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಮಾತುಕತೆ ಮಧ್ಯೆ, ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರೌತ್ ಅವರು ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಕಳೆದ 10-15 ದಿನಗಳಿಂದ ಜಾರಿಯಲ್ಲಿರುವ ಅಡೆತಡೆಗಳು ಬಗೆಹರಿದಿವೆ ಎಂದು ಹೇಳಿದರು.

Last Updated : Nov 20, 2019, 02:06 PM IST
ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ನಾಳೆ ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ: ಸಂಜಯ್ ರೌತ್ title=
Photo Courtesy: ANI

ನವದೆಹಲಿ: ಮಹಾರಾಷ್ಟ್ರದಲ್ಲಿ(Maharashtra Assembly Elections 2019) ಸರ್ಕಾರ ರಚಿಸಲು ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಮಾತುಕತೆ ಮಧ್ಯೆ, ಶಿವಸೇನೆ ಪಕ್ಷದ ವಕ್ತಾರ ಸಂಜಯ್ ರೌತ್ ಅವರು ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಕಳೆದ 10-15 ದಿನಗಳಿಂದ ಜಾರಿಯಲ್ಲಿರುವ ಅಡೆತಡೆಗಳು ಬಗೆಹರಿದಿವೆ. ನಾಳೆ ಮಧ್ಯಾಹ್ನ 12 ಗಂಟೆಗೆ ವೇಳೆಗೆ ಸರ್ಕಾರ ರಚನೆ ಬಗ್ಗೆ ಸಂಪೂರ್ಣ ಚಿತ್ರಣ ದೊರೆಯಲಿದೆ. ಸರ್ಕಾರಿ ರಚನೆ ಕಾರ್ಯಗಳು 5-6 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ಮೊದಲು ಜನಪ್ರಿಯ ಮತ್ತು ಶಾಶ್ವತ ಸರ್ಕಾರ ರಚನೆಯಾಗಲಿದೆ ಎಂದು ಸಂಜಯ್ ರೌತ್ ವಿಶ್ವಾಸ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ತವ್ಯಸ್ತತೆಯ ಮಧ್ಯೆ ಎನ್‌ಸಿಪಿ ಮುಖಂಡ ಶರದ್ ಪವಾರ್ ಅವರು ಇಂದು ರೈತರ ಸಮಸ್ಯೆಯ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ. ಮಹಾರಾಷ್ಟ್ರದ ರಾಜಕೀಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ಸಭೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಜಯ್ ರೌತ್, "ಒಬ್ಬ ನಾಯಕ ಪ್ರಧಾನಿಯನ್ನು ಭೇಟಿಯಾದರೆ, ಅದಕ್ಕೆ ಬೇರೆಯೇ ಅರ್ಥ ಕಲ್ಪಿಸುವ ಅಗತ್ಯವಿದೆಯೇ?" ಪ್ರಧಾನಿ ಇಡೀ ದೇಶಕ್ಕೆ ಸೇರಿದವರು. ಮಹಾರಾಷ್ಟ್ರದ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಯಾವಾಗಲೂ ರೈತರ ಬಗ್ಗೆ ಯೋಚಿಸುತ್ತಾರೆ." ಇಂದೂ ಕೂಡ ಈ ನಾಯಕ ಭೇಟಿ ಮಹಾರಾಷ್ಟ್ರ ರೈತರ ಬಗ್ಗೆಯೇ ಆಗಿದೆ ಎಂದರು.

ಸಂಸತ್ತಿನ ಒಳಗೆ ಅಥವಾ ಹೊರಗೆ ಯಾರಾದರೂ ಪ್ರಧಾನಿಯನ್ನು ಭೇಟಿ ಮಾಡಬಹುದು. ಶರದ್ ಪವಾರ್ ಕೃಷಿ ಕ್ಷೇತ್ರದಲ್ಲಿ ಪ್ರಸಿದ್ಧ ಹೆಸರು ಮಾಡಿದವರು. ಅವರು ರಾಜ್ಯದ ಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ಸಂಜಯ್ ರೌತ್ ಪ್ರತಿಕ್ರಿಯಿಸಿದರು.

ರಾಜ್ಯದ ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ತಿಳಿಸುವಂತೆ ನಾವು ಶರದ್ ಪವಾರ್ ಅವರನ್ನೂ ಕೇಳಿದ್ದೇವೆ. ಮಹಾರಾಷ್ಟ್ರಕ್ಕೆ ಸೇರಿದ ಎಲ್ಲ ಪಕ್ಷಗಳ ಸಂಸದರು ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿ ರೈತರ ಸ್ಥಿತಿಗತಿ ಬಗ್ಗೆ ಅವರಿಗೆ ಮನವರಿಕೆ ಮಾಡಲಿದ್ದಾರೆ. ರಾಜ್ಯದ ರೈತರಿಗೆ ಕೇಂದ್ರದಿಂದ ಗರಿಷ್ಠ ನೆರವು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ ಎಂದವರು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರು ಇಂದು ದೆಹಲಿಯಲ್ಲಿ ಸಭೆ ಸೇರಬಹುದು ಎಂಬುದು ಉಲ್ಲೇಖನೀಯ. ಬಿಜೆಪಿ ಇನ್ನೂ ಕೂಡ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಕಾಂಗ್ರೆಸ್-ಎನ್‌ಸಿಪಿ-ಶಿವಸೇನೆ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವ ಬಗ್ಗೆ ಅಂತಿಮ ಒಪ್ಪಂದವನ್ನು ಹೊಂದಿದೆಯೆ ಅಥವಾ ಇಲ್ಲವೇ ಎಂದು ಬಿಜೆಪಿ ಗಮನಿಸುತ್ತಿದೆ. ಅದರ ನಂತರ ಬಿಜೆಪಿ ಮುಂದಿನ ಹೆಜ್ಜೆ ಇಡಲಿದೆ ಎಂದು ನಿರೀಕ್ಷಿಸಲಾಗಿದೆ. ಮುಂಬೈನಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಶಿವಸೇನೆ ವಿರುದ್ಧ ತಮ್ಮ ಉಮೇದುವಾರಿಕೆಯನ್ನು ಕೈಬಿಡದಿರುವ ಮೂಲಕ, ಬಿಜೆಪಿ ಇನ್ನೂ ಶಿವಸೇನೆಯೊಂದಿಗೆ ಮಾತುಕತೆಗೆ ಬಾಗಿಲು ತೆರೆದಿದೆ ಎಂಬ ಸಂದೇಶ ರವಾನಿಸಿದೆ.
 

Trending News